ತಲ್ಲೂರು: ಬೈಂದೂರು – ಕುಂದಾಪುರ ರಾಷ್ಟ್ರೀಯ ಹೆದ್ದಾರಿ 66ರ ಹೇರಿಕುದ್ರು ಹಾಗೂ ತಲ್ಲೂರು ಮಧ್ಯೆ ವಾರಾಹಿ ನದಿಗೆ ಅಡ್ಡಲಾಗಿ ನಿರ್ಮಿಸಿದ ಹಳೆ ಸೇತುವೆಯ ಒಂದು ಕಡೆ ತಡೆಗೋಡೆ ಹಾನಿಗೊಳಗಾಗಿ ಹಲವು ಸಮಯವೇ ಕಳೆದಿದ್ದು, ಇನ್ನೂ ದುರಸ್ತಿಗೆ ಮುಂದಾಗಿಲ್ಲ.
ಹೇರಿಕುದ್ರು ಹಾಗೂ ತಲ್ಲೂರು ಮಧ್ಯೆ ವಾರಾಹಿ ನದಿಗೆ ಈಗ ಹೊಸದಾಗಿ ಸೇತುವೆ ನಿರ್ಮಿಸಲಾಗಿದೆ. ಬೈಂದೂರಿನಿಂದ ಕುಂದಾಪುರ ಕಡೆಗೆ ಸಂಚರಿಸಲು ಹೊಸ ಸೇತುವೆಯಲ್ಲಿ ಅನುವು ಮಾಡಿಕೊಡ ಲಾಗಿದ್ದು, ಕುಂದಾಪುರದಿಂದ ಬೈಂದೂರು ಕಡೆಗೆ ಹಳೆ ಸೇತುವೆಯಲ್ಲಿಯೇ ಸಂಚರಿ ಸಬೇಕಾಗಿದೆ.
ಈ ಸೇತುವೆಯ ಅಲ್ಲಲ್ಲಿ ಅನೇಕ ಕಡೆಗಳಲ್ಲಿ ಈಗಾಗಲೇ ದುರಸ್ತಿ ಮಾಡಿದ ಬಳಿಕವಷ್ಟೇ ಸಂಚಾರಕ್ಕೆ ಅವಕಾಶ ನೀಡಲಾಗಿದ್ದು, ಆದರೆ ಒಂದು ಕಡೆ ಮಾತ್ರ ಸೇತುವೆಯ ತಡೆಗೋಡೆ ಹಾನಿಯಾಗಿ ಮುರಿದು ಹೋಗಿದೆ. ಸದ್ಯ ಇಲ್ಲಿಗೆ ಅನಾಹುತ ಸಂಭವಿಸದಂತೆ ಇದರಿಂದ ಅಪಾಯವನ್ನು ಆಹ್ವಾನಿಸುವ ರೀತಿಯಲ್ಲಿ ಕಂಡು ಬರುತ್ತಿದೆ.
ಇದು ರಾಷ್ಟ್ರೀಯ ಹೆದ್ದಾರಿ ಆಗಿರುವ ಕಾರಣ ಪ್ರತಿನಿತ್ಯ ಬೆಳಗ್ಗಿನಿಂದ ಮಧ್ಯರಾತ್ರಿಯವರೆಗೂ ಬೈಕ್, ಕಾರು, ರಿಕ್ಷಾದಂತಹ ವಾಹನಗಳಿಂದ ಹಿಡಿದು, ಬಸ್‌ಗಳು, ಸರಕು ಸಾಗಾಟದ ಘನ ವಾಹನಗಳು ಸಂಚರಿಸುತ್ತಿರುತ್ತವೆ.
ಈ ವೇಳೆ ತಡೆಗೋಡೆ ಮುರಿದು ಹೋಗಿರುವುದರಿಂದ ಅಪಾಯ ಸಂಭವಿಸುವ ಮುನ್ನ ಸಂಬಂಧ ಪಟ್ಟ ಅಧಿಕಾರಿಗಳು, ಕಾಮಗಾರಿ ವಹಿಸಿಕೊಂಡಿ ರುವ ಗುತ್ತಿಗೆದಾರ ಸಂಸ್ಥೆಯವರು ಎಚ್ಚೆತ್ತುಕೊಂಡು, ದುರಸ್ತಿ ಮಾಡಲಿ ಎಂದು ನಾಗರಿಕರು ಆಗ್ರಹಿಸಿದ್ದಾರೆ.