Advertisement

ಇಂಧನ ಸ್ವಾವಲಂಬನೆ ಸಾಧಿಸಿದರೆ ದೇಶ ಶಕ್ತಿಶಾಲಿ

06:30 PM Sep 07, 2022 | Team Udayavani |

ಕುಷ್ಟಗಿ: ನಮ್ಮ ದೇಶ ಇಂಧನದಲ್ಲಿ ಸ್ವಾವಲಂಬನೆ ಸಾಧಿಸಿದರೆ ನಮ್ಮನ್ನು ತಡೆಯುವ ಸಾಮಾರ್ಥ್ಯ ಯಾರಿಗೂ ಇರುವುದಿಲ್ಲ ಎಂದು ಕೊಲ್ಲಾಪುರ ಕನೇರಿ ಶ್ರೀಕ್ಷೇತ್ರ ಸಿದ್ದಗಿರಿ ಮಹಾಸಂಸ್ಥಾನ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮೀಜಿ ಹೇಳಿದರು.

Advertisement

ಮಂಗಳವಾರ ಇಲ್ಲಿನ ಪಿಸಿಎಚ್‌ ಪ್ಯಾಲೇಸ್‌ನಲ್ಲಿ ವಿಜಯ ಚಂದ್ರಶೇಖರ ಬಯೋಫಿಲ್‌ ಪ್ರೈವೆಟ್‌ ಲಿಮಿಟೆಡ್‌ ಹಾಗೂ ಶ್ರೀ ವಿಜಯಚಂದ್ರಶೇಖರ ಅಗ್ರೋ ಫಾರ್ಮರ್ ಪ್ರೋಡ್ನೂಸರ್‌ ಕಂಪನಿ ಲಿಮಿಟೆಡ್‌ ಸಮಾರಂಭ ಹಾಗೂ ರೈತರ ಸಹಭಾಗಿತ್ವದ ಜೈವಿಕ ಇಂಧನ ಉತ್ಪಾದನೆ, ಸಾವಯವ ಕೃಷಿ ಕುರಿತ ಕಾರ್ಯಾಗಾರದಲ್ಲಿ ಅವರು ಸಾನಿಧ್ಯವಹಿಸಿ ಮಾತನಾಡಿದರು.

ರೈತರು ನೇಪಿಯರ್‌ ಹುಲ್ಲು ಬೆಳೆದು, ಆ ಹುಲ್ಲಿನಿಂದ ಸಿಎನ್‌ಜಿ ಗ್ಯಾಸ್‌ ತಯಾರಾಗಬೇಕು. ಆ ಗ್ಯಾಸ್‌ ಮೂಲಕವೇ ವಾಹನಗಳು ಚಲಿಸಬೇಕಿದೆ. ನಮ್ಮ ದೇಶದ ಅತಿ ಹೆಚ್ಚು ಹಣ ಡಿಸೇಲ್‌, ಪೆಟ್ರೋಲ್‌, ಗ್ಯಾಸ್‌ಗೆ ಖರ್ಚಾಗುತ್ತದೆ. ಗ್ಯಾಸ್‌, ಇಥೆನಾಲ್‌, ಹೈಡ್ರೋಜನ್‌ ನಮ್ಮ ರೈತರೇ ಉತ್ಪಾದಿಸುವ ಹಿನ್ನೆಲೆಯಲ್ಲಿ ನಮ್ಮ ದೇಶದಲ್ಲಿ ಆಂದೋಲನಗಳು ಶುರುವಾಗಿವೆ. ಮುಂಬರುವ ದಿನಗಳಲ್ಲಿ ನಮ್ಮ ದೇಶವು ಇಂಧನದಲ್ಲಿ ಸ್ವಾವಲಂಬನೆ ಸಾಧಿಸುವಲ್ಲಿ ಯಾವುದೇ ಸಂದೇಹವಿಲ್ಲ ಎಂದರು.

ಪ್ರತಿ ವರ್ಷ 8 ಲಕ್ಷ ಕೋಟಿ ರೂ. ನೈಸರ್ಗಿಕ ಗ್ಯಾಸ್‌ ಖರೀ ದಿಸಲಾಗುತ್ತಿದೆ. ಎಲ್‌ಪಿಜಿ ಮುಕ್ತ ಗ್ರಾಮಗಳಿಂದ ವಿದೇಶಗಳ ಅವಲಂಬನೆ ಕಡಿಮೆಯಾಗಿ ಅಷ್ಟು ಹಣವೂ ನಮ್ಮ ದೇಶದಲ್ಲಿ ಉಳಿಯಲಿದೆ. ರೈತರು ಮನಸ್ಸು ಮಾಡಿದರೆ ನೈಸರ್ಗಿಕ ಗ್ಯಾಸ್‌ನ್ನು ಉತ್ಪಾದಿಸಲು ಸಾಧ್ಯವಿದೆ ಎಂದರು. ನೇಪಿಯರ್‌ ಹುಲ್ಲು ಕಡಿಮೆ ನೀರಿನಲ್ಲೂ ಸಮೃದ್ಧವಾಗಿ ಬೆಳೆಯಬಹುದು. ಇದು ಜಾನುವಾರುಗಳಿಗೆ ಆಹಾರವಾಗಿ ಹಾಗೂ ಜೈವಿಕ ಇಂಧನವಾಗಿ ಬಳಸಿಕೊಳ್ಳಬಹುದಾಗಿದೆ. ಇದು
ರೈತರ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಾಗಿದ್ದು, ಈಗಾಗಲೇ 15 ಸಾವಿರ ರೈತರು ನೋಂದಣಿ ಮಾಡಿಕೊಂಡಿದ್ದಾರೆ. ಇದರ ಮುಖ್ಯಸ್ಥ ಶೇಖರಗೌಡ ಮಾಲಿಪಾಟೀಲ ಅವರು, ಇನ್ನಷ್ಟು ರೈತರನ್ನು ಸೇರಿಸಿ ರೈತರಲ್ಲಿ ವಿಶ್ವಾಸ ಮೂಡಿಸಬೇಕಿದೆ.

ನೇಪಿಯರ್‌ ಹುಲ್ಲು ಹೆಚ್ಚು ಕಡಿಮೆ 20 ಅಡಿವರೆಗೂ ಬೆಳೆಯಬಹುದು. ಎಕರೆಗೆ ಕನಿಷ್ಟ 250 ಟನ್‌ನಿಂದ 800 ಟನ್‌ವರೆಗೂ ಬೆಳೆಯಬಹುದಾಗಿದೆ. ಪ್ರತಿ ಕೆ.ಜಿ.ಗೆ 1 ರೂ. ಅದರೆ ಲಕ್ಷಾಂತರ ರೂ. ಆದಾಯ ಬರಲಿದೆ. ಮೊದಲ ಬೆಳೆ ಇಳುವರಿ ಕಡಿಮೆ ಬರಲಿದ್ದು ನಂತರ. ಬೆಳೆ ಟಿಸಿಲು ಒಡೆದು ಹೆಚ್ಚು ಬೆಳೆ ಬರಲಿದೆ ಎಂದರು.

Advertisement

ಮುಂಬೈ ಎಂಸಿಎಲ್‌ ಸೀನಿಯರ್‌ ಪ್ರೈಮ್‌ ಬಿ.ಡಿ.ಎ. ಕಾರ್ತಿಕ್‌ ರಾಹುಲ್‌, ರಮೇಶ ಪಾಟೀಲ ಸೊಲ್ಲಾಪುರದ ಅಶೋಕ ಮೇರಾಕೋರ್‌, ಆರ್‌ಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ಶಿವಶಂಕರಗೌಡ ಪಾಟೀಲ, ಎಸ್‌.ಕೆ. ಗೌಡರ್‌, ಎಂ.ಜೆ. ಗೌಡರ್‌, ಲಕ್ಷ್ಮಣ ಮರಡಿತೋಟ, ದೇವೇಂದ್ರಪ್ಪ ಬಳೂಟಗಿ, ಮಲ್ಲಿಕಾರ್ಜುನ ಸಂತೋಜಿ, ದೊಡ್ಡಬಸನಗೌಡ ಬಯ್ನಾಪುರ, ಎಂಪಿಒ ಶೇಖರಗೌಡ ಮಾಲಿಪಾಟೀಲ ಮತ್ತೀತರಿದ್ದರು.

ಈ ಪ್ರದೇಶ ಕಡಿಮೆ ಮಳೆ ಬೀಳುವ ಪ್ರದೇಶ ಎಂಬ ಹಣೆಪಟ್ಟಿ ಇದೆ. ಇದನ್ನೇ ಅವಕಾಶವಾಗಿ ಬಳಸಿಕೊಂಡು ಕಡಿಮೆ ನೀರಿನಲ್ಲಿ ನೇಪಿಯರ್‌ ಹುಲ್ಲು ಬೆಳೆದು ಕಂಪನಿ ಶ್ರೀಮಂತವಾದರೆ ಸಾಲದು, ರೈತರು ಶ್ರೀಮಂತರಾಗಬೇಕಿದೆ. ರೈತರು ಶ್ರೀಮಂತರಾದರೆ ಕಂಪನಿ ತನ್ನಿಂದ ತಾನೇ ಶ್ರೀಮಂತವಾಗಲಿದೆ.
ಶ್ರೀ ಅದೃಶ್ಯ ಕಾಡಸಿದ್ದೇಶ್ವರ
ಮಹಾಸ್ವಾಮೀಜಿ, ಸಿದ್ದಗಿರಿ
ಮಹಾಸಂಸ್ಥಾನ ಕನೇರಿ ಕೊಲ್ಲಾಪುರ

Advertisement

Udayavani is now on Telegram. Click here to join our channel and stay updated with the latest news.

Next