Advertisement
ಸ್ನಾನ ಮಾಡಿದರೆ ದೇಹ ಶುಚಿಯಾಗುತ್ತೆ, ಬೆವರಿನ ವಾಸನೆಯೂ ಇರೋದಿಲ್ಲ ಎನ್ನುವುದೆಲ್ಲ ಸಾಮಾನ್ಯ ನಂಬಿಕೆ. ಆದರೆ, “ಸ್ನಾನ ಮಾಡದಿರುವುದೇ ಆರೋಗ್ಯಕಾರಿ ನಿರ್ಧಾರ’ ಎಂದು ವಿಜ್ಞಾನಿಗಳ ತಂಡ ಹೇಳಿದೆ. ಉಪಯುಕ್ತ ಸೂಕ್ಷಾಣುಜೀವಿಗಳಲ್ಲಿ ಬ್ಯಾಕ್ಟೀರಿಯಾ, ವೈರಸ್, ಫಂಗಸ್‌ಗಳು ಇರುತ್ತವೆ. ಇವುಗಳಲ್ಲಿ ಅನೇಕ ಜೀವಿಗಳು ದೇಹಕ್ಕೆ ರೋಗ ನಿರೋಧಕ ಶಕ್ತಿಯನ್ನು ಒದಗಿಸುವಂಥವು. ಜೀರ್ಣವ್ಯವಸ್ಥೆಯನ್ನು ಸುಧಾರಿಸುವಂಥವು. ರಕ್ತಸಂಚಾರ ಸುಗಮಗೊಂಡು ಹೃದ್ರೋಗ ಬಾರದಂತೆ ತಡೆಯವ ಶಕ್ತಿಯೂ ಇಂಥ ಸೂಕ್ಷ್ಮಾಣುಜೀವಿಗಳಿಗೆ ಇರುತ್ತವೆ. ಆದರೆ, ವಿಪರೀತ ಸೋಪು, ಶಾಂಪು ಬಳಸಿ ಸ್ನಾನ ಮಾಡುವುದರಿಂದ ರಾಸಾಯನಿಕ ದಾಳಿಯಿಂದಾಗಿ ಇವುಗಳೆಲ್ಲ ಕೊಲ್ಲಲ್ಪಡುತ್ತವೆ ಎಂದು ತಜ್ಞರ ತಂಡ ಹೇಳಿದೆ.
ಲಂಡನ್ನಿನ ಪದವೀಧರ ಡೇವ್ ವಿಟ್‌ಲಾಕ್ ಎಂಬಾತ 12 ವರ್ಷಗಳಿಂದ ಸ್ನಾನ ಮಾಡಿಲ್ಲ! ಈತ ಸ್ನಾನದ ಬದಲು ಬಳಸುತ್ತಿರುವುದು “ಎಒ ಬಯೋಮ್’ (ಅಮೋನಿಯಾ- ಆಕ್ಸಿಡೈಸಿಂಗ್ ಬ್ಯಾಕ್ಟೀರಿಯಾ) ಸ್ಪ್ರೆàಯನ್ನು! ಕೇಂಬ್ರಿಡ್ಜ್ ವಿವಿಗೆ ಸೇರಿರುವ ಕಂಪನಿಯೊಂದು ಇದನ್ನು ಸಿದ್ಧಪಡಿಸಿದ್ದು, ಇಲ್ಲಿಯ ತನಕ ಈತನಿಗೆ ಯಾವುದೇ ಚರ್ಮದ ಕಾಯಿಲೆಗಳೂ ಬಂದಿಲ್ಲ. ನಿತ್ಯ ಸ್ನಾನ ಮಾಡುವವರಿಗಿಂತ ಈತನ ಚರ್ಮ ಆರೋಗ್ಯಕಾರಿಯಾಗಿ, ಕಾಂತಿಯುಕ್ತವಾಗಿ ಇದೆಯೆಂದು ಸಂಶೋಧನಾ ವೈದ್ಯರು ಹೇಳಿದ್ದಾರೆ. ಅಲ್ಲದೆ, ಡೇವ್ ವಿಟ್‌ಲಾಕ್‌ನ ಹೃದಯದ ಆರೋಗ್ಯವೂ ಇತರರಿಗಿಂತ ಚೆನ್ನಾಗಿಯೇ ಇದೆಯಂತೆ!