Advertisement

Vijayanagara: ಹುಲಿಕೆರೆ ಕೆರೆ ಬಳಿಯ ರಸ್ತೆಯಲ್ಲಿ ಬಿರುಕು.. ಕುಸಿಯುವ ಭೀತಿ, ಆತಂಕದಲ್ಲಿ ಜನ

09:42 AM Oct 12, 2024 | Team Udayavani |

ಕಾನಾಹೊಸಹಳ್ಳಿ (ವಿಜಯನಗರ): ಕೂಡ್ಲಿಗಿ ತಾಲೂಕಿನಲ ದೊಡ್ಡ ಕೆರೆಗಳಲ್ಲಿ ಒಂದು ಕೆರೆಯಾಗಿರುವ ಕಾನಾಹೊಸಹಳ್ಳಿ ಹೋಬಳಿಯ ಹುಲಿಕೆರೆ ಕೆರೆಗೆ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಗೆ ಕೆರೆ ಸಂಪೂರ್ಣ ಬರ್ತಿಯಾಗುವ ಹಂತದಲ್ಲಿ ಇದ್ದು ಯಾವುದೇ ಕ್ಷಣದಲ್ಲಿ ಕೆರೆ ಕೋಡಿ ಬೀಳುವ ಸಾದ್ಯತೆ ಇದೆ ಆದರೆ, ಕೆರೆಯ ಏರಿಯ ಒಂದು ಭಾಗ ಮಣ್ಣು ಕುಸಿದಿದ್ದು ಹಾಗೂ ರಸ್ತೆ ಬಿರುಕು ಬಿಟ್ಟಿದ್ದು ಕೆರೆ ಒಡೆಯುವ ಆತಂಕ ಹೆಚ್ಚಾಗಿದೆ, ಹಲವು ತಿಂಗಳ ಹಿಂದೆ ಕೆರೆಯ ಏರಿ ದುರಸ್ತಿಗೊಳಿಸಿದ್ದು ಒಂದು ಭಾಗದಲ್ಲಿ ತಡೆ ಗೋಡೆ ನಿರ್ಮಾಣ ಮಾಡಿದ್ದು ಮತ್ತೊಂದು ಕಡೆ ಹಾಗೆಯೆ ಬಿಟ್ಟಿರುವುದು ಕೆರೆಯ ಏರಿ ಕುಸಿತಕ್ಕೆ ಕಾರಣವಾಗಿದೆ,

Advertisement

ಎರಡು ದಿನಗಳ ಹಿಂದೆ ಕೆರೆ ಏರಿ ಬಿರುಕು ಬಿಟ್ಟಿರುವ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಈ ವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಕೆರೆಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದ್ದು ಹೀಗೆ ಮುಂದುವರಿದರೆ ಕೆರೆ ಒಡೆದು ಹೋಗುವ ಲಕ್ಷಣಗಳಿದ್ದು ಕೆರೆ ಒಡೆದರೆ, ಹತ್ತಾರು ಹಳ್ಳಿಗಳಿಗೆ ಹಾನಿಯಾಗುತ್ತದೆ ಕೂಡಲೆ ದುರಸ್ತಿ ಗೊಳಿಸಬೇಕು ಎಂದು,ಗ್ರಾಮದ ಮುಖಂಡರಾದ, ಮಾಜಿ ತಾಪಂ ಅದ್ಯಕ್ಷ ವೆಂಕಟಸ್ವಾಮಿ, ಸಿಆರ್ ಪಿ ಮಾರಣ್ಣ ,ದುರುಗೇಶ್,ಎಚ್,ಎಂ, ಶರಣಪ್ಪ, ವಿರೇಶ್, ಕರಿಬಸವೇಶ, ಕಣದಮನೆ ಶಿವು, ಬೋರಣ್ಣ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: Renukaswamy Case: ಬೆನ್ನು ನೋವಿನಿಂದ ಬಳಲುತ್ತಿರುವ ದರ್ಶನ್.. ಬೆಂಗಳೂರು ಶಿಫ್ಟ್ ಆಗ್ತಾರಾ?

Advertisement

Udayavani is now on Telegram. Click here to join our channel and stay updated with the latest news.

Next