Advertisement

ತಾಯಿಯ ಪ್ರಿಯಕರನೊಂದಿಗೆ ಪುತ್ರಿಯ ವಿವಾಹ: ಯುವತಿ ಆತ್ಮಹತ್ಯೆ

10:11 AM Mar 15, 2020 | sudhir |

ಹೈದರಾಬಾದ್‌: ವಿವಾಹೇತರ ಸಂಬಂಧವನ್ನು ಮುಂದುವರಿಸುವ ದುರುದ್ದೇಶ ಹೊಂದಿದ್ದ ತಾಯಿ, ಸ್ವಂತ ಮಗಳ ವಿವಾಹವನ್ನು ತನ್ನ ಪ್ರಿಯತಮನೊಂದಿಗೆ ನೆರವೇರಿಸಿದ್ದು, ಇದರಿಂದ ನೊಂದ ಪುತ್ರಿ ಆತ್ಮಹತ್ಯೆಗೆ ಶರಣಾದ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.

Advertisement

ಈ ಕುರಿತು ಮೃತಳ 17 ವರ್ಷದ ತಂಗಿ, ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ತನ್ನ ತಾಯಿ ಅನಿತಾ ಹಾಗೂ ಆಕೆಯ ಪ್ರಿಯಕರ ಪ್ರೇಮ್‌ ನವೀನ್‌ ಕುಮಾರ್‌ ವಿರುದ್ಧ ದೂರು ದಾಖಲಿಸಿದ್ದಾರೆ. ತಂದೆಯಿಂದ ದೂರಾದ ಬಳಿಕ, ಒಂದು ವರ್ಷದಿಂದೀಚೆಗೆ ಅನಿತಾ, ಪ್ರೇಮ್‌ ಜತೆ ಸಂಬಂಧ ಹೊಂದಿದ್ದಳು. ಆತ ಆಗಾಗ್ಗೇ ನಮ್ಮ ಮನೆಗೆ ಬಂದು ಹೋಗುತ್ತಿದ್ದ. ಈ ನಡುವೆ ತಮ್ಮ ಅಕ್ರಮ ಸಂಬಂಧ ಮುಂದುವರಿಸುವ ದುರುದ್ದೇಶದಿಂದ ತಾಯಿ ಅನಿತಾ, ನನ್ನ ಅಕ್ಕನ ವಿವಾಹವನ್ನು ಪ್ರೇಮ್‌ ಜೊತೆ ಮಾಡಿಸಿದ್ದಳು ಎಂದು ಯುವತಿ ದೂರಿನಲ್ಲಿ ಉಲ್ಲೇಖೀಸಿದ್ದಾರೆ.

“ಅಕ್ಕನಿಗೆ ಈ ವಿವಾಹ ಸ್ವಲ್ಪವೂ ಇಷ್ಟ ಇರಲಿಲ್ಲ. ಇತ್ತ ವಿವಾಹದ ನಂತರವೂ ಪ್ರೇಮ್‌ ನಮ್ಮ ತಾಯಿ ಜೊತೆಗಿನ ಸಂಬಂಧ ಮುಂದುವರಿಸಿದ್ದ. ಇದನ್ನು ಅಕ್ಕ ಆಕ್ಷೇಪಿಸಿದಾಗ, ಪತಿಯಿಂದ ಬೇರಾದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಾಯಿ ಅನಿತಾ ಬೆದರಿಕೆ ಹಾಕುತ್ತಿದ್ದಳು. ಇದರಿಂದ ಮನನೊಂದ ಅಕ್ಕ ನೇಣಿಗೆ ಶರಣಾಗಿದ್ದಾಳೆ’ ಎಂದು ಯುವತಿ ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next