Advertisement
ಕನಕಮಜಲು ಶ್ರೀರಾಂಪೇಟೆ ಯಲ್ಲಿರುವ ಹೊಟೇಲ್ ಶ್ರೀರಾಮದಲ್ಲಿ ಕೊಳಚೆ ನೀರು ಹರಿಯುವಿಕೆಗೆ ಇಂಗು ಗುಂಡಿಯನ್ನು ನಿರ್ಮಿಸಲಾಗಿದೆ. ಹೊಟೇಲ್‌ನಲ್ಲಿ ಕೈ ಹಾಗೂ ಪಾತ್ರೆ ತೊಳೆದ ನೀರು ನೇರ ಇಂಗು ಗುಂಡಿಗೆ ಹೋಗುತ್ತಿದೆ. ನೆಹರೂ ಯುವ ಕೇಂದ್ರ ಮಂಗಳೂರು, ಮಹಾತ್ಮಾ ಗಾಂಧಿ ಯುವ ಸ್ವಚ್ಛ ಮಹಾ ಅಭಿಯಾನ್, ಯುವಜನ ವಿಕಾಸ ಕೇಂದ್ರ-ಯುವಕ ಮಂಡಲ ಕನಕಮಜಲು ಅವರ ಸ್ವತ್ಛತಾ ಹಿ ಸೇವಾ ಎನ್ನುವ ಅಭಿಯಾನದ ಮೂಲಕ ಈ ಕಾರ್ಯ ನಡೆಸಲಾಗಿದೆ. ಭಾರತ ಸರಕಾರದ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯದ ಅಡಿಯಲ್ಲಿ ನೆಹರೂ ಯುವಕೇಂದ್ರ ಮಂಗಳೂರು ಇವರ ಮಹಾತ್ಮಾ ಗಾಂಧಿ ಸ್ವತ್ಛ ಮಹಾ ಅಭಿಯಾನ್ ಯೋಜನೆಯಲ್ಲಿ ಕನಕಮಜಲು ಯುವಕ ಮಂಡಲ ಈ ಕಾಮಗಾರಿಯನ್ನು ನಡೆಸಿದೆ.
ಹೊಟೇಲ್ ಪಕ್ಕದಲ್ಲಿಯೇ ನಿರ್ಮಿಸಲಾಗಿರುವ ಇಂಗು ಗುಂಡಿ ಸುಮಾರು 6 ಅಡಿ ಆಳವಿದೆ. ಕನಕ ಮಜಲು ಯುವಕ ಮಂಡಲದ ಸದಸ್ಯರು ಶ್ರಮದಾನದ ಮೂಲಕ ಈ ಗುಂಡಿಯನ್ನು ನಿರ್ಮಿಸಿದ್ದಾರೆ. ಸ್ಥಳೀಯ ನಿವಾಸಿಯೋರ್ವರು ಗುಂಡಿ ತೋಡಲು ತಮ್ಮ ಹಿಟಾಚಿ ಕೊಟ್ಟು ಸಹಕರಿಸಿದ್ದಾರೆ. ಗುಂಡಿಯ ಒಳಗೆ ರಿಂಗ್ ಅಳವಡಿಸಲಾಗಿದೆ. ಪೈಪ್ ಅಳವಡಿಕೆ
ಕೊಳಚೆ ನೀರು ಹರಿಯಲು ಪೈಪ್ ಅಳವಡಿಸಿ ಸಿಮೆಂಟಿನ ಮುಚ್ಚಳಿಕೆ ಹಾಕಲಾಗಿದೆ. ಈ ಇಂಗು ಗುಂಡಿಗೆ ಸುಮಾರು 8 ಸಾವಿರ ರೂ. ಖರ್ಚು ತಗಲಿದೆ. 2 ಸಾವಿರ ರೂ.ಗಳನ್ನು ಹೊಟೇಲ್ ಮಾಲಕರು ಹಾಗೂ ಉಳಿದ ಹಣವನ್ನು ಮಂಗಳೂರು ನೆಹರೂ ಯುವ ಕೇಂದ್ರ ಭರಿಸಿದೆ.
Related Articles
ಪರಿಸರ ಮಲಿನವಾಗದಂತೆ ತಡೆಯುವುದಕ್ಕೆ ಇಂಗುಗುಂಡಿ ನಿರ್ಮಿಸಲಾಗಿದೆ. ಸ್ವತ್ಛತೆಗೆ ಒತ್ತು ಕೊಟ್ಟು ಈ ರೀತಿಯ ವ್ಯವಸ್ಥೆ ಮಾಡಿದ್ದೇವೆ. ಹಲವರ ಸಹಕಾರದಿಂದ ಈ ಕಾರ್ಯ ಕೈಗೂಡಿದೆ. ಸ್ವತ್ಛತೆಗೆ ಎಲ್ಲರೂ ಆದ್ಯತೆ ಕೊಡಬೇಕು.
ಮೋಹನ್, ಶ್ರೀರಾಮ… ಹೊಟೇಲ್ ಮಾಲಕ
Advertisement
ಶಿವಪ್ರಸಾದ್ ಮಣಿಯೂರು