Advertisement

ಬೆಟ್ಟ-ಗುಡ್ಡಗಳ ನಡುವೆ ಒಂಟಿ ಮನೆ; ಮೂಲಭೂತ ಸೌಕರ್ಯವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ ಕುಟುಂಬ!

03:11 PM Jul 22, 2023 | Team Udayavani |

ಚಿಕ್ಕಮಗಳೂರು: ಸುತ್ತ ಅರಣ್ಯ, ಗುಡ್ಡ-ಬೆಟ್ಟಗಳ ಸಾಲು, ಗುಡ್ಡ ತುತ್ತ ತುದಿಯಲ್ಲಿ ಒಂಟಿ ಮನೆ ಇದು ಕಳಸ ತಾಲ್ಲೂಕಿನ ಕುದುರೆಮುಖ ರಾಷ್ಟ್ರೀಯ ಉದ್ಯಾವನದ ಭಾಗವಾಗಿರುವ ಕ್ಯಾತನಮಕ್ಕಿ ಅಬ್ಬಿಮಠ ಲಿಂಗಪ್ಪ ಎನ್ನುವವರ ಕುಟುಂಬ.

Advertisement

ಈ ಕುಟುಂಬ ಕಳೆದ 5 ದಶಕಗಳಿಂದ ವಾಸವಾಗಿದೆ. ಅರಣ್ಯ ಹಕ್ಕು ಕಾಯ್ದೆ ಅಡಿ ಮಂಜೂರಾದ ಜಮೀನಲ್ಲಿ ಲಿಂಗಪ್ಪ ಅವರ ಕುಟುಂಬ ಜೀವನ ನಡೆಸುತ್ತಿದ್ದಾರೆ.

ಇವರ ಮನೆಗೆ ಸರಿಯಾದ ರಸ್ತೆ, ವಿದ್ಯುತ್ ಸಂಪರ್ಕವಿಲ್ಲ, ಪೋನ್ ಇಲ್ಲ ಹಾಗೂ ಮೂಲಭೂತ ಸೌಕರ್ಯವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಾತ್ರವಲ್ಲದೆ ಅಗತ್ಯ ವಸ್ತುಗಳನ್ನು ತರಲು ಪಟ್ಟಣಕ್ಕೆ ಹೋಗಬೇಕಾದರೆ ಇವರು 15 ಕಿಮೀ ದೂರ ಕಾಲ್ನಡಿಗೆಯಲ್ಲಿ ಸಾಗಬೇಕು. ಸರ್ಕಾರಗಳಿಗೆ ಇವರು ಮನವಿಗಳನ್ನು ಸಲ್ಲಿಸುತ್ತಲೇ ಇದ್ದಾರೆ. ಆದರೆ ಇಲ್ಲಿಯವರೆಗೆ ಸರ್ಕಾರದಿಂದ ಪ್ರಯೋಜನ ಸಿಕ್ಕಿಲ್ಲ . ಕ್ಯಾತನಮಕ್ಕಿ ಪ್ರವಾಸಿಗರ ಅಚ್ಚುಮೆಚ್ಚಿನ ತಾಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next