Advertisement

ಮಗಳ ಮದುವೆಗೆಂದು ಬಂದಿದ್ದ ದುಬೈ ನಿವಾಸಿ ಕೇರಳದ ಪ್ರವಾಹಕ್ಕೆ ಬಲಿ

12:53 PM Aug 15, 2019 | sudhir |

ದುಬೈ: ಕೇರಳದ ಮಲ್ಲಪುರ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಪ್ರವಾಹದಲ್ಲಿ ದುಬೈನಲ್ಲಿ ನೆಲೆಸಿದ್ದ ಭಾರತೀಯ ಮೂಲಕದ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ. ಪ್ರವಾಹದಲ್ಲಿ ಸಿಲುಕಿದ್ದ ತನ್ನ ಮಗ ಹಾಗೂ ಅಳಿಯನ್ನು ರಕ್ಷಿಸುತ್ತಿದ್ದ ಸಂದರ್ಭದಲ್ಲಿ ರಝಾಕ್‌ ಅಕ್ಕಿಪರಂಭಿಲ್‌ (42) ಅವರು ನೆರೆಯ ಆರ್ಭಟಕ್ಕೆ ಬಲಿಯಾಗಿದ್ದಾರೆ.

Advertisement

ಇವರು ದುಬೈನ ಇಂಡಿಯನ್‌ ಸ್ಕೂಲ್‌ನ ಉದ್ಯೋಗಿಯಾಗಿದ್ದಾರೆ. ಪ್ರವಾಹಕ್ಕೆ ಸಿಲುಕಿದ್ದ ಪುತ್ರ ಹಾಗೂ ಆಳಿಯನ್ನು ರಕ್ಷಿಸುತ್ತಿದ್ದ ಸಂದರ್ಭ ಈ ಅವಘಡಕ್ಕೆ ತುತ್ತಾಗಿದ್ದಾರೆ. ಇವರು ರಜೆಯ ಮೇಲೆ ಊರಿಗೆ ಬಂದಿದ್ದರು ಎಂದು ತಿಳಿದುಬಂದಿದೆ.

ನೆರೆ ನೋಡಲು ಹೋಗಿದ್ದ ಮಕ್ಕಳು

ರಝಾಕ್‌ ಅವರ ದೊಡ್ಡ ಮಗಳ ಮದುವೆಯ ಶುಭ ಸಂದರ್ಭಕ್ಕೆ ಭಾರತಕ್ಕೆ ಬಂದಿದ್ದರು. ಕಳೆದ ವಾರವಷ್ಟೇ ಮದುವೆ ನಡೆದಿತ್ತು. ನೂತನ ದಂಪತಿಗಳನ್ನು ಶರೀಫ್ ಎಂಬವರು ತಮ್ಮ ಮನೆಗೆ ಆಹ್ವಾನಿಸಿದ್ದರು. ಮನೆಯಲ್ಲಿ ಊಟ ಎಲ್ಲ ಆಗಿ ಕುಳಿತು ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಭಾರೀ ಮಳೆಯ ಪರಿಣಾಮ ದೂರಲ್ಲಿದ್ದ ನೆರೆ ನೀರನ್ನು ವೀಕ್ಷಿಸಲು ಮಕ್ಕಳು ತೆರಳಿದ್ದರು. ನೆರೆಯ ನೀರು ಹೆಚ್ಚಾಗುತ್ತಿದ್ದದ್ದು ಮಕ್ಕಳ ಗಮನಕ್ಕೆ ಬಂದಿಲ್ಲ ಎನ್ನಲಾಗಿದೆ.

ಮಕ್ಕಳನ್ನು ಬಜಾವ್‌ ಮಾಡಲು ತೆರಳಿದ ವೇಳೆ ಈ ದುರ್ಘ‌ಟನೆ ನಡೆದಿದೆ. ರಝಾಕ್‌ ಅವರ ಮಗ ಹಾಗೂ ಶರೀಫ್ ಎಂಬವರ ಮಗ ಪ್ರವಾಹಕ್ಕೆ ಸಿಲುಕಿದ್ದ ಮಕ್ಕಳು.

Advertisement

ಒತ್ತಡದಲ್ಲಿದ್ದರು

ಪುತ್ರಿಯ ವಿವಾಹಕ್ಕೆ ಎಂದು ಊರಿಗೆ ಬಂದಿದ್ದ ರಝಾಕ್‌ ತೀವ್ರ ಒತ್ತಡದಲ್ಲಿದ್ದರು ಎಂದು ಶರೀಫ್ ಎಂಬವರು ತಿಳಿಸಿದ್ದಾರೆ. ಮಕ್ಕಳನ್ನು ಕಾಪಾಡುವ ವೇಳೆ ಈಜು ಬರದಿದ್ದರೂ ನೀರಿಗೆ ಹಾರಿದ್ದರು. ನೀರು ಭಾರೀ ಸೆಳೆತದಿಂದ ಕೂಡಿದ ಪರಿಣಾಮ ಕೊಚ್ಚಿಕೊಂಡು ಹೋಗಿದ್ದಾರೆ. ಊರಿಗೆ ಬಂದಿದ್ದ ಅವರಿಗೆ ರಜೆಯ ಅವಧಿ ಕಡಿಮೆ ಇತ್ತು. ರಜೆಯನ್ನು ವಿಸ್ತರಿಸುವಂತೆ ಮಾಡಲಾಗಿದ್ದರೂ ಪ್ರಯೋಜನವಾಗಿಲ್ಲ ಎಂದು ಶರೀಫ್ ಹೇಳಿದ್ದನ್ನು ಗಲ್ಫ್ ನ್ಯೂಸ್ ವರದಿ ಮಾಡಿದೆ.

ಕಳೆದ ವರ್ಷದ ಪ್ರವಾಹದಲ್ಲಿ ಇವರ ಮನೆ ಕೊಚ್ಚಿಹೋಗಿತು. ಈ ನೆರೆ ಇವರನ್ನೇ ಬಲಿ ಪಡೆದಿದೆ. ಇದೀಗ ತಮ್ಮ ಸಹೋದ್ಯೋಗಿ ರಝಾಕ್‌ ರನ್ನು ಕಳೆದುಕೊಂಡಿರುವ ಅಲ್ಲಿನ ಇಂಡಿಯನ್‌ ಸ್ಕೂಲ್‌ನ ಸಿಬಂಧಿಗಳಲ್ಲಿ ಬೇಸರ ಮನೆ ಮಾಡಿದೆ ಎಂದು ಪತ್ರಿಕೆ ವರದಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next