ವಿಜಯಪುರ : ಭದ್ರತಾ ಕರ್ತವ್ಯ ನಿರತ ಪೇದೆಯೊಬ್ಬರು ಪಿಟ್ಸ್ ಬಂದು ಕುಸಿದು ಬಿದ್ದು, ತಲೆಗೆ ಉಂಟಾದ ತೀವ್ರ ಗಾಯದಿಂದ ರಕ್ತಸ್ರಾವವಾಗಿ ಆಸ್ಪತ್ರೆ ಸೇರಿದ ಘಟನೆ ನಗರದಲ್ಲಿ ನಡೆದಿದೆ.
ಮಂಗಳವಾರ ನಗರದಲ್ಲಿ ಮೂಡಾ ಹಗರಣದ ವಿಷಯವಾಗಿ ಬಿಜೆಪಿ – ಜೆಡಿಎಸ್ ನಡೆಸುತ್ತಿರುವ ಹೋರಾಟಕ್ಕೆ ವಿರುದ್ಧವಾಗಿ ಹಾಗೂ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಬೆಂಬಲಿ ಕಾಂಗ್ರೆಸ್ ಹಾಗೂ ಅಹಿಂದ ಸಂಘಟನೆಯಿಂದ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗಿತ್ತು.
ಸದರಿ ಹೋರಾಟದ ಸಂದರ್ಭದಲ್ಲಿ ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಭದ್ರತೆ ಒದಗಿಸಿದ್ದರು.
ಸದರಿ ಹೋರಾಟದ ಕರ್ತವ್ಯಕ್ಕೆ ನಿಯೋಜಿತ ನಗರದ ಗೋಲಗುಂಬಜ ಠಾಣೆ ಪೇದೆ ವಿ.ಎಸ್. ಬೂದಿಹಾಳ ಅವರಿಗೆ ಪೀಟ್ಸ್ ರೋಗ ಕಾಣಿಸಿಕೊಂಡಿದೆ. ಕುಸಿದು ಬಿದ್ದುದರಿಂದ ತಲೆಗೆ ತೀವ್ರ ಪೆಟ್ಟಾಗಿ ರಕ್ತಸ್ರಾವ ಆಗಿದೆ.
ತಕ್ಷಣವೇ ಸ್ಥಳದಲ್ಲಿದ್ದವರು ಉಪಚರಿಸಿದ್ದು, ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ: Bangladeshದಲ್ಲಿ ಮಿತಿಮೀರಿದ ಹಿಂಸಾಚಾರ: ಹಿಂದೂಗಳ ಮನೆಗೆ ಬೆಂಕಿ, ಮಹಿಳೆಯರ ಕಿಡ್ನಾಪ್