ರಾಮನಗರ: ಬೆಂಗಳೂರು ನಗರಕ್ಕೆ ಸಮೀಪ ದಲ್ಲಿರುವ ರಾಮನಗರ ಜಿಲ್ಲೆಯ ಪ್ರವಾಸಿತಾಣ ಗಳಿಗೆ ವಿದೇಶಿ ಪ್ರವಾಸಿಗರು ಸೇರಿದಂತೆ ವಿವಿಧ ವರ್ಗದ ಪ್ರವಾಸಿಗರನ್ನು ಸೆಳೆಯಲು ಜಿಲ್ಲಾ ಪ್ರವಾ ಸೋದ್ಯಮ ಇಲಾಖೆ ಇದೀಗ ಕಾಫಿಟೇಬಲ್ ಬುಕ್ ಹೊರತರಲು ಸಜ್ಜಾಗಿದೆ.
ಹೌದು.. ಜಿಲ್ಲೆಯ ಪ್ರವಾಸಿ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಕ್ರೋಢೀ ಕೃತ ಮಾಹಿತಿಯನ್ನು ಪ್ರವಾಸಿಗರಿಗೆ ತಲುಪಿಸಲು, ಜಿಲ್ಲೆಯ ಪ್ರವಾಸಿ ತಾಣಗಳ ಬಗ್ಗೆ ಪ್ರವಾಸಿಗರಲ್ಲಿ ಆಸಕ್ತಿ ಮೂಡಿಸುವ ಉದ್ದೇಶದೊಂದಿಗೆ ಕಾಫಿಟೇಬಲ್ ಪುಸ್ತಕ ಸಜ್ಜಾಗುತ್ತಿದ್ದು, ಪುಸ್ತಕ ಸಿದ್ಧತೆಗೆ ಎಲ್ಲಾ ರೀತಿಯ ಸಿದ್ಧತೆ ಮಾಡಿ ಕೊಂಡಿರುವ ಜಿಲ್ಲಾ ಪ್ರವಾಸೋದ್ಯಮ ಇಲಾಖೆ, ತುರ್ತಾಗಿ ಪುಸ್ತಕವನ್ನು ಹೊರತರಲು ತಯಾರಿ ನಡೆಸಿದೆ.
ಕಾಫಿಟೇಬಲ್ ಪುಸ್ತಕದಲ್ಲಿ ಪ್ರವಾಸಿತಾಣಗಳ ಮಾಹಿತಿ: ಆಕರ್ಷಕ ಮುದ್ರಣದೊಂದಿಗೆ ಹೊರ ಬರಲಿರುವ ಕಾಫಿಟೇಬಲ್ ಪುಸ್ತಕದಲ್ಲಿ ಜಿಲ್ಲೆಯ ಪ್ರವಾಸಿತಾಣಗಳ ಚಿತ್ತಾಕರ್ಷಕ ಚಿತ್ರಗಳು, ಅವು ಗಳಿಗೆ ಸಂಬಂಧಿಸಿದ ಮಾಹಿತಿ. ಪ್ರವಾಸಿ ತಾಣಗಳ ಇತಿಹಾಸ, ಅಲ್ಲಿ ಪ್ರವಾಸಿಗರಿಗೆ ಸಿಗುವ ಸೌಲಭ್ಯ ಗಳು, ವಸತಿ, ಊಟ ಮತ್ತು ಉಪಹಾರದ ವ್ಯವಸ್ಥೆ ಹೀಗೆ ಎಲ್ಲಾ ರೀತಿಯ ಸೌಲಭ್ಯಗಳ ಬಗ್ಗೆ ಈ ಪುಸ್ತ ಕದಲ್ಲಿ ಮಾಹಿತಿ ನೀಡಲಾಗುತ್ತದೆ. ಇದನ್ನು ಜಿಲ್ಲೆಯ ಪ್ರಮುಖ ಹೋಟೆಲ್, ರೆಸಾರ್ಟ್‌ಗಳಲ್ಲಿ ಇರಿಸಿ ಪ್ರವಾಸಿಗರಿಗೆ ಮಾಹಿತಿ ದೊರೆಯುವಂತೆ ಮಾಡ ಲಾಗುವುದು. ದಪ್ಪ ರಟ್ಟಿನಿಂದ ಕೂಡಿರುವ, ಗುಣ ಮಟ್ಟದ ಕಾಗದದ ಹಾಳೆಯಿಂದ ಹೊರ ಬರುವ ಈ ಪುಸ್ತಕವನ್ನು ಟೇಬಲ್ ಮೇಲೆ ಇರಿಸಲು ಪ್ರವಾಸಿ ಗರಿಗೆ ಮಾಹಿತಿ ಸಿಗುವಂತೆ ಮಾಡಲು ಪ್ರವಾ ಸೋದ್ಯಮ ಇಲಾಖೆ ಉದ್ದೇಶಿಸಿದೆ.
ಮೊದಲ ಹಂತದಲ್ಲಿ 1 ಸಾವಿರ ಪುಸ್ತಕ: ಪುಸ್ತಕದಲ್ಲಿ ಸಿಎಂ, ಡಿಸಿಎಂ, ಜಿಲ್ಲಾ ಉಸ್ತುವಾರಿ ಸಚಿವರು, ಪ್ರವಾ ಸೋದ್ಯಮ ಸಚಿ ವರು, ಜಿಲ್ಲೆಯ ಜನಪ್ರತಿ ನಿಧಿಗಳು ಹಾಗೂ ಪ್ರಮುಖ ಅಧಿಕಾರಿಗಳ ಅಭಿ ಪ್ರಾಯ ಇರಲಿದ್ದು, ಪ್ರಮುಖ ಸ್ಥಳಗಳಲ್ಲಿ ಪ್ರವಾಸಿ ಗರಿಗೆ ಸಿಗುವಂತೆ ಈ ಪುಸ್ತಕವನ್ನು ರಚಿಸಲಾಗುತ್ತದೆ. ಮೊದಲ ಹಂತದಲ್ಲಿ 1 ಸಾವಿರ ಪುಸ್ತಕಗಳನ್ನು ಹೊರ ತರಲು ಪ್ರವಾ ಸೋದ್ಯಮ ಇಲಾಖೆ ಮುಂದಾ ಗಿದ್ದು, ಮುಂದಿನ ಹಂತದಲ್ಲಿ ಇನ್ನೂ ಹೆಚ್ಚು ಮುದ್ರಣ ಮಾಡಿಸುವ ಇರಾದೆಯನ್ನು ಹೊಂದಿದೆ.
ಏನಿದು ಪುಸ್ತಕದ ಮಾದರಿಯಲ್ಲಿ ಕಾಫಿಟೇಬಲ್ ಬುಕ್ ? : ರಾಮನಗರ ಜಿಲ್ಲೆಯಲ್ಲಿ ಪ್ರವಾಸಿಗರನ್ನು ಸೆಳೆಯು ವಂತಹ ಸಾಕಷ್ಟು ಪ್ರವಾಸಿ ತಾಣಗಳಿವೆ. ಧಾರ್ಮಿಕ ಕ್ಷೇತ್ರಗಳು, ಚಾರಣ ಪ್ರಿಯರನ್ನು ಕೈಬೀಸಿ ಕರೆ ಯುವ ಬೆಟ್ಟಗುಡ್ಡಗಳು, ನಿಸರ್ಗ ಪ್ರಿಯರ ಮನಸೋರೆಗೊಳ್ಳುವ ತಾಣಗಳು, ನದಿ, ಜಲಾಶಯ, ಕೆರೆಗಳು ಹೀಗೆ ಪ್ರವಾಸಿಗರಿಗೆ ರಂಜನೆ ನೀಡುವ ಪ್ರವಾಸಿತಾಣಗಳು ಜಿಲ್ಲೆಯಲ್ಲಿ ಸಾಕಷ್ಟಿವೆಯಾದರೂ ಮಾಹಿತಿಯ ಕೊರತೆಯಿಂದಾಗಿ ಇಲ್ಲಿಗೆ ಪ್ರವಾಸಿಗರು ಬರುವುದು ತೀರಾಕಡಿಮೆ. ಈ ಪ್ರವಾಸಿ ತಾಣಗಳ ಬಗ್ಗೆ ಸೂಕ್ತ ಮಾಹಿತಿ ದೊರೆತಲ್ಲಿ ಹೊರಗಿನ ಪ್ರವಾಸಿಗರು ಇಲ್ಲಿಗೆ ಬರಲು ಅನುಕೂಲ ವಾಗು ತ್ತದೆ. ಈ ಕಾರಣದಿಂದ ವಿವಿಧ ಜಿಲ್ಲೆಗಳಲ್ಲಿ ಈಗಾಗಲೇ ಹೊರತಂದಿರುವ ಪುಸ್ತಕದ ಮಾದರಿಯಲ್ಲಿ ಇಲ್ಲೂ ಕಾಫಿಟೇಬಲ್ ಪುಸ್ತಕ ತರಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಜಿಲ್ಲಾ ಪ್ರವಾಸೋದ್ಯಮದ ಬಗ್ಗೆ ಪ್ರವಾಸಿಗರಿಗೆ ಮಾಹಿತಿ ನೀಡುವ ಹಾಗೂ ಜಿಲ್ಲೆಯ ಪ್ರಮುಖ ಪ್ರವಾಸಿ ಸ್ಥಳಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಕಾಫಿಟೇಬಲ್ ಪುಸ್ತಕ ಸಿದ್ಧಪಡಿಸುತ್ತಿದ್ದು, ಸದ್ಯದಲ್ಲೇ ಇದನ್ನು ಹೊರತರಲಾಗುವುದು.
-ಮಂಗಳಗೌರಿ, ಸಹಾಯಕ ನಿರ್ದೇಶಕಿ, ಪ್ರವಾಸೋದ್ಯಮ ಇಲಾಖೆ ರಾಮನಗರ