Advertisement
ಇದರಿಂದಾಗಿ 2025ರ ಹೊತ್ತಿಗೆ ಈ ಸಂಸ್ಥೆಗಳು ಭಾರತದಿಂದ ಸುಮಾರು 1000 ಕೋಟಿ ಡಾಲರ್ ಮೌಲ್ಯದ ಉತ್ಪನ್ನಗಳನ್ನು ವಿವಿಧ ದೇಶಗಳಿಗೆ ರಫ್ತು ಮಾಡುವ ಸಾಮರ್ಥ್ಯವನ್ನು ಹೊಂದಲಿವೆ ಎನ್ನುವುದು ಅಮೆಜಾನ್ ಅಭಿಪ್ರಾಯ.
ಗೂಗಲ್, ವಾಲ್ಮಾರ್ಟ್, ಫೇಸುಬುಕ್, ಡೆಲ್ ಸಿಸ್ಕೋ, ಅಮೆಜಾನ್ ಹೀಗೆ ಸಾಲು ಸಾಲಾಗಿ ಬಹುರಾಷ್ಟ್ರೀಯ ಸಂಸ್ಥೆಗಳು ಭಾರತದ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಸಂಸ್ಥೆಗಳಿಗೆ ನೆರವು ನೀಡಲು ಮುಂದಾಗುತ್ತಿರುವೆ. ಇದು, ಡಿಜಿಟಲ್ ಸಾಕ್ಷರತೆ ದೃಷ್ಟಿಯಿಂದ ಸ್ವಾಗತಾರ್ಹ. ಆದರೆ, ಈ ರೀತಿ ನೆರವು ಪಡೆದ ಎಲ್ಲ ಭಾರತೀಯ ಸಂಸ್ಥೆಗಳಿಗೆ ದೇಶ ವಿದೇಶಗಳಲ್ಲಿ ಹೆಚ್ಚು ಗ್ರಾಹಕರು ಸಿಗುತ್ತಾರೆ ಎನ್ನಲು ಸಾಧ್ಯವಿಲ್ಲ. ನಿಮ್ಮ ಉತ್ಪನ್ನಗಳು ಹೆಚ್ಚು ಗ್ರಾಹಕರನ್ನು ತಲುಪಲು, ಅವರ ಜಾಹೀರಾತು ಸೇವೆಯನ್ನು ಬಳಸಬಹುದು. ಅಲ್ಲದೆ ಆನ್‌ಲೈನ್‌ನಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡಲು, ಆ ಸಂಸ್ಥೆಯ ಪರಿಣತರ ಸಹಾಯವನ್ನೂ ಪಡೆಯಬಹುದು. ಗ್ರಾಹಕರಿಗೆ ಯಾವ ಉತ್ಪನ್ನಗಳು ಬೇಕಾಗಿವೆ ಎಂದು ತಿಳಿಸುವ ಡೇಟಾ ವಿಶ್ಲೇಷಣೆ ಸೇವೆ, ಮತ್ತಿತರ ಮೌಲ್ಯಾಧಾರಿತ ಸೇವೆಗಳನ್ನು ಸಣ್ಣ ಮತ್ತು ಮಧ್ಯಮ ವಾಣಿಜ್ಯ ಸಂಸ್ಥೆಗಳಿಗೆ ಮಾರಾಟ ಮಾಡುವುದರ ಮೂಲಕ ಹಣ ಗಳಿಸುವ ಉದ್ದೇಶವೂ ಬಹುರಾಷ್ಟ್ರೀಯ ಸಂಸ್ಥೆಗಳಿಗೆ ಇರುತ್ತದೆ.
Related Articles
ಇ-ಕಾಮರ್ಸ್ ಸಂಸ್ಥೆಗಳ ಜಾಲತಾಣಗಳಲ್ಲಿ ಉತ್ಪನ್ನ ಅಥವಾ ಸೇವೆಗಳನ್ನು ಮಾರಾಟ ಮಾಡಲು ನೋಂದಣಿ ಮಾಡಿಕೊಳ್ಳುವುದು ಸುಲಭ. ಆದರೆ, ಮಾರಾಟವಾದ ಉತ್ಪನ್ನಗಳ ಮೌಲ್ಯದಲ್ಲಿ ಇ-ಕಾಮರ್ಸ್ ಸಂಸ್ಥೆಗೆ ನೀಡಬೇಕಾದ ಕಮಿಷನ್, ಸೇವಾ ಶುಲ್ಕಗಳನ್ನು ಕಳೆದು ಎಷ್ಟು ಲಾಭ ಪಡೆಯಬಹುದು ಎಂಬುದರ ಬಗ್ಗೆ ವ್ಯಾಪಾರಸ್ಥರು, ಕೈಗಾರಿಕಾ ಸಂಸ್ಥೆಗಳು ಎಚ್ಚರಿಕೆ ವಹಿಸಬೇಕಾಗುತ್ತದೆ. ಹೆಚ್ಚು ವಹಿವಾಟು ನಡೆಸುವ ಉದ್ದೇಶದಿಂದ ಮೆಗಾ ಸೇಲ್‌ಗಳನ್ನು ಇ-ಕಾಮರ್ಸ್ ಸಂಸ್ಥೆಗಳು ಭಾರತದಲ್ಲಿ ಕೂಡ ನಡೆಸುತ್ತವೆ. ಆ ಸಮಯದಲ್ಲಿ ಹೆಚ್ಚಿನ ರಿಯಾಯಿತಿಯನ್ನು ಘೋಷಿಸುವುದು ಭಾರತದ ವ್ಯಾಪಾರಸ್ಥರಿಗೆ ಅನಿವಾರ್ಯವಾಗಬಹುದು.
Advertisement
ಉತ್ಪನ್ನ ಮಾರಾಟದ ಜತೆಗೆ ಗ್ರಾಹಕರಿಗೆ ಉತ್ಪನ್ನವನ್ನು ತಲುಪಿಸಲು ಆಗುವ ವೆಚ್ಚವನ್ನು ಕೂಡ ಭಾರತದ ವಾಣಿಜ್ಯ ಸಂಸ್ಥೆಗಳು ನೀಡಬೇಕು ಎಂದು ಕೆಲವು ಬಾರಿ ಇ-ವಾಣಿಜ್ಯ ಸಂಸ್ಥೆಗಳು ಒತ್ತಾಯಿಸಿದ ಪ್ರಸಂಗಗಳಿವೆ. ಇನ್ನು ಯಾವುದೇ ಕಾರಣಕ್ಕಾಗಿ ಗ್ರಾಹಕ ತಾನು ಖರೀದಿಸಿದ ಉತ್ಪನ್ನವನ್ನು, ನಿರ್ದಿಷ್ಟ ಅವಧಿಯಲ್ಲಿ ಹಿಂತಿರುಗಿಸಿದರೆ, ಅದಕ್ಕೆ ಪ್ರತಿಯಾಗಿ ಹೊಸ ಉತ್ಪನ್ನವನ್ನು ನೀಡುವುದು ಅಥವಾ ಗ್ರಾಹಕನಿಗೆ ಹಣ ಹಿಂತಿರುಗಿಸುವುದು ಭಾರತದ ವಾಣಿಜ್ಯ ಸಂಸ್ಥೆಯ ಹೊಣೆಯಾಗುತ್ತದೆ. ಇಂಥ ಎಲ್ಲ ನೇರ ಮತ್ತು ಪರೋಕ್ಷ ವೆಚ್ಚಗಳನ್ನು ಕಳೆದು, ಲಾಭ ಗಳಿಸಲು ತಮ್ಮ ಉತ್ಪನ್ನಗಳಿಗೆ ಸೂಕ್ತ ಬೆಲೆ ನಿಗದಿಪಡಿಸಬೇಕಾಗುತ್ತದೆ.
-ಉದಯಶಂಕರ ಪುರಾಣಿಕ