Advertisement
ರಸ್ತೆ ಅಭಿವೃದ್ಧಿಗೆ ಶಾಸಕ ಸಂಜೀವ ಮಠಂದೂರು 10 ಲಕ್ಷ ರೂಪಾಯಿ ಅನುದಾನ ನೀಡಿದ್ದರು. 2018-19ರಲ್ಲಿ ಈ ಕಾಮಗಾರಿಯು ಅನುಮೋದನೆಗೊಂಡಿದ್ದು, 205 ಮೀ. ರಸ್ತೆಗೆ ಕಾಂಕ್ರೀಟ್ ಕಾಮಗಾರಿ ನಡೆಸಲಾಗಿತ್ತು. ಆದರೆ ಅದು ಕಳಪೆಯಾಗಿದೆ. ರಸ್ತೆಯ ಮಧ್ಯಭಾಗದಲ್ಲಿ ಉದ್ದಕ್ಕೆ ಬಿರುಕು ಬಿಡುತ್ತಾ ಸಾಗಿದ್ದು, ದಿನ ಹೋದ ಹಾಗೆ ಅಗಲವಾಗುತ್ತಲೇ ಹೋಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸುತ್ತಾರೆ.
ಕಾಂಕ್ರೀಟ್ ರಸ್ತೆಯನ್ನು ಮಾಡುವಾಗ ರಸ್ತೆಯನ್ನು ಲೆವೆಲಿಂಗ್ ಮಾಡಿ ಶೀಟ್ ಹಾಕಿ ಬಳಿಕ ಅದರ ಮೇಲೆ ಕಾಂಕ್ರೀಟ್ ಹಾಕಬೇಕು. ಸಿಮೆಂಟ್, ಜಲ್ಲಿ, ಮರಳಿನ ಮಿಶ್ರಣವನ್ನು ಸರಿಯಾದ ಪ್ರಮಾಣದಲ್ಲಿ ಹಾಕಬೇಕು. ರಸ್ತೆ ಆದ ಬಳಿಕ ಅದನ್ನು ಬಹಳ ದಿನ ನೀರು ಹಾಕಿ ಕ್ಯೂರಿಂಗ್ ಮಾಡಬೇಕು. ಆದರೆ ಇಲ್ಲಿ ಅದೆಲ್ಲ ನಡೆದಿಲ್ಲ. ರಸ್ತೆಯ ಬದಿ ಮಣ್ಣು ತುಂಬಿಸುವ ಕೆಲಸವೂ ಆಗಿಲ್ಲ. ಮಳೆಗಾಲದಲ್ಲಿ ರಸ್ತೆಯ ಬಿರುಕು ಇನ್ನಷ್ಟು ಹೆಚ್ಚಾಗಿ ರಸ್ತೆಯೇ ಕುಸಿದು ಬೀಳುವ ಭೀತಿ ಇದೆ. ಕಳಪೆ ಕಾಮಗಾರಿಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ನಿವಾಸಿ ರೂಪೇಶ್ ರೈ ಅಲಿಮಾರ ಅಗ್ರಹಿಸಿದ್ದಾರೆ.