Advertisement
ಹಸುರು- ಶ್ರೀಮಂತಿಕೆಮಲ್ಪೆಯ ಕಿದಿಯೂರು ಗ್ರಾಮದ ನಿವಾಸಿಯಾದ ಯತೀಶ್ ಹಾಗೂ ಅಶ್ವಿತಾ ದಂಪತಿ ಮನೆಯಲ್ಲಿ ಬಳಕೆಯಾದ ಪ್ಲಾಸ್ಟಿಕ್ ಬಾಟಲಿಗಳಿಗೆ ಹಸಿರು ಸ್ಪರ್ಶ ನೀಡಿದ್ದಾರೆ. ತಂಪು ಪಾನೀಯ ಬಾಟಲಿಗಳನ್ನು ಆಕರ್ಷಕವಾಗಿ ಕತ್ತರಿಸಿ ಆಲಂಕಾರಿಕ, ಹೂವಿನ ಗಿಡ, ಗಿಡ ಮೂಲಿಕೆ, ಆಯ್ದ ತರಕಾರಿ ಗಿಡಗಳನ್ನು ಬೆಳೆಸುವ ಪಾತ್ರೆಯಾಗಿ ಪರಿವರ್ತಿಸಿದ್ದಾರೆ. 50ಕ್ಕೂ ಅಧಿಕ ಬಾಟಲಿ ಗಾರ್ಡನ್‌ನಲ್ಲಿ 30 ಬಗೆಯ ಗಿಡಗಳನ್ನು ಬೆಳೆಸಿದ್ದಾರೆ.
ಯತೀಶ್ ಅವರು ಕಳೆದ ಅನೇಕ ವರ್ಷಗಳಿಂದ ಅಪರ ಜಿಲ್ಲಾಧಿಕಾರಿಗಳ ಆಪ್ತ ಕಾರ್ಯದರ್ಶಿಯಾಗಿ ಉಡುಪಿ ಡಿಸಿ ಕಚೇರಿಯಲ್ಲಿ ಹಾಗೂ ಪತ್ನಿ ಅಶ್ವಿತಾ ಸರಕಾರಿ ಶಾಲೆ ಶಿಕ್ಷಕಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಪರಿಸರದ ಬಗ್ಗೆ ಅಪಾರ ಕಾಳಜಿ ಇರುವ ದಂಪತಿ ಪ್ಲಾಸ್ಟಿಕ್ ಮರುಬಳಕೆ ನಿಟ್ಟಿನಲ್ಲಿ ಬಾಟಲಿ ಗಾರ್ಡನ್ ನಿರ್ಮಿಸಿದ್ದಾರೆ. ಅಂದದ ಜತೆಗೆ ಪರಿಸರ ಕಾಳಜಿಯೂ ಇದೆ. ಸಾರ್ವಜನಿಕರಿಗೂ ಅರಿವು
ಶಿಕ್ಷಕಿ ಅಶ್ವಿತಾ ಶಾಲಾ ಮಕ್ಕಳಿಗೆ ಪ್ಲಾಸ್ಟಿಕ್ ಮರುಬಳಕೆ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮೊದಲ ಹಂತದಲ್ಲಿ ತಮ್ಮ ಮನೆಯಲ್ಲಿ ಬಾಟಲ್ ಗಾರ್ಡನ್ ಕೃಷಿ ಮಾಡಿ ಯಶಸ್ಸು ಕಂಡಿದ್ದು, ಇದೀಗ ಸ್ವತ್ಛತೆ ಹಾಗೂ ಪ್ಲಾಸ್ಟಿಕ್ ಮರುಬಳಕೆ ಕುರಿತು ಸಾರ್ವಜನಿಕರಿಗೆ ಮತ್ತು ಮಕ್ಕಳಿಗೆ ಅರಿವು ಮೂಡಿಸುತ್ತಿದ್ದಾರೆ.ಈ ಜೋಡಿ ಬಿಡುವಿನ ಸಮಯವನ್ನು ಬಳಸಿಕೊಂಡು ಬಾಟಲ್ ಗಾರ್ಡನ್ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.
Related Articles
ಪ್ಲಾಸ್ಟಿಕ್ ಬಾಟಲಿಗಳನ್ನು ಭಿನ್ನ ಅಳತೆ-ಆಕಾರದಲ್ಲಿ ಕತ್ತರಿಸಿ, ಮನೆ ತಾರಸಿಗೆ ಉದ್ದವಾದ ಹಗ್ಗಕ್ಕೆ ಬಾಟಲಿಗಳನ್ನು ಒಂದರ ಮೇಲೊಂದರಂತೆ ಒಂದು ನಿರ್ದಿಷ್ಟ ಅಂತರದಲ್ಲಿ ಕಟ್ಟಿ ತೂಗು ಬೀಳುವಂತೆ ನೇತುಹಾಕಬೇಕು. ಬಳಿಕ ಕೆಂಪು ಮಣ್ಣು ಮತ್ತು ಮರಳು, ತೆಂಗಿನ ನಾರಿನ ಹುಡಿ, ಗೊಬ್ಬರ ತುಂಬಿದ ಪ್ಲಾಸ್ಟಿಕ್ ಬಾಟಲಿಯಲ್ಲಿ ಕಡಿಮೆ ಬೇರು ಗಿಡವನ್ನು ನೆಡಬೇಕು. ಒಂದೂವರೆ ತಿಂಗಳಲ್ಲಿ ಗಿಡಗಳು ಚಿಗುರಿ ಹೂವು ಬಿಡಲು ಪ್ರಾರಂಭವಾಗುತ್ತದೆ. ಕಡಿಮೆ ಖರ್ಚಿನಲ್ಲಿ ಪರಿಶ್ರಮವಿಲ್ಲದೆ ಬಾಟಲಿ ಗಾರ್ಡನ್ ನಿರ್ಮಿಸಬಹುದು.
Advertisement
ಪ್ಲಾಸ್ಟಿಕ್‌ಗೆ ಹಸುರು ಸ್ಪರ್ಶಬಿಸಿಲ ಬೇಗೆ ತಣಿಸಲಿಕ್ಕೆ ತಂಪುಪಾನೀಯಗಳ ಮೊರೆಹೋಗುತ್ತೇವೆ. ಅನಂತರ ಎಸೆಯುವುದರಿಂದ ಪರಿಸರ ಮಾಲಿನ್ಯವಾಗುತ್ತದೆ. ಇದನ್ನು ತಡೆಗಟ್ಟಿ ಮನೆಯ ಅಂದವನ್ನೂ ಹೆಚ್ಚಿಸುವ ನಿಟ್ಟಿನಲ್ಲಿ ಪ್ಲಾಸ್ಟಿಕ್ ಬಾಟಲಿಗಳಿಗೆ ಹಸುರು ಪರಿಸರ ಸ್ಪರ್ಶ ನೀಡಿದ್ದೇವೆ. ಬಾಟಲಿ ಗಾರ್ಡನ್‌ಗೆ ಪತ್ನಿ ಹಾಗೂ ಮಗಳು ಧನ್ವಿ ಸಹಕಾರ ನೀಡುತ್ತಿದ್ದಾರೆ.
-ಯತೀಶ್,
ಕಿದಿಯೂರು ನಿವಾಸಿ