Advertisement

Paris Olympics 2024ಕ್ಕೆ ವರ್ಣರಂಜಿತ ವಿದಾಯ

11:54 PM Aug 12, 2024 | Team Udayavani |

ಪ್ಯಾರಿಸ್‌: ಅತ್ಯಂತ ಯಶಸ್ವಿ ಯಾಗಿ ನಡೆದ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ರವಿವಾರ ರಾತ್ರಿ ವರ್ಣರಂಜಿತ ವಿದಾಯ ಹೇಳಲಾಯಿತು.
ಪ್ಯಾರಿಸ್‌ನ ಸ್ಟೇಡ್‌ ಡೆ ಫ್ರಾನ್ಸ್‌ ಮೈದಾನದಲ್ಲಿ ನಡೆದ ಸಮಾರೋಪ ಸಮಾರಂಭದ ವೇಳೆ 206 ರಾಷ್ಟ್ರಗಳ ಧ್ವಜಧಾರಿಗಳಿಂದ ಪಥಸಂಚಲನ ನಡೆಯಿತು. ಈ ವೇಳೆ ಭಾರತದ ತ್ರಿವರ್ಣ ಧ್ವಜ ಹೊತ್ತು ಸಾಗಿದ ಶೂಟರ್‌ ಮನು ಭಾಕರ್‌ ಮತ್ತು ಪುರುಷರ ಹಾಕಿ ತಂಡದ ಗೋಲ್‌ ಕೀಪರ್‌ ಪಿ.ಆರ್‌. ಶ್ರೀಜೇಶ್‌ ಗಮನ ಸೆಳೆದರು.

Advertisement

ಫ್ರೆಂಚ್‌ ಈಜುಪಟು ಲಿಯಾನ್‌ ಮಾರ್ಚಂಡ್‌ ಒಲಿಂಪಿಕ್ಸ್‌ ಜ್ಯೋತಿ ಹಿಡಿದು ಸಾಗುವುದರೊಂದಿಗೆ ಮೊದಲ್ಗೊಂಡು, 2028ರ ಲಾಸ್‌ ಏಂಜಲೀಸ್‌ ಒಲಿಂಪಿಕ್ಸ್‌ಗೆ ಧ್ವಜ ಹಸ್ತಾಂತರ, ಪಥಸಂಚಲನ, ವಿವಿಧ ಮನೋರಂಜನೆ ಕಾರ್ಯಕ್ರಮಗಳು ನೆರೆದ ಪ್ರೇಕ್ಷಕರನ್ನು ಧಾರಾಳ ರಂಜಿಸಿತು. ಅಮೆರಿಕನ್‌ ನಟ ಟಾಮ್‌ ಕ್ರೂಸ್‌, ಗ್ರ್ಯಾಮಿ ಪ್ರಶಸ್ತಿ ವಿಜೇತ ಅಮೆರಿಕನ್‌ ಸಿಂಗರ್‌ ಬಿಲ್ಲಿ ಎಲಿಶ್‌, ಅಮೆರಿಕನ್‌ ರ್ಯಾಪರ್‌ ಸ್ನೂಪ್‌ ಡಾಗ್‌ ಮತ್ತಿತರರು ಪ್ರಮುಖ ಆರ್ಷಣೆಯಾಗಿದ್ದರು.

content-img

ನಟ ಕ್ರೂಸ್‌ಗೆ ಮುತ್ತಿಕ್ಕಿದ ಮಹಿಳೆ
ಸಮಾರೋಪ ಸಮಾರಂಭದ ವೇಳೆ ನಟ ಟಾಮ್‌ ಕ್ರೂಸ್‌, ಹಗ್ಗದ ಸಹಾಯ ದಿಂದ ಒಳಾಂಗಣ ಕ್ರೀಡಾಂಗಣಕ್ಕೆ ಆಗಮಿ ಸಿದ್ದು ವಿಶೇಷವೆನಿಸಿತು. ಇದೇ ವೇಳೆ ನಡೆದುಕೊಂಡು ಬರುವಾಗ ಮಹಿಳೆ ಯೊಬ್ಬಳು ಕ್ರೂಸ್‌ ಅವರನ್ನು ಎಳೆದು ಗಲ್ಲಕ್ಕೆ ಮುತ್ತಿಕ್ಕಿದರು. ಮಹಿಳೆಯ ಈ ವರ್ತನೆಗೆ ಅನೇಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Advertisement

ಪ್ರಧಾನಿ ಮೋದಿ ಮೆಚ್ಚುಗೆ
ಈ ಒಲಿಂಪಿಕ್ಸ್‌ ನಲ್ಲಿ ಭಾರತದ ಕ್ರೀಡಾಪಟುಗಳ ಪ್ರಯತ್ನಕ್ಕೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಿಮ್ಮ ಬಗ್ಗೆ ದೇಶ ಹೆಮ್ಮೆ ಪಡುತ್ತದೆ ಎಂದಿದ್ದಾರೆ. “ಒಲಿಂಪಿಕ್ಸ್‌ ಪ್ರಯತ್ನಕ್ಕಾಗಿ ಇಡೀ ಭಾರತೀಯ ತಂಡವನ್ನು ನಾನು ಶ್ಲಾ ಸುತ್ತೇನೆ. ನೀವೆಲ್ಲರೂ ಅತ್ಯುತ್ತಮ ಪ್ರದರ್ಶನ ನೀಡಿದ್ದೀರಿ. ಪ್ರತೀ ಭಾರತೀಯನೂ ನಿಮ್ಮ ಬಗ್ಗೆ ಹೆಮ್ಮೆ ಪಡುತ್ತಾನೆ’ ಎಂದು ಮೋದಿ ಟ್ವೀಟ್‌ ಮಾಡಿದ್ದಾರೆ.

ವಿನೇಶ್‌ ತೀರ್ಪು ಇಂದು ಪ್ರಕಟಗೊಳ್ಳುವ ನಿರೀಕ್ಷೆ
ಪ್ಯಾರಿಸ್‌:
ತೂಕ ಹೆಚ್ಚಳದಿಂದಾಗಿ ಪ್ಯಾರಿಸ್‌ ಒಲಿಂಪಿಕ್ಸ್‌ನಿಂದ ಅನರ್ಹಗೊಂಡ ಭಾರತದ ಕುಸ್ತಿಪಟು ವಿನೇಶ್‌ ಪೋಗಾಟ್‌, ತನಗೆ ಜಂಟಿ ಬೆಳ್ಳಿ ಪದಕ ನೀಡುವಂತೆ ಅರ್ಜಿ ಸಲ್ಲಿಸಿದ್ದು, ಕ್ರೀಡಾ ನ್ಯಾಯಾಲಯ (ಸಿಎಎಸ್‌) ಮಂಗಳವಾರ ರಾತ್ರಿ 9.30ರ ವೇಳೆ ಅಂತಿಮ ತೀರ್ಪು ಪ್ರಕಟಿಸುವ ನಿರೀಕ್ಷೆಯಿದೆ. ಒಲಿಂಪಿಕ್ಸ್‌ ಮುಗಿಯುವುದರೊಳಗೆ ತೀರ್ಪು ಪ್ರಕಟಿಸುವುದಾಗಿ ಸಿಎಎಸ್‌ ಹೇಳಿತ್ತು. ಆದರೆ ಕೆಲವು ಅನಿವಾರ್ಯ ಕಾರಣಗಳಿಂದ ಇದು ಮುಂದೂಡಲ್ಪಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.