ಸುರತ್ಕಲ್: ಸುರತ್ಕಲ್‌ನಿಂದ ಮುಂಚೂರು ಮಾರ್ಗವಾಗಿ ಮದ್ಯ ಚೇಳಾೖರು ಗ್ರಾಮಕ್ಕೆ ತಲುಪುವ ರಸ್ತೆ ಬದಿ ತಡೆಗೋಡೆಯಿಲ್ಲದ ಕೆರೆಯೊಂದು ಅಪಾಯಕಾರಿ ಸ್ಥಿತಿಯಲ್ಲಿದೆ. ಮಳೆಗಾಲವಾದ್ದರಿಂದ ಕೆರೆಯಲ್ಲಿ ನೀರು ತುಂಬಿ ತುಳುಕುತ್ತಿದೆ.
ಕೇವಲ ಅರ್ಧ ಕಿ.ಮೀ. ದೂರದಲ್ಲಿ ಸರಕಾರಿ ಶಾಲೆಯಿದ್ದು ಮಕ್ಕಳು ನಿತ್ಯವೂ ನಡೆದುಕೊಂಡು ಹೋಗುತ್ತಾರೆ. ಕೆರೆ ಇರುವಲ್ಲಿ ರಸ್ತೆಯೂ ಅಗಲ ಕಿರಿದಾಗಿದ್ದು ತಿರುವು ಪ್ರದೇಶದಲ್ಲೇ ಈ ಕೆರೆಯಿದೆ.
ಕೆರೆಗೆ ತಾತ್ಕಾಲಿಕವಾಗಿ ದಂಡೆ ನಿರ್ಮಿಸಲಾಗಿದ್ದರೂ ವಾಹನ ಢಿಕ್ಕಿ ಹೊಡೆದು ದಂಡೆ ಬಿರುಕು ಬಿಟ್ಟಿದೆ. ರಾತ್ರಿ ಸಂದರ್ಭ ಇಲ್ಲಿ ಪಾದಾಚಾರಿಗಳು ಓಡಾಡುವುದರಿಂದ ಅಪಾಯದಲ್ಲಿ ಸಿಲುಕುವ ಸಾಧ್ಯತೆ ಇದೆ.
ಮಹಾನಗರ ಪಾಲಿಕೆ ವ್ಯಾಪ್ತಿಗೆ ಈ ಪ್ರದೇಶ ಬರುತ್ತಿದ್ದು ತುರ್ತು ಕ್ರಮ ಕೈಗೊಂಡು ತಡೆಗೋಡೆ ನಿರ್ಮಿಸಲು ಮುಂದಾಗಬೇಕಿದೆ. ಸೆ. 2ರಂದು ಪುತ್ತೂರು ಕೌಡಿಚಾರ್ ಮಡ್ಯಂಗಳದಲ್ಲಿ ಕಾರೊಂದು ಕೆರೆಗೆ ಬಿದ್ದು ನಾಲ್ವರು ದುರಂತ ಸಾವನ್ನಪ್ಪಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.