Advertisement

Kashmir: ಕಾಶ್ಮೀರದಲ್ಲಿ ಕಲ್ಲೆಸತ ತೀವ್ರ ಇಳಿಕೆ

10:38 PM Sep 07, 2023 | Team Udayavani |

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ 2020ರಿಂದ ಇಲ್ಲಿಯವರೆಗೆ ಕಲ್ಲೆಸತ ಪ್ರಕರಣಗಳು ಶೇ.99ರಷ್ಟು ಇಳಿಕೆಯಾಗಿದೆ. ಇದೇ ವೇಳೆ ಉಗ್ರ ಕೃತ್ಯಗಳಲ್ಲಿ ಹುತಾತ್ಮರಾದ ಯೋಧರ ಸಂಖ್ಯೆ ಶೇ.60ರಷ್ಟು ತಗ್ಗಿದೆ. ಆದರೆ ಐಇಡಿ (ಸುಧಾರಿತ ಸ್ಫೋಟ ಸಾಧನ) ಸ್ಫೋಟ ಪ್ರಕರಣಗಳು ಇನ್ನೂ ತಗ್ಗಬೇಕಿವೆ. ಕಣಿವೆ ರಾಜ್ಯವು ಅಭಿವೃದ್ಧಿ ಪಥದತ್ತ ಮುಖಮಾಡಿದೆ. ಕಾಶ್ಮೀರ ಬದಲಾಗಿದೆ ಎಂಬುದಕ್ಕೆ ಶ್ರೀನಗರದಲ್ಲಿ ಇತ್ತೀಚೆಗೆ ನಡೆದ ಜಿ20 ಸಭೆಯೇ ಸಾಕ್ಷಿ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 2019ರಲ್ಲಿ 370ನೇ ವಿಧಿ ರದ್ದುಪಡಿಸಿದ ನಂತರ ಕಣಿವೆ ರಾಜ್ಯದಲ್ಲಿ ಶಾಂತಿ ನೆಲೆಸಿದೆ.

Advertisement

ಸರ್ಕಾರದ ಮಾಹಿತಿ ಪ್ರಕಾರ, 2020ರ ಮೊದಲ ಆರು ತಿಂಗಳಲ್ಲಿ ಒಟ್ಟು 324 ಕಲ್ಲೆಸೆತ ಪ್ರಕರಣಗಳು ದಾಖಲಾಗಿವೆ. 2021ರಲ್ಲಿ ಈ ಸಂಖ್ಯೆ 179ಕ್ಕೆ ಇಳಿದಿದೆ. ಇದೇ ವೇಳೆ 2022 ಮತ್ತು 2023ರಲ್ಲಿ ಕ್ರಮವಾಗಿ 50 ಮತ್ತು 3 ಕಲ್ಲೆಸೆತ ಪ್ರಕರಣಗಳು ದಾಖಲಾಗಿವೆ. 2020ರ ಮೊದಲ ಆರು ತಿಂಗಳಲ್ಲಿ ಒಟ್ಟು 32 ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. 2023ರಲ್ಲಿ ಜೂನ್‌ ಅಂತ್ಯದ ವೇಳೆಗೆ 11 ಯೋಧರು ಹುತಾತ್ಮರಾಗಿದ್ದಾರೆ.

ಕಣಿವೆ ರಾಜ್ಯದಲ್ಲಿ 2021ರಲ್ಲಿ ಭದ್ರತಾ ಪಡೆಗಳು 63 ಕೆಜಿ ಸ್ಫೋಟಕಗಳನ್ನು ವಶಪಡಿಕೊಂಡಿವೆ. ಈ ಸಂಖ್ಯೆ 2023ರಲ್ಲಿ ಶೂನ್ಯ. ಇದೇ ವೇಳೆ 2020ರ ಜೂನ್‌ ಅಂತ್ಯದ ವೇಳೆಗೆ 266 ಗ್ರನೇಡ್‌ ದಾಳಿಗಳಾಗಿದ್ದು, 2023ರ ಇದೇ ಅವಧಿಯಲ್ಲಿ 83 ಗ್ರನೇಡ್‌ ದಾಳಿಗಳಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next