ರಿಪ್ಪನ್‌ಪೇಟೆ: ಶಾಲಾ ಬಾಲಕನೊಬ್ಬನ ಬ್ಯಾಗಲ್ಲಿ ನಾಗರಹಾವೊಂದು ಪ್ರತ್ಯಕ್ಷವಾದ ಘಟನೆ ಶಿವಮೊಗ್ಗ ಜಿಲ್ಲೆ ರಿಪ್ಪನ್‌ಪೇಟೆ ಸಮೀಪದ ಬಾಳೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
ಎರಡನೇ ತರಗತಿಯ ಭುವನ್ ಎಂಬ ವಿದ್ಯಾರ್ಥಿಯ ಬ್ಯಾಗ್‌ನಲ್ಲಿ ನಾಗರಹಾವು ಕಂಡಿದ್ದು, ಈತ ಹಾಗೂ ಸಹಪಾಠಿ ಸಮಯಪ್ರಜ್ಞೆ ಮೆರೆದು ಹಾವು ಬ್ಯಾಗ್‌ನಿಂದ ಹೊರಬರದಂತೆ ನೋಡಿಕೊಂಡರು. ಹೀಗಾಗಿ ಯಾವುದೇ ಅನಾಹುತ ಸಂಭವಿಸಿಲ್ಲ.
ಶುಕ್ರವಾರ ಬೆಳಗ್ಗೆ ಎಂದಿನಂತೆ ಶಾಲೆಗೆ ಬಂದಾಗ ನಲಿ-ಕಲಿ ತರಗತಿಯ ಶಿಕ್ಷಕರು ಪಾಠ ಓದಲು ಬ್ಯಾಗ್‌ನಿಂದ ಪುಸ್ತಕ ತಗೆಯುವಂತೆ ಸೂಚಿಸಿ ಮಕ್ಕಳ ಹಾಜರಾತಿ ಪಡೆಯುತ್ತಿದ್ದರು. ಭುವನ್ ಪುಸ್ತಕ ಹೊರತೆಗೆದಾಗ ಖಾಲಿ ಬ್ಯಾಗ್‌ನಲ್ಲಿ ಮಲಗಿದ್ದ ಹಾವನ್ನು ಕಂಡಿದ್ದಾನೆ. ಕೂಡಲೇ ಈತ ಪಕ್ಕದಲ್ಲಿ ಕುಳಿತಿದ್ದ ಸಹಪಾಠಿ ಆರ್. ಮಣಿಕಂಠನಿಗೆ ಹಾವನ್ನು ತೋರಿಸಿದ್ದಾನೆ. ಆತನೂ ಹಾವನ್ನು ಕಂಡ ಕೂಜಲೇ ಬ್ಯಾಗ್‌ನ ಜಿಪ್ ಎಳೆದು ಶಿಕ್ಷಕರಿಗೆ ವಿಷಯ ತಿಳಿಸಿದರು. ಕೂಡಲೇ ಶಿಕ್ಷಕರು ಬ್ಯಾಗನ್ನು ಕೊಠಡಿಯಿಂದ ಹೊರತಂದು ನೋಡಿದಾಗ ಅದರಲ್ಲಿ ನಾಗರಹಾವು ಇರುವುದು ಕಂಡು ಬಂತು.
ಬಳಿಕ ಭುವನ್ ಮನೆಯವರನ್ನು ಕರೆಸಿ ಹಾವನ್ನು ಸಮೀಪದ ಕಾಡಿಗೆ ಬಿಟ್ಟು ಬರಲಾಯಿತು. ಬ್ಯಾಗ್‌ನೊಳಗೆ ಹಾವು ಸೇರಿದ್ದು ಹೇಗಿ ಎಂಬುದು ಗೊತ್ತಾಗಿಲ್ಲ.