Advertisement

ಮುಖ್ಯಮಂತ್ರಿಗಳಿಗೆ ಶ್ರೀನಿವಾಸ್‌ಪ್ರಸಾದ್‌ ನೇರ ಸವಾಲು

12:34 PM Feb 15, 2017 | |

ನಂಜನಗೂಡು: “ನನ್ನನ್ನು ಸೋಲಿಸುವುದೇ ತಮ್ಮ ಹಾಗೂ ಸರ್ಕಾರದ ಗುರಿ ಎಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಇಂದಿಲ್ಲಿ ಶ್ರೀನಿವಾಸ್‌ ಪ್ರಸಾದ ಪ್ರತಿ ಸವಾಲು ಹಾಕಿ ಪಂಥಾಹ್ವಾನ ನೀಡಿದರು.

Advertisement

ಸಿಂಧುವಳ್ಳಿಯ ಸಂತಾನ ಗಣಪತಿ ಕಲ್ಯಾಣ ಮಂದಿರದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಪ್ರಸಾದ್‌ ಬೆಂಬಲಿಗರ ಬಿಜೆಪಿ ಸೇರ್ಪಡೆ (ಸಮ್ಮಿಲನ) ಸಮಾರಂಭದಲ್ಲಿ ಮಾತನಾಡಿ, ಉಪ ಚುನಾವಣೆಯಲ್ಲಿ ತಾವು ಹಾಗೂ ತಮ್ಮ ಸರ್ಕಾರ ಪ್ರಸಾದರನ್ನು ಸೋಲಿಸಲು ಇಲ್ಲಿಯೇ ಠಿಕಾಣಿ ಹೂಡುತ್ತೇವೆ.

ಅವರನ್ನು ಸೋಲಿಸುವುದೇ ನಮ್ಮೆಲ್ಲರ ಗುರಿ ಎಂದಿದ್ದನ್ನು ಪ್ರಸ್ತಾಪಿಸಿದ ಪ್ರಸಾದ್‌, ಉಪ ಚುನಾವಣೆಯಲ್ಲಿ ಮತದಾರರು ತಮ್ಮನ್ನು ಸೋಲಿಸಿದರೆ ತಕ್ಷಣ ತಾವು ಸಕ್ರಿಯ ರಾಜಕಾರಣದಿಂದ ನಿವೃತ್ತಿ ಘೋಷಿಸಲು ಸಿದ್ಧ. ಸಿದ್ದರಾಮಯ್ಯನವರ ಕಾಂಗ್ರೆಸ್‌ ಸೋತರೆ ತಕ್ಷಣ ರಾಜೀನಾಮೆ ನೀಡಲು ನೀವು ಸಿದ್ಧರಿದ್ದಿರಾ? ಎಂದು ಮುಖ್ಯಮಂತ್ರಿಗಳಿಗೆ ಅವರು ನೇರವಾಗಿ ಸವಾಲೆಸೆದರು.

ಮಿತ್ರ ದ್ರೋಹಿ: ರಾಜ್ಯದ ರಾಜಕಾರಣದಲ್ಲಿ ಮಿತ್ರ ದ್ರೋಹಿ ಹಾಗೂ ಪಿತೂರಿ ರಾಜಕಾರಣಿ ಸಿದ್ದರಾಮಯ್ಯ. ಉಪಚುನಾವಣೆಗೆ ನಿಮ್ಮ ಪಿತೂರಿ ರಾಜಕಾರಣದ ಮಿತ್ರದ್ರೋಹವೇ ಕಾರಣ. ಯಾವ ಮಂತ್ರಿಗಳನ್ನು ಕರೆ ತರುತ್ತೀರಿ ಮುಖ್ಯ ಮಂತ್ರಿಗಳೇ? ಮೇಟಿನಾ, ಜಾರಕಿ ಹೊಳಿನಾ ಅಥವಾ ಬ್ಲೂಫಿಲಂ ಖ್ಯಾತಿಯ ಸೇs…, ಯಾರನ್ನಾದರೂ ಕರೆತನ್ನಿ, ತನಗೇನು ಭಯವಿಲ್ಲ ಎಂದು ಮುಖ್ಯಮಂತ್ರಿಗಳನ್ನು ಕಾಲೆಳೆದರು.

ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಪಡಿತರ ಆಹಾರ ಸಾಮಗ್ರಿಗೆ ಪ್ರತಿ ತಿಂಗಳೂ ಕೇಂದ್ರ 400 ಕೋಟಿ ರೂ. ನೀಡುತ್ತಿಲ್ಲವೆ ಸಿದ್ದರಾಮಯ್ಯನವರೇ. ಅನ್ನಭಾಗ್ಯ ನಿಮ್ಮದೇ ಹೇಗಾದೀತು? ಶಾದಿ ಭಾಗ್ಯದ ಫ‌ಲ ಎಷ್ಟು ಜನ ಬಡವರಿಗೆ ಸಂದಿದೆ. ಯಾವುದೇ ಭಾಗ್ಯವೂ ನಿಮ್ಮಂದಾಗಿ ಅಶಕ್ತರಿಗೆ ದೊರೆಯದಂತಾಗಿದೆ. ಪ್ರಸಾದ್‌ ಅಂತಹವರು ಕಾಂಗ್ರೆಸ್‌ ತ್ಯಜಿಸಿದ ಮೇಲೆ ಆ ಪಕ್ಷಕ್ಕೆ ಶನಿ ಕಾಟ ಪ್ರಾರಂಭವಾಗಿದೆ. ಇದನ್ನೇ ಪೂಜಾರಿಯವರು ಹೇಳುತ್ತಿರುವುದು. 15ರಿಂದ 20 ಹಿರಿಯ ಕಾಂಗ್ರೆಸ್‌ ನಾಯಕರು ಈಗಾಗಲೆ ಬಿಜೆಪಿ ಸಂಪರ್ಕದಲ್ಲಿದ್ದಾರೆ. ಪ್ರಾಮಾಣಿಕ ರಾಜಕಾರಣಿಯಾದ ಪ್ರಸಾದರೇ ಹಳೆ ಮೈಸೂರಿನಲ್ಲಿ ನಮಗೆಲ್ಲರಿಗೂ ನಾಯಕರು ಎಂದು ತಿಳಿಸಿದರು.

Advertisement

ಪ್ರಸಾದ ಬಿಜೆಪಿಗೆ ಸೇರಿರುವುದು ಯೋಗಾಯೋಗ ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ, 2018ರಲ್ಲಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡುವ ಸುಯೋಗದ ಮೊದಲ ಮೆಟ್ಟಲು ನಿರ್ಮಿಸುವ ಸೌಭಾಗ್ಯ ನಂಜುಂಡೇಶ್ವರನ ಸನ್ನಿಧಿಗೆ ಸಿಕ್ಕಿದೆ. ಈ ಅವಕಾಶ ಉಪಯೋಗಿಸಿಕೊಂಡು ಪ್ರಸಾದರನ್ನು ಅಭೂತಪೂರ್ವ ಮತಗಳಿಂದ ಗೆಲ್ಲಿಸಿ ಎಂದು ಅವರು ಮನವಿ ಮಾಡಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಕೋಟೆ ಶಿವಣ್ಣ. ಸಂಸದರಾದ ಪ್ರತಾಪ ಸಿಂಹ ಹಾಗೂ ಕೆ.ಆರ್‌.ಮೋಹನ್‌ ಕುಮಾರ್‌, ಮಾಜಿ ಸಚಿವರಾದ ರಾಮದಾಸ್‌, ಮುಡಾ ಅಧ್ಯಕ್ಷರಾದ ಬಸವೇಗೌಡ, ನಾಗೇಂದ್ರ, ಪಕ್ಷದ ನಾಯಕರಾದ ಫ‌ಣೀಶ್‌, ಮಹದೇವು ಅಳಿಯ ಜಯದೇವ್‌, ಅಶೋಕ್‌, ರಾಮಸ್ವಾಮಿ, ಕಾಪು ಸಿದ್ದಲಿಂಗ ಸ್ವಾಮಿ, ಇಲಿಯಾಸ್‌ ಅಹ್ಮದ್‌, ಹರ್ಷವರ್ದನ, ಜಿಪಂ ಸದಸ್ಯರಾದ ದಯಾನಂದ್‌,

ಸದಾನಂದ್‌, ಮಂಗಳಾ ಸೋಮಶೇಖರ್‌, ಮಾಜಿ ಸದಸ್ಯರಾದ ಡಾ.ಶಿವರಾಂ ಸಿದ್ದವೀರಪ್ಪ, ಕೆಂಪಣ್ಣ, ಚಿಕ್ಕರಂಗ ನಾಯಕ, ಡಾ.ಶ್ಯೆಲಾ ಬಾಲರಾಜು, ನಗರಸಭಾ ಉಪಾಧ್ಯಕ್ಷ ಪ್ರದೀಪ್‌ ಸದಸ್ಯರಾದ ಆನಂದ ಮಹದೇವಸ್ವಾಮಿ, ಸುಧಾ ಮಹೇಶ, ಗಜ ಇತರರಿದ್ದರು. ರೈತ ಮೋರ್ಚಾ ನಾಯಕ ಎನ್‌.ಆರ್‌.ಕೃಷ್ಣಪ್ಪ ಗೌಡ ಸ್ವಾಗತಿಸಿದ ಸಮಾರಂಭವನ್ನು ವಿನಯಕುಮಾರ್‌ ನಿರೂಪಿಸಿದರು. ಕುಂಬರಳ್ಳಿ ಸುಬ್ಬಣ್ಣ ಸೇರ್ಪಡೆಯ ಮುಖಂಡರ ಯಾದಿ ಓದಿದರು.

ಒರಿಜನಲ್‌ ಸೀಡಿ ನಮ್ಮಲ್ಲಿದೆ. ಕಾಂಗ್ರೆಸ್‌ ನಲ್ಲಿರುವುದು ತಿರುಚ ಲಾದ ಸೀಡಿ. ನೀವು ಅದನ್ನು ಹಾಕಿ ನಾವು ಒರಿಜನಲ್‌ ಸೀಡಿಯನ್ನು ಜನತೆಯ ಮುಂದಿಡುತ್ತೇವೆ.
-ಅರವಿಂದ ನಿಂಬಾವಳಿ, ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next