Advertisement

ಕುತೂಹಲ ಕೆರಳಿಸಿದ ಬಿಜೆಪಿ ಅತೃಪ್ತರ “ಸಭೆ’

05:33 AM May 29, 2020 | Lakshmi GovindaRaj |

ಬೆಂಗಳೂರು: ರಾಜ್ಯ ವಿಧಾನಸಭೆ ಯಿಂದ ರಾಜ್ಯಸಭೆಯ 4 ಸ್ಥಾನಗಳಿಗೆ ಸದ್ಯದಲ್ಲೇ ಚುನಾವಣೆ ನಡೆ ಯಲಿ ರುವ ಹಿನ್ನೆಲೆಯಲ್ಲಿ ಬಿಜೆಪಿಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದ ರಿದ್ದು, ಮಾಜಿ ಸಂಸದ ರಮೇಶ್‌ ಕತ್ತಿಗೆ ಅವಕಾaಶ  ಕಲ್ಪಿಸಲು ಮಾಜಿ ಸಚಿವ ಹಾಗೂ ಸಹೋದರರು ಆಗಿರುವ ಉಮೇಶ್‌ ಕತ್ತಿ ತೀವ್ರ ಕಸರತ್ತು ನಡೆಸಿದ್ದಾರೆ.

Advertisement

ಉತ್ತರ ಕರ್ನಾಟಕದ ಹತ್ತಾರು ಶಾಸಕರು ಸಭೆ ಸೇರಿ ಚರ್ಚೆ ನಡೆಸಿರುವುದು ತೀವ್ರ ಕುತೂಹಲ ಮೂಡಿಸಿದೆ. ಹಾಲಿ ರಾಜ್ಯಸಭಾ  ಸದಸ್ಯ ಪ್ರಭಾಕರ್‌ ಕೋರೆ ಅವರಿಗೆ ಮತ್ತೆ ಅವಕಾಶ ನೀಡುವ ಸಾಧ್ಯತೆ ಬಗ್ಗೆ ಚರ್ಚೆ ನಡೆದಿರುವ ಬೆನ್ನಲ್ಲೇ ಉಮೇಶ್‌ ಕತ್ತಿ ತಮ್ಮ ಸಹೋದರ ರಮೇಶ್‌ ಕತ್ತಿ ಅವರಿಗೆ ಅವಕಾಶ ಕೊಡಿಸಲು ಒತ್ತಡ ತಂತ್ರ  ಮುಂದುವರಿಸಿದಂತಿದೆ.

ಈ ಬಗ್ಗೆ  ಪ್ರತಿಕ್ರಿಯಿಸಿರುವ ರಮೇಶ್‌ ಕತ್ತಿ, ಈ ಹಿಂದೆ ಲೋಕಸಭಾ ಚುನಾವಣೆಗೆ ಟಿಕೆಟ್‌ ಕೈತಪ್ಪಿದ ಸಂದರ್ಭದಲ್ಲಿ ರಾಜ್ಯಸಭೆಗೆ ಆಯ್ಕೆ ಮಾಡುವುದಾಗಿ ಮುಖ್ಯಮಂತ್ರಿ ಬಿ.ಎಸ್‌ .ಯಡಿಯೂರಪ್ಪ ಭರವಸೆ ನೀಡಿದ್ದರು. ಅದರಂತೆ ಅವಕಾಶ  ನೀಡಲಿದ್ದಾರೆ ಎಂಬ ನಿರೀಕ್ಷೆ ಇದೆ. ಹಾಗೆಯೇ ಹಿರಿತನ, ಅನುಭವದ ಆಧಾರದಲ್ಲಿ ಸಹೋದರ ಉಮೇಶ್‌ ಕತ್ತಿ ಅವರೂ ಸಚಿವರಾಗಬೇಕಿದೆ. ಆದರೆ ಈ ಬಗ್ಗೆ ಶಾಸಕರೊಂದಿಗೆ ಚರ್ಚೆ ನಡೆಸಿಲ್ಲ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next