Advertisement

ಒಂದು ಕೆಮ್ಮಿನ ರಿಂಗ್‌ಟೋನ್‌!

03:45 AM Jul 18, 2017 | Team Udayavani |

ಸೈಲೆಂಟಾಗಿ ಕ್ಲಾಸು ಸಾಗುತ್ತಿರುವ ನಡುವೆ ಗೆಳೆಯನ ಮೊಬೈಲ್‌ನ ರಿಂಗ್‌ ಟೋನ್‌ ಅಬ್ಬರಿಸಿತು. ಅವನನ್ನು ಹೇಗೆ ಇಡೀ ಕ್ಲಾಸು ಲೆಕ್ಚರರ್‌ ಬೈಗುಳದಿಂದ ಬಚಾವ್‌ ಮಾಡಿತು? ಒಂದು ಸ್ವಾರಸ್ಯ ಘಟನೆ…

Advertisement

ಕಾಲೇಜಿನ ತುಂಟಾಟಗಳಿಗೆ ಕೊನೆಯೇ ಇಲ್ಲ. ಮೊನ್ನೆ ಕ್ಲಾಸ್‌ರೂಮ್‌ನಲ್ಲಿ ಹಾಗೆಯೇ ಆಯಿತು. ಲೆಕ್ಚರರ್‌ ಪಾಠ ಮಾಡುವಾಗ, ನನ್ನ ಗೆಳೆಯನ ಮೊಬೈಲ್‌ ರಿಂಗ್‌ ಆಗತೊಡಗಿತು. ಮುಂದೆ ಕೂತಿದ್ದವರ ಕಿವಿಗೆ ಆ ಶಬ್ದ ಬೇಗನೆ ಬಂದು ಅಪ್ಪಳಿಸಿತು. ಏನ್‌ ಮಾಡೋದು? ಗೆಳೆಯ ಸಂಕಷ್ಟದಲ್ಲಿದ್ದಾನೆಂದರೆ, ನೆರವಾಗಲೇಬೇಕಲ್ಲವೇ? ಅದಕ್ಕೆ ಆ ಕ್ಷಣದಲ್ಲಿ ಆ ರಿಂಗ್‌ಟೋನ್‌ ಸದ್ದು, ಲೆಕ್ಚರರ್‌ ಕಿವಿಗೆ ಬೀಳದ ಹಾಗೆ ನಾವು ಜೋರಾಗಿ ಕೆಮ್ಮುತ್ತಾ ನಟನೆ ಶುರುಮಾಡಿದೆವು. ಆತನು ಕೂಡ ಗಲಿಬಲಿಯಿಂದಲೇ ಬ್ಯಾಗ್‌ನ ಒಳಗಿಂದ ಮೊಬೈಲ್‌ ತೆಗೆದು ಅದನ್ನು ಕಟ್‌ ಮಾಡಲು ಯತ್ನಿಸುತ್ತಿದ್ದನಾದರೂ, ಮೊಬೈಲ್‌ ಸುಮ್ಮನಾಗುತ್ತಿಲ್ಲ. ಅಷ್ಟರಲ್ಲಾಗಲೇ ತರಗತಿಯ ಎಲ್ಲಾ ಬೆಂಚಿನವರಿಗೂ ವಿಷಯ ಮುಟ್ಟಿ, ಸ್ವಯಂಪ್ರೇರಿತರಾಗಿ ಕೆಮ್ಮಲು ಶುರು ಹಚ್ಚಿಕೊಂಡರು! ಕಡೆಗೆ ಪುಣ್ಯಾತ್ಮ ಗೆಳೆಯ ಕಾಲ್‌ ಮಾಡಲು ಗೊತ್ತಾಗದೆ ಮೊಬೈಲ್‌ ಸ್ವಿಚ್‌x ಆಫ್ ಮಾಡಿಬಿಟ್ಟ!

ತರಗತಿಯ ಎಲ್ಲರೂ ಒಂದೇ ಸಲ ಕೆಮ್ಮುತ್ತಿರುವುದನ್ನು ಕಂಡು ಸರ್‌ಗೆ ಗಾಬರಿ ಆಯ್ತು. ಆತಂಕದಿಂದಲೇ ಗಾಳಿಯಲ್ಲಿ ಏನಾದರೂ ವಾಸನೆ ಬರುತ್ತಿದೆಯಾ? ಉಸಿರಾಡಲು ತೊಂದರೆ ಆಗುತ್ತಿದೆಯಾ ಅಂತ ಯೋಗಕ್ಷೇಮ ವಿಚಾರಿಸಿದರು. ಯಾರೊಬ್ಬರೂ ತುಟಿ ಪಿಟಕ್‌ ಅನ್ನಲಿಲ್ಲ. 

ಲೆಕ್ಚರ್‌ ಸ್ವತಃ ಕಾಳಜಿ ವಹಿಸಿ, “ಮಳೆಯಾದ್ದರಿಂದ ಆರೋಗ್ಯದ ಸಮಸ್ಯೆ ಕಾಡುವುದು ಸಹಜ’ ಎಂದು ಹೇಳಿ ತರಗತಿಯ ಕಿಟಕಿಗಳನ್ನೆಲ್ಲ ತೆರೆಯುತ್ತಾ ಹೋದರು. ಆಮೇಲೆ ಪಾಠ ಮುಂದುವರಿಸಿದರು. ನಾವೆಲ್ಲರೂ ಎಲ್ಲಿ ಸಿಕ್ಕಿ ಬೀಳುತ್ತೇವೋ ಅಂತ ಉಸಿರು ಬಿಗಿಹಿಡಿದು ಕೂತಿದ್ದೆವು. ಕಡೆಗೆ ಅಬ್ಟಾ… ಸರ್‌ಗೆ ನಾವು ಮಾಡಿದ ಕಿತಾಪತಿ ಗೊತ್ತಾಗಲಿಲ್ಲ ಅಂತ ಸಮಾಧಾನವಾಯಿತು.

– ಪವಿತ್ರ ಎ. ಆರ್‌. ಅಂತರಗಟ್ಟೆ, ಕಡೂರು

Advertisement
Advertisement

Udayavani is now on Telegram. Click here to join our channel and stay updated with the latest news.

Next