ಯಲಬುರ್ಗಾ: ಪಟ್ಟಣದ ನಿವಾಸಿ ಹಾಗೂ ಅಸ್ಸಾಂ ರಾಜ್ಯದಲ್ಲಿ ಯೋಧರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಈಶ್ವರಗೌಡ ಮಾಲಿಪಾಟೀಲ ಎಂಬುವವರ ಮನೆ ಜಾಗಕ್ಕೆ ಸಂಬಂಧಿಸಿದಂತೆ ಪಪಂ ಸಿಬ್ಬಂದಿ ಕಾನೂನು ಗಾಳಿಗೆ ತೂರಿ ಮನ ಬಂದಂತೆ ವರ್ತಿಸುತ್ತಿದ್ದಾರೆ ಎಂಬ ದೂರುಗಳು ಕೇಳಿಬಂದಿವೆ.
ಹಣದ ಆಸೆಗೆ ನಮಗೆ ಸಂಬಂಧಿಸಿದ ಜಾಗದ ವಿಸ್ತೀರ್ಣವನ್ನು ಪಂಚಾಯತಿಯ ಮೂಲ ದಾಖಲಾತಿಯಲ್ಲಿ ನಮಗೆ ಗೊತ್ತಿಲ್ಲದಂತೆ ತಿದ್ದುಪಡಿ ಮಾಡಲಾಗಿದೆ. ನನಗೆ ಸಂಬಂಧಿಸಿದ ಜಾಗವನ್ನು ಬೇರೆಯವರಿಗೆ ಹೆಸರಿಗೆ ನೋಂದಾಯಿಸಿದ್ದಾರೆ. ಸುಮಾರು 3 ತಿಂಗಳಿಂದ ಅಲೆಯುತ್ತಿದ್ದರೂ ಯಾರೂ ಸ್ಪಂದಿಸುತ್ತಿಲ್ಲ ಎಂದು ಯೋಧನ ಕುಟುಂಬಸ್ಥರು ಆರೋಪಿಸಿದ್ದಾರೆ.
Advertisement
ಪಟ್ಟಣದ 7ನೇ ವಾರ್ಡಿನಲ್ಲಿರುವ ಆಸ್ತಿ ನಂ. 3-1-10/1 ರಲ್ಲಿ ತಮ್ಮ ಪೂರ್ವಿಕರಿಂದ ಹಾಗೂ ಹಳೆಯ ನೂಜಲು ಪ್ರಕಾರ 48 ಅಡಿ ಅಗಲ ಹಾಗೂ 70 ಅಡಿ ಉದ್ದದ ಜಾಗೆ ದಾಖಲಾತಿ ಇದೆ. ಆದರೆ ಪಪಂ ಸಿಬ್ಬಂದಿ ತಿದ್ದುಪಡಿ ಮಾಡಿ 32 ಅಡಿ ಅಗಲ ಇರಬೇಕು ಅದನ್ನು ಕೇವಲ 19 ಅಡಿ ಮಾಡಿದ್ದು ಇದರಲ್ಲಿ ಹಿರಿಯರು 16 ಅಡಿ ಜಾಗವನ್ನು ಮಾರಾಟ ಮಾಡಿದ್ದಾರೆ. ಅದರಂತೆ ಈಗ 32 ಅಡಿ ಜಾಗವಿರಬೇಕು ಅದನ್ನು ಬಿಟ್ಟು ಕೇವಲ 19 ಅಡಿ ದಾಖಲಾತಿ ಮಾಡಿದ್ದು ನಮಗೆ ತುಂಬಾ ಅನ್ಯಾಯವಾಗಿದೆ.