ಕಿನ್ನಿಗೋಳಿ: ಹೆತ್ತಮಾತೆ ಹೆತ್ತು ಹೊತ್ತು ಒಂಬತ್ತು ತಿಂಗಳು ಹಾಲು ಉಣಿಸಿದರೇ ಗೋಮಾತೆ ಜೀವನ ಪೂರ್ತಿ ಹಾಲು ಉಣಿಸುವ ವಿಶ್ವಮಾತೆಯಾಗಿದ್ದಾರೆ ಎಂದು ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ ಹೇಳಿದರು.
ಅ. 30 ರಂದು ಕಿನ್ನಿಗೋಳಿ ಮಹಾಮ್ಮಾಯಿ ಕಟ್ಟೆಯ ಬಳಿಯಲ್ಲಿ ವಿಶ್ವಹಿಂದೂ ಪರಿಷತ್, ಬಜರಂಗದಳ ಮೂಲ್ಕಿ ಪ್ರಖಂಡ ಕಿನ್ನಿಗೋಳಿ ಘಟಕದ ಆಶ್ರಯದಲ್ಲಿ ನಡೆದ ದೀಪಾವಳಿ ಸಂದರ್ಭದಲ್ಲಿ ಗೋಪೂಜೆಯಲ್ಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಯುಗಪುರುಷದ ಭುವನಾಭಿರಾಮ ಉಡುಪ ಮಾತನಾಡಿ, ತುಳುನಾಡಿನ ಆಚರಣೆಗಳು ನಮ್ಮ ಸಂಸ್ಕೃತಿ ಆದರಲ್ಲಿ ಗೋಪೂಜೆಯ ವಿಶಿಷ್ಟವಾಗಿದೆ ಎಂದರು.
ವೇ|ಮೂ| ಸುಬ್ರಹ್ಮಣ್ಯ ಹೆಬ್ಟಾರ್ ಗೋ ಪೂಜೆ ನಡೆಸಿಕೊಟ್ಟರು. ಮೆನ್ನಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಸರೋಜಿನಿ ಗುಜರನ್, ಈಶ್ವರ್ ಕಟೀಲು, ವಿಶ್ವ ಹಿಂದೂ ಪರಿಷತ್ ವೇದವ್ಯಾಸ ಉಡುಪ , ಸುನಿಲ್, ಪ್ರದೀಪ್ ಸರಿಪಳ್ಳ , ತಾ.ಪಂ. ಸದಸ್ಯ ದಿವಾಕರ ಕರ್ಕೇರ, ಶಾರಾದೋತ್ಸವ ಸಮಿತಿಯ ಅಧ್ಯಕ್ಷ ಸುಬ್ರಹ್ಮಣ್ಯ ಶೆಣೈ, ಕಿನ್ನಿಗೋಳಿ ಜಿಎಸ್‌ಬಿ ಸಭಾ ಹಾಗೂ ರಾಮ ಮಂದಿರ ಕಾರ್ಯದರ್ಶಿ ರಾಧಾಕೃಷ್ಣ ನಾಯಕ್, ವಿಶ್ವಹಿಂದೂ ಪರಿಷತ್ ಕಾರ್ಯದರ್ಶಿ ಸಂತೋಷ್ ಶೆಟ್ಟಿ ಪುನರೂರು, ಪ್ರಕಾಶ್ ಹೆಗ್ಡೆ, ಯಜ್ಞತಾ ಆಚಾರ್ಯ, ಸುನಿಲ್ ಗುತ್ತಕಾಡು, ಭಾಸ್ಕರ ಪೂಜಾರಿ ಉಲ್ಲಂಜೆ , ನಿತ್ಯಾನಂದ ರಾವ್, ಹರ್ಷಿತ್ , ಮೆಹೇಶ್ ಕರ್ಕೇರ, ಪ್ರದೀಪ್ ಸರಿಪಳ್ಳ, ಅಶೋಕ್ ಕೆಮ್ಮಡೆ, ಹರೀಶ್, ಗಣೇಶ್ ಭಂಡಾರ್‌ಕರ್ ಮೊದಲಾದವರು ಉಪಸ್ಥಿತರಿದ್ದರು.