Advertisement
ಜುಲೈ ಮತ್ತು ಆಗಸ್ಟ್‌ನಲ್ಲಿ ರೈತರು ರಾಗಿ ಬಿತ್ತನೆ ಮಾಡಿದ್ದು, ಮಳೆ ಆಗಿರಲಿಲ್ಲ. ನಂತರ ಬಂದಮಳೆಗೆ ರಾಗಿ ಪೈರು ಮೊಳಕೆಯೊಡೆದು ಹುಟ್ಟಿಬಂದಿತ್ತು. ಕಳೆದ ಹದಿನೈದು ದಿನಗಳಿಂದ ಉತ್ತಮ ಮಳೆ ಯಾಗುತ್ತಿರುವುದರಿಂದ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ.
Related Articles
Advertisement
ಇದರಿಂದ ರೈತರಿಗೆ ಹೆಚ್ಚು ಅನುಕೂಲವಾಗುವಂತೆ ಆಗುತ್ತಿದೆ. ರೈತರು ನಿತ್ಯಬಳಕೆಗೆ ಸಾಕಾಗುವಷ್ಟು ಇಟ್ಟುಕೊಂಡು ಉಳಿದ ರಾಗಿಯನ್ನು ಮಾರಾಟ ಮಾಡುತ್ತಿದ್ದರಿಂದ ಖರ್ಚಿನ ಭಾಗವಾದರೂ ಸಿಗುತ್ತಿತ್ತು. ಈ ವರ್ಷವೂ ಅದೇ ನಿರೀಕ್ಷೆಯಲ್ಲಿರುವ ರೈತರು ಮಳೆ ಬಿಂದಿರುವುದರಿಂದ ತುಸು ಖುಷಿಯಲ್ಲಿದ್ದಾರೆ. ರಾಸುಗಳಿಗೆ ಮೇವಿನ ಕೊರತೆ ನೀಗಿದೆ. ಹೆಚ್ಚು ಹುಲ್ಲು ಬರುವುದರಿಂದ ರಾಸುಗಳಿಗೆ ಮೇವು ಸಿಗುವಂತಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ರೈತರು ಇಂದಿಗೂ ಸಹ ಹೈನುಗಾರಿಕೆಯನ್ನು ನಂಬಿದ್ದಾರೆ. ಭೂಮಿತಾಯಿ ಹಸಿರಿನಿಂದ ಕಂಗೊಳಿಸುತ್ತಿದ್ದು, ರಾಸುಗಳಿಗೆ ಬರಪೂರ ಮೇವು ಸಿಗುತ್ತಿದ್ದು ರೈತರಿಗೆ ನಿಟ್ಟುಸಿರು ಬಿಡುವಂತಾಗಿದೆ.
ಜಿಲ್ಲೆಯಲ್ಲಿ ಮಳೆ- ಬಿತ್ತನೆ ಮಾಹಿತಿ-
ಜಿಲ್ಲೆಯಲ್ಲಿ ಜನವರಿಯಿಂದ ಅಕ್ಟೋಬರ್ ವರೆಗೆ 910ಮಿ.ಮಿ. ಮಳೆಯಾಗಿದೆ. ಅ, 1 ರಿಂದ 18ರವರೆಗೆ 214ಮಿ.ಮೀ. ಮಳೆಯಾಗಿದೆ.
ಅಕ್ಟೋಬರ್ ಮಾಹೆಯಲ್ಲಿ ದೇವನಹಳ್ಳಿ-214ಮಿ. ಮೀ., ದೊಡ್ಡಬಳ್ಳಾಪುರ-245ಮಿ.ಮೀ., ನೆಲಮಂಗಲ-221ಮಿ.ಮೀ., ಹೊಸಕೋಟೆ- 157ಮಿ.ಮೀ. ಒಟ್ಟು 214ಮಿ.ಮೀ. ಮಳೆಯಾಗಿದೆ.
ಜನವರಿಯಿಂದ ಅಕ್ಟೋಬರ್ ವರೆಗೆ ದೇವನಹಳ್ಳಿ- 867ಮಿ.ಮೀ., ದೊಡ್ಡಬಳ್ಳಾಪುರ- 967ಮಿ.ಮೀ., ಹೊಸಕೋಟೆ-886ಮಿ.ಮೀ., ನೆಲಮಂಗಲ-879ಮಿ.ಮೀ. ಒಟ್ಟು 910ಮಿ.ಮೀ. ಮಳೆಯಾಗಿದೆ.
ಜಿಲ್ಲೆಯಲ್ಲಿ ಸುಮಾರು 53350 ಹೆಕ್ಟೇರ್ ರಾಗಿ ಬಿತ್ತನೆ ಮಾಡಿದ್ದಾರೆ. ರಾಗಿ ಬೆಳೆಯನ್ನು ನಂಬಿದ್ದಾರೆ. ಶೇ.105.7ರಷ್ಟು ರಾಗಿ ಬಿತ್ತನೆ ಕಾರ್ಯ ಮುಗಿದಿದೆ.
ದೇವನಹಳ್ಳಿ-10842ಹೆಕ್ಟೇರ್, ದೊಡ್ಡಬಳ್ಳಾಪುರ- 16710ಹೆಕ್ಟೇರ್, ಹೊಸಕೋಟೆ-9712ಹೆಕ್ಟೇರ್, ನೆಲಮಂಗಲ-16086ಹೆಕ್ಟೇರ್ ಒಟ್ಟು 53350ಹೆಕ್ಟೇರ್‌ರಾಗಿ ಬಿತ್ತನೆಯಾಗಿದೆ.
“ಕಳೆದವರ್ಷ ತೆನೆ ಬಿಡುವ ವೇಳೆಗೆ ಮಳೆ ಕೈಕೊಟ್ಟ ಪರಿಣಾಮ ಇಳುವರಿ ಕಡಿಮೆ ಬಂದಿತ್ತು. ಈ ಭಾರಿ ಉತ್ತಮ ಮಳೆಯಾಗುತ್ತಿರುವುದರಿಂದ ರಾಗಿ ಬೆಳೆ ಉತ್ತಮ ಇಳುವರಿ ಬರುವ ನಿರೀಕ್ಷೆಯಲ್ಲಿದ್ದೇವೆ. ಕಳೆದ ಹದಿನೈದು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಕೃಷಿಗೆ ಅನುಕೂಲವಾಗಿದೆ.”
– ರವಿಕುಮಾರ್, ರೈತ
ಜಿಲ್ಲೆಯ ಎಲ್ಲಾಕಡೆ ಮಳೆ ಸುರಿಯುತ್ತಿದೆ. ಇದರಿಂದ ರಾಗಿಬೆಳೆಗೆ ಬಹಳ ಅನುಕೂಲವಾಗಿದೆ. ಜಿಲ್ಲೆಯಲ್ಲಿ 53350ಹೆಕ್ಟೇರ್ ರಾಗಿ ಬಿತ್ತನೆಯಾಗಿದೆ. ಉತ್ತಮ ಇಳುವರಿ ಬರುವ ಸಾಧ್ಯತೆಯಿದೆ. ರೈತರಿಗೆ ಎಲ್ಲಾ ರೀತಿಯ ಸಲಹೆಗಳನ್ನು ನೀಡಲಾಗುತ್ತಿದೆ.
– ವಿನುತ, ಜಿಲ್ಲಾ ಕೃಷಿ ಇಲಾಖೆಯ ಉಪನಿರ್ದೇಶಕಿ.