Advertisement

ಸವಾರರಿಗೆ ತಬ್ಬಿಬ್ಬುಗೊಳಿಸುವ ತಟ್ಟೆಕೆರೆ ತಿರುವು

12:35 PM Jul 28, 2019 | Suhan S |

ಹುಣಸೂರು: ಹುಣಸೂರು-ಹನಗೋಡು ಮುಖ್ಯ ರಸ್ತೆಯ ತಟ್ಟೆಕೆರೆ ಕೆರೆ ಕೋಡಿ ಬಳಿ ಅಪಾಯಕಾರಿ ತಿರುವು (ಬ್ಲಾಕ್‌ಸ್ಪಾಟ್) ಇದ್ದು, ಅಪಘಾತಗಳು ಸಂಭವಿಸುತ್ತಲೇ ಇದ್ದರೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕ್ರಮಕ್ಕೆ ಮುಂದಾಗಿಲ್ಲ.

Advertisement

ಹುಣಸೂರಿನಿಂದ ಸುಮಾರು 5 ಕಿ.ಮೀ.ದೂರದ ಹೊಸಕೋಟೆ ಗೇಟ್ ಬಳಿಯ ತಟ್ಟೆಕೆರೆಯ ಕೋಡಿಗೆ ನಿರ್ಮಿಸಿರುವ ಕಿರು ಸೇತುವೆಯ ಬಳಿಯೇ ಈ ಅಪಾಯಕಾರಿ ತಿರುವು ಇದ್ದು, ಅಪಾಯ ಆಹ್ವಾನಿ ಸುತ್ತಿದೆ. ವಾಹನ ಸವಾರರು ಕೈಯಲ್ಲಿ ಜೀವವಿಟ್ಟು ಕೊಂಡು ಸಂಚರಿಸುವಂತಾಗಿದೆ.

ಕಾಣಿಸದ ತಿರುವು: ಹುಣಸೂರು-ಹನಗೋಡು ನಡುವೆ ಪ್ರತಿದಿನ ಸಹಸ್ರಾರು ವಾಹನಗಳು ಸಂಚರಿಸು ತ್ತಿದ್ದು, ಇಲ್ಲಿ ನಿತ್ಯ ಓಡಾಡುವವರಿಗೆ ಹೊರತು ಪಡಿಸಿ ದರೆ ಹೊಸ ವಾಹನಗಳ ಸವಾರರಿಗೆ ಈ ತಿರುವು ಕಾಣಿಸುವುದೇ ಇಲ್ಲ. ಹುಣಸೂರು ಕಡೆಯಿಂದ ಚನ್ನಸೋಗೆಗೇಟ್ನಿಂದ ಕೆರೆಯ ಕೋಡಿವರೆಗೂ ಇಳಿಜಾರು ಇದ್ದು, ಬಹುತೇಕ ಚಾಲಕರು ವೇಗವಾಗಿ ವಾಹನ ಚಲಾಯಿಸುವುದರಿಂದ ರಸ್ತೆ ಇಕ್ಕೆಲಗಳಲ್ಲಿ ಗಿಡಗಂಟಿಗಳು ಬೆಳೆದು ತಿರುವು ಕಾಣದೆ ಕಂಟ್ರೋಲ್ ಮಾಡಲು ಹೋಗಿ ನೇರವಾಗಿ ಚಲಿಸಿ ರಸ್ತೆ ಎದುರಿನ ಮರಕ್ಕೆ ಡಿಕ್ಕಿ ಹೊಡೆಯುತ್ತಲೇ ಇವೆ. ಕೆಲವರು ನಿಯಂತ್ರಣಗೊಳಿಸಲಾಗದೆ ದಿಢೀರ್‌ ಬ್ರೇಕ್‌ ಹಾಕಿ ಆಯತಪ್ಪಿ ಬಿದ್ದಿದ್ದಾರೆ. ಇತ್ತೀಚಿಗೆ ಇದೇ ತಿರುವಿನಲ್ಲಿ ಪತ್ರಕರ್ತರೊಬ್ಬರು ಬೈಕ್‌-ಆಟೋ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಅಪಘಾತ ಸಾಮಾನ್ಯ: ಹುಣಸೂರು ಮತ್ತು ಹನಗೋಡು ಕಡೆಯಿಂದ ಹೋಗುವವರು ದಿಢೀರ್‌ನೇ ಕೋಡಿ ಬಳಿ ವಾಹನಗಳನ್ನು ತಿರುಗಿಸಬೇಕಿರುವುದ ರಿಂದ ಎದುರಿನಿಂದ ಬರುವ ವಾಹನದ ಬಗ್ಗೆ ತಿಳಿಯದೆ ಸಣ್ಣ-ಪುಟ್ಟ ಅಪಘಾತಗಳು ಸಂಭವಿಸು ವುದು ಸಾಮಾನ್ಯವಾಗಿದೆ.

ಮಾಜಿ ಶಾಸಕ ಎಚ್.ಪಿ. ಮಂಜುನಾಥ್‌ ಅವಧಿ ಯಲ್ಲಿ ಹನಗೋಡು – ಹುಣಸೂರಿನ 15 ಕಿ.ಮೀ. ರಸ್ತೆಯನ್ನು ದ್ವಿಪಥ ರಸ್ತೆಯಾಗಿ ಅಭಿವೃದ್ಧಿಪಡಿಸಿ ಡಾಂಬರೀಕರಣಗೊಳಿಸಲಾಗಿತ್ತು. ರಸ್ತೆ ಅಭಿವೃದ್ಧಿ ಗೊಂಡ ನಂತರವಂತೂ ನಿತ್ಯ ಅಪಘಾತ ತಪ್ಪಿದ್ದಲ್ಲ.

Advertisement

ಬ್ಲಾಕ್‌ ಸ್ಪಾಟ್ ಸರಿಪಡಿಸಿ: ಲೋಕೋಪಯೋಗಿ ಇಲಾಖೆಗೆ ಸೇರಿರುವ ಈ ರಸ್ತೆಯನ್ನು ಅಭಿವೃದ್ಧಿ ಪಡಿಸುವ ವೇಳೆ ಕೋಡಿ ಸೇತುವೆಯ ತಿರುವು, ನಿಲುವಾಗಿಲು ತಿರುವು, ಅಂಗಟಹಳ್ಳಿ ಗೇಟ್ ತಿರುವು, ಚನ್ನಸೋಗೆ ಬಳಿಯ ತಿರುವುಗಳು ವಾಹನ ಸವಾರರಿಗೆ ಅಪಾಯಕಾರಿ ಎಂದು ಎಂಜಿನಿಯರುಗಳಿಗೆ ತಿಳಿ ದಿದ್ದರೂ, ಕನಿಷ್ಠ ಈ ತಿರುವುಗಳಲ್ಲಾದರೂ ಎಚ್ಚರಿಕೆಯ ಸೂಚನಾ ಫಲಕ ಅಳವಡಿಸಿಲ್ಲ. ರಸ್ತೆ ವಿಭಜಕವನ್ನಾಗಲಿ ಅಥವಾ ಹಂಪ್ಸ್‌ ಅಳವಡಿಸಿಲ್ಲ. ಎಂಜಿನಿಯರ್‌ಗಳ ನಿರ್ಲಕ್ಷ್ಯದಿಂದಲೇ ಈ ಭಾಗದಲ್ಲಿ ಅಪಘಾತಗಳು ಸಂಭವಿಸುತ್ತವೆ ಎಂದು ವಾಹನ ಸವಾರರು ಅವಲತ್ತುಕೊಂಡಿದ್ದಾರೆ.

ಈ ತಿರುವಿನಲ್ಲಿ ಹೆಚ್ಚಿನ ಅಪಘಾತವಾಗುತ್ತಿರುವ ಬಗ್ಗೆ ಮಾಹಿತಿ ಇದೆ. ಪರಿಶೀಲಿಸಿ ಅಗತ್ಯ ಕ್ರಮ ವಹಿಸಲು ಲೋಕೋಪಯೋಗಿ ಇಲಾಖೆ ಸೂಚಿಸ ಲಾಗುವುದೆನ್ನುತ್ತಾರೆ ಪೊಲೀಸ್‌ ಅಧಿಕಾರಿಗಳು.

 

● ಸಂಪತ್‌ ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next