Advertisement
-ಹೀಗಂತ ಹಿರಿಯ ಸಂಶೋಧಕ ಡಾ.ಚಿದಾನಂದಮೂರ್ತಿ ತಮ್ಮ “ಹೊಸ ಬೆಳಕಿನಲ್ಲಿ ಬಸವಣ್ಣ’ ಕೃತಿಯಲ್ಲಿ ಬರೆದುಕೊಂಡಿದ್ದಾರೆ. ಇದು ಅವರ ಕ್ಷೇತ್ರಾಧ್ಯಯನ ಅದರಲ್ಲೂ ವೀರಶೈವ-ಲಿಂಗಾಯತ ವಿಚಾರಕ್ಕೆ ಸಂಬಂಧಿ ಸಿದ ಸಂಶೋಧನೆ ಎಷ್ಟರಮಟ್ಟಿಗೆ ಆಳವಾಗಿತ್ತು ಎಂಬುದಕ್ಕೆ ಇದೊಂದು ಸಣ್ಣ ಉದಾಹರಣೆ.
Related Articles
Advertisement
“ಚಿದಾನಂದಮೂರ್ತಿ (ಚಿಮೂ) ನಾಡಿನ ಸಂಶೋಧಕರ ಸಾಲಿನಲ್ಲಿ ಅಗ್ರಮಾನ್ಯರ ಸಾಲಿ ನಲ್ಲಿ ನಿಲ್ಲುವ ಸಂಶೋಧಕ. ನಾನು ಅವರ ಪ್ರಿಯ ಶಿಷ್ಯ ಕೂಡ. ಹಾಗೂ ಅವರು ನಡೆಸಿದ ಸಂಶೋಧನೆ ಬಗೆಗೆ ನನಗೆ ದೊಡ್ಡ ಗೌರವ ಇದೆ,’ ಎಂದು ಚಿಮೂ ಅವರ ಶಿಷ್ಯ, ಚಿಂತಕ ಪ್ರೊ.ಎಸ್.ಜಿ.ಸಿದ್ದರಾಮಯ್ಯ ತಿಳಿಸುತ್ತಾರೆ.
ಒಂದೇ ಅಲ್ಲ; ಬೇರೆಯಾಗದಂತೆ ಬೆರೆತಿವೆ!: “ವೀರಶೈವ ಮತ್ತು ಲಿಂಗಾಯತ ಇವೆರಡೂ ಬೇರೆ ಮಾಡಲಾಗದಷ್ಟು ಒಂದರಲ್ಲಿ ಮತ್ತೂಂದು ಬೆರೆತುಹೋಗಿದೆ ಎನ್ನುವುದು ವಾಸ್ತವವಾಗಿರಬಹುದು. ಆದರೆ, ಅವರೆಡೂ ಒಂದೇ ಎಂಬ ಚಿದಾನಂದಮೂರ್ತಿ ಅವರ ವಾದ ವನ್ನು ನಾನು ಒಪ್ಪುವುದಿಲ್ಲ. ಏಕೆಂದರೆ, ಲಿಂಗಾ ಯತ ನಿಜವಾಗಿಯೂ ವೀರಶೈವದ ಒಳಗೂ ಇದ್ದ ವೈದಿಕತೆಯಿಂದ ಬಿಡಿಸಲು ಪ್ರಯತ್ನಿಸಿದ ಒಂದು ಪ್ರಯತ್ನ.
ಅದು ಜನಪರ ಮತ್ತು ಶ್ರಮ ಸಂಸ್ಕೃತಿ ಎತ್ತಿಹಿಡಿಯುವ ಚಳವಳಿ. ವೀರಶೈವ ಎಲ್ಲಾ ವೈದಿಕ ಆಚರಣೆ ಒಳಗೊಂಡಿದ್ದಾಗಿತ್ತು. ಇದನ್ನು ಸ್ವತಃ ಚಿಮೂ 80ರ ದಶಕದ ಕಾಲಘಟ್ಟದಲ್ಲಿ ಲಿಂಗಾ ಯತದಲ್ಲಿನ ಪ್ರಗತಿಪರ ಮತ್ತು ಜನಪರ ನಿಲುವುಗಳನ್ನು ಒಪ್ಪಿಕೊಂಡವರಾಗಿದ್ದರು. ಆದರೆ, ನಂತರದಲ್ಲಿ ಮೂಲಭೂತವಾದದತ್ತ ಚಲಿಸಿದರು ಎಂದು ನನಗೆ ಅನಿಸುತ್ತದೆ ಎಂದು ಮತ್ತೋರ್ವ ಶಿಷ್ಯೆ ಪ್ರೊ.ಎಂ.ಎಸ್.ಆಶಾದೇವಿ ಸ್ಪಷ್ಟಪಡಿಸುತ್ತಾರೆ.
ಧರ್ಮಬೇಧ ಬೇಡ: ವೀರಶೈವ-ಲಿಂಗಾಯತ ವಿಚಾರ ಮಾತ್ರವಲ್ಲ; ದೇವರ ದಾಸಿಮಯ್ಯ ಮತ್ತು ಜೇಡರ ದಾಸಿಮಯ್ಯ ಇವರಿಬ್ಬರೂ ಒಂದೇ ಎಂದು ಒಂದು ವರ್ಗ ವಾದಿಸುತ್ತಿರುವಾಗ, ಆ ಬಗ್ಗೆ ದಾಖಲೆಗಳ ಸಹಿತ ಅವರಿಬ್ಬರೂ ಬೇರೆ ಬೇರೆ ಹಾಗೂ ವಚನ ಸಾಹಿತ್ಯದ ಆರಂಭಕಾರ ಜೇಡರ ದಾಸಿಮಯ್ಯ ಎಂದೂ ಚಿಮೂ ಪ್ರತಿಪಾದಿಸಿದ್ದರು.
* ವಿಜಯಕುಮಾರ್ ಚಂದರಗಿ