Advertisement

ಸಂಸ್ಕೃತವನ್ನು ವಿಶ್ವ ಭಾಷೆಯನ್ನಾಗಿ ಮಾಡಲು ಸಾಮೂಹಿಕ ಪ್ರಯತ್ನ ಅಗತ್ಯ: ರಾಜ್ಯಪಾಲರು

01:02 PM Aug 06, 2020 | mahesh |

ಮುಂಬಯಿ: ಸಂಸ್ಕೃತವು ಎಲ್ಲ ಭಾರತೀಯ ಭಾಷೆಗಳ ತಾಯಿಯಾಗಿದ್ದು, ಪ್ರಾಚೀನ ಜ್ಞಾನ ಮತ್ತು ಬುದ್ಧಿವಂತಿಕೆಯ ಭಂಡಾರವಾಗಿದೆ. ಸಂಸ್ಕೃತವನ್ನು ಹೊಸ ಶಿಕ್ಷಣ ನೀತಿಯ ಮಾರ್ಗಗಳಲ್ಲಿ ಸಂಸ್ಕರಿಸಲು ಮತ್ತು ಜನಪ್ರಿಯಗೊಳಿಸಲು ಹೊಸ ನೀತಿಯನ್ನು ಸೂಚಿಸುವಂತೆ ಸಂಸ್ಕೃತ ವಿದ್ವಾಂಸರು ಮುಂದಾಗಬೇಕು. ಭಾರತದ ಸಂಸ್ಕೃತಿ ಸಂಸ್ಕೃತ ಭಾಷೆ ಮತ್ತು ಸಾಹಿತ್ಯದೊಂದಿಗೆ ಆಳವಾಗಿ ಸಂಬಂಧ ಹೊಂದಿದೆ. ಸಂಸ್ಕೃತವನ್ನು ವಿಶ್ವ ಭಾಷೆಯನ್ನಾಗಿ ಮಾಡಲು ಸಾಮೂಹಿಕ ಪ್ರಯತ್ನಗಳನ್ನು ಮಿಷನರಿ ಉತ್ಸಾಹದಿಂದ ಮಾಡಬೇಕು ಎಂದು ಮಹಾರಾಷ್ಟ್ರ ರಾಜ್ಯಪಾಲ ಭಗತ್‌ ಸಿಂಗ್‌ ಕೋಶ್ಯಾರಿ ಅವರು ನುಡಿದರು.

Advertisement

ಕವಿ ಕುಲಗುರು ಕಾಳಿದಾಸ ಸಂಸ್ಕೃತ ವಿಶ್ವವಿದ್ಯಾಲಯ ಆಯೋಜಿಸಿದ್ದ ಸಂಸ್ಕೃತ ಮಹೋತ್ಸವವನ್ನು ಆ. 3 ರಂದು ಉದ್ಘಾಟಿಸಿ ಮಾತನಾಡಿದ ಅವರು, ಸಂಸ್ಕೃತವು ಸತ್ತ ಭಾಷೆ ಎಂಬ ಕೆಲವು ವಿದ್ವಾಂಸರ ಸಮರ್ಥನೆಯನ್ನು ಪ್ರತಿಪಾದಿಸಿದ ರಾಜ್ಯಪಾಲರು, ಸಂಸ್ಕೃತವು ಫೀನಿಕ್ಸ್‌ನಂತೆ ಎದ್ದೇಳಬಹುದು ಮತ್ತು ಹಲವಾರು ಭಾಷೆಗಳು ಮತ್ತು ಉಪಭಾಷೆಗಳೊಂದಿಗೆ ಹೊರಹೊಮ್ಮಬಹುದು ಎಂದು ಪ್ರತಿಪಾದಿಸಿದರು.

ವಿಶ್ವಾದ್ಯಂತದ ಕವಿಗಳಲ್ಲಿ ಮಹಾಕವಿ ಕಾಳಿದಾಸನನ್ನು ಎವರೆಸ್ಟ್‌ ಪರ್ವತ ಎಂದು ಬಣ್ಣಿಸಿದ ರಾಜ್ಯಪಾಲರು, ಜರ್ಮನಿಯ ತತ್ವಜ್ಞಾನಿ-ಬರಹಗಾರ ಗೊಥೆ ಅವರು ಕಾಳಿದಾಸನ ಶಕುಂತಲಂ ಅನ್ನು ಓದಿದಾಗ ಸಂತೋಷದಿಂದ ನರ್ತಿಸಿರುವುದನ್ನು ನೆನಪಿಸಿಕೊಂಡರು. ಸಂಸ್ಕೃತ ಮಹೋತ್ಸವದ ಮೂಲಕ ಸಂಸ್ಕೃತ ಭಾಷೆಯ ಪ್ರತಿಷ್ಠೆಯನ್ನು ಪುನಃಸ್ಥಾಪಿಸುವಂತೆ ರಾಜ್ಯಪಾಲರು ಸಂಘಟಕರು ಮತ್ತು ಸಂಸ್ಕೃತ ವಿದ್ವಾಂಸರಿಗೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸಂಸ್ಕೃತ ವಿದ್ವಾಂಸ ಪ್ರೊ| ವಿ. ಕುತುಂಬಾ ಶಾಸ್ತ್ರಿ ಮತ್ತು ಸಂಭಾಷ್ಯ ಸಂದೇಶ ಸಂಸ್ಕೃತ ನಿಯತಕಾಲಿಕೆಗೆ ಸಂಸ್ಕೃತ ಸೇವಾ ಸಮ್ಮಾನ್‌ ಪ್ರದಾನ ಮಾಡಲಾಯಿತು. ಉದ್ಘಾಟನಾ ಸಮಾರಂಭದ ಬಳಿಕ ರಾಜ್ಯಪಾಲರು ರಾಜ್‌ ಭವನದಲ್ಲಿ ಕಾಳಿದಾಸ ಅವರ ಕೃತಿ ಮೇಘದುತಮ್‌ ಆಧಾರಿತ ಸಾಹಿತ್ಯ ಕಾರ್ಯಕ್ರಮ ಗೀತ್‌ ಮೇಘದುತಮ…’ ಗೆ ಚಾಲನೆ ನೀಡಿದರು. ಉನ್ನತ ಶಿಕ್ಷಣ ಸಚಿವ ಉದಯ್‌ ಸಮಂತ್‌ ಮತ್ತು ವಿವಿಧ ವಿಶ್ವವಿದ್ಯಾಲಯಗಳ ಉಪಕುಲಪತಿಗಳು ಉಪಸ್ಥಿತರಿದ್ದರು.

ಉನ್ನತ ಶಿಕ್ಷಣ ಸಚಿವ ಉದಯ್‌ ಸಮಂತ್‌ ಅವರು ಮಾತನಾಡಿ, ಸಂಸ್ಕೃತ ಮಹೋತ್ಸವ ಒಂದು ದಿನದ ಕಾರ್ಯಕ್ರಮವಾಗಿ ಉಳಿಯಬಾರದು. ಇದರಲ್ಲಿ ವಿಶ್ವವಿದ್ಯಾಲಯಗಳ ಎಲ್ಲ ವಿದ್ಯಾರ್ಥಿಗಳು ಭಾಗಿಯಾಗಿದ್ದಾರೆ. ಮಹಾಕವಿ ಕಾಳಿದಾಸ ಪ್ರಶಸ್ತಿಯನ್ನು ಪ್ರದಾನ ಮಾಡಲು ಸರಕಾರವು ಶೀಘ್ರದಲ್ಲೇ ಒಂದು ಕಾರ್ಯವನ್ನು ಆಯೋಜಿಸುತ್ತದೆ ಎಂದು ಅವರು ಭರವಸೆ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next