Advertisement

ಕುತೂಹಲ ಕೆರಳಿಸಿರುವ ತ್ರಿಕೋನ

02:29 PM Aug 07, 2020 | mahesh |

ಮೂರು ಭಾಷೆಗಳಲ್ಲಿ ತೆರೆಗೆ ಕನ್ನಡ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಏಕಕಾಲಕ್ಕೆ ನಿರ್ಮಾಣವಾಗಿರುವ “ತ್ರಿಕೋನ’ ಚಿತ್ರ ತೆರೆಗೆ ಬರುವ ತಯಾರಿಯಲ್ಲಿದೆ. “ಪೊಲೀಸ್‌ ಪ್ರಕ್ಕಿ ಪ್ರೊಡಕ್ಷನ್ಸ್‌’ ಬ್ಯಾನರ್‌ನಲ್ಲಿ ರಾಜಶೇಖರ್‌ ಬಂಡವಾಳ ಹೂಡಿ ನಿರ್ಮಿಸಿ ರುವ “ತ್ರಿಕೋನ’ ಚಿತ್ರವನ್ನು ಇತ್ತೀಚೆಗೆ ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್‌ ಮಂಡಳಿ, ಚಿತ್ರಕ್ಕೆ ಯಾವುದೇ ಕಟ್ಸ್‌, ಮ್ಯೂಟ್‌ ಹೇಳದೆ “ಯು/ಎ’ ಅರ್ಹತಾ ಪತ್ರ ನೀಡಿದೆ. ಸದ್ಯ ಇದೇ ಖುಷಿಯಲ್ಲಿರುವ ಚಿತ್ರ ತಂಡ ಇದೇ ವರಮಹಾಲಕ್ಷ್ಮೀ ಹಬ್ಬದಂದು “ತ್ರಿಕೋನ’ದ ಮೋಶನ್‌ ಪೋಸ್ಟರ್‌ ಅನ್ನು ಬಿಡುಗಡೆ ಮಾಡಿದೆ.

Advertisement

ಕನ್ನಡ, ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ ಏಕಕಾಲಕ್ಕೆ ಮೋಶನ್‌ ಪೋಸ್ಟರ್‌ ಬಿಡುಗಡೆಯಾಗಿದ್ದು, ಸೋಶಿಯಲ್‌ ಮೀಡಿಯಾಗಳಲ್ಲಿ ಮೋಶನ್‌ ಪೋಸ್ಟರ್‌ ಸಿನಿಪ್ರಿಯರ ಗಮನ ಸೆಳೆಯುತ್ತಿದೆ. ಇದೇ ವೇಳೆ ಚಿತ್ರದ ಬಗ್ಗೆ ಮಾತನಾಡಿರುವ ಚಿತ್ರತಂಡ, ಮೋಶನ್‌ ಪೋಸ್ಟರ್‌ ಬಿಡುಗಡೆ ಮಾಡುವ ಮೂಲಕ “ತ್ರಿಕೋನ’ದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಲಾಗಿದೆ. ಮೂರು ಭಾಷೆಗಳಲ್ಲಿ ಈ ಚಿತ್ರವನ್ನು ಬಿಡುಗಡೆ ಮಾಡುವ ಯೋಜನೆ ಯಿದ್ದು, ತೆಲುಗಿನಲ್ಲಿ “ತ್ರಿಕೋನಂ’ ಹಾಗೂ ತಮಿಳಿನಲ್ಲಿ “ಗೋಸುಲೋ’ ಎಂಬ ಹೆಸರಿನಲ್ಲಿ ಚಿತ್ರ ತೆರೆಗೆ ಬರಲಿದೆ ಎಂದಿದೆ. ಸದ್ಯ ಬಿಡುಗಡೆಯಾಗಿರುವ ಮೋಶನ್‌ ಪೋಸ್ಟರ್‌ ಸಾಮಾಜಿಕ ಜಾಲತಾಣದಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದು ಕೊಳ್ಳುತ್ತಿದೆ. ಅದ್ಭುತವಾದ ಗ್ರಾಫಿಕ್ಸ್‌, ರೀ-ರೆಕಾ ರ್ಡಿಂಗ್‌ ನೋಡುಗರಲ್ಲಿ ಕುತೂ ಹಲವನ್ನು ಕೆರಳಿಸುತ್ತಿದೆ. ಯೂ-ಟ್ಯೂಬ್‌ನಲ್ಲಿ ಮೋಶನ್‌ ಪೋಸ್ಟರ್‌ ಲಭ್ಯವಿದ್ದು, ಕನ್ನಡದ ಜೊತೆ ತಮಿಳು, ತೆಲುಗಿನಲ್ಲೂ “ತ್ರಿಕೋನ’ ಮೋಶನ್‌ ಪೋಸ್ಟರ್‌ ಟ್ರೆಂಡಿಂಗ್‌ ಆಗುತ್ತಿದೆಅನ್ನೋದು ಚಿತ್ರತಂಡದ ಮಾತು.

ಸಸ್ಪೆನ್ಸ್‌ – ಥ್ರಿಲ್ಲರ್‌ ಕಥಾಹಂದರ ಹೊಂದಿರುವ “ತ್ರಿಕೋನ’ ಚಿತ್ರಕ್ಕೆ ನಿರ್ಮಾಪಕ ರಾಜಶೇಖರ್‌ ಅವರೆ ಕಥೆ ಬರೆದದ್ದು, ಈ ಹಿಂದೆ “143′ ಚಿತ್ರವನ್ನು ನಿರ್ದೇಶಿಸಿದ್ದ ಚಂದ್ರಕಾಂತ್‌, ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಅಂದಹಾಗೆ, ಈ ಚಿತ್ರ ಒಂದೇ ಕಥೆ ಕನ್ನಡ, ತೆಲುಗು, ತಮಿಳು ಮೂರು ಭಾಷೆಗಳಲ್ಲೂ ವಿಭಿನ್ನ ಚಿತ್ರಕಥೆಯೊಂದಿಗೆ ನಿರ್ಮಾಣವಾಗಿದ್ದು, ನಿರ್ದೇಶಕರನ್ನು ಹೊರತುಪಡಿಸಿ ಆಯಾ ಭಾಷೆಗಳಲ್ಲಿ ಅಲ್ಲಿನ ನುರಿತ ತಂತ್ರಜ್ಞರನ್ನೆ ಚಿತ್ರ ನಿರ್ಮಾಣ ಕಾರ್ಯದಲ್ಲಿ ಬಳಸಿಕೊಳ್ಳಲಾಗಿದೆಯಂತೆ. ಇನ್ನು ಚಿತ್ರಕ್ಕೆ ಸುರೇಂದ್ರನಾಥ್‌ ಸಂಗೀತ ನಿರ್ದೇಶನ, ಶ್ರೀನಿವಾಸ್‌ ವೆನಕೋಟ ಛಾಯಾಗ್ರಹಣ, ಜೀವನ್‌ ಪ್ರಕಾಶ್‌ ಸಂಕಲನವಿದೆ. ಚಿತ್ರದ ಹಾಡುಗಳಿಗೆ ಹೈಟ್‌ ಮಂಜು ನೃತ್ಯ ನಿರ್ದೇಶನ ಹಾಗೂ ಜಾನಿ, ಚೇತನ್‌ ಡಿಸೋಜ ಸಾಹಸ ನಿರ್ದೇಶನವಿದೆ. ಸುರೇಶ್‌ ಹೆಬ್ಳೀಕರ್‌, ಲಕ್ಷ್ಮೀ, ಅಚ್ಯುತ ಕುಮಾರ್‌, ಸುಧಾರಾಣಿ, ಸಾಧುಕೋಕಿಲ, ಭಜರಂಗಿ ಮಾರುತೇಶ್‌, ರಾಜವೀರ್‌, ಅದಿತಿ ರಾಜ್‌, ಹಾಸಿನಿ ಮುಂತಾದವರು “ತ್ರಿಕೋನ’ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಸದ್ಯ ನಿಧಾನವಾಗಿ ಚಿತ್ರದ ಪ್ರಮೋಶನ್‌ ಕೆಲಸಗಳಿಗೆ ಚಾಲನೆ ನೀಡಿರುವ “ತ್ರಿಕೋನ’ ಚಿತ್ರತಂಡ, ಥಿಯೇಟರ್‌ಗಳು ತೆರೆಯುತ್ತಿದ್ದಂತೆ, ತೆರೆಗೆ ಬರುವ ಆಲೋಚನೆಯಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next