Advertisement

ಬಾಯಲ್ಲಿ ನೀರೂರಿಸಿದ ಮಕ್ಕಳ ಆಹಾರ ಮೇಳ

04:45 PM Dec 02, 2019 | Suhan S |

ಶ್ರೀರಂಗಪಟ್ಟಣ: ಪಟ್ಟಣದ ಬಿಜಿಎಸ್‌ ಬಾಲ ಜಗತ್‌ ಶಾಲೆಯಲ್ಲಿ ವಿದ್ಯಾರ್ಥಿ ಗಳಿಂದ ಆಹಾರ ಮೇಳ ನಡೆಸಲಾಯಿತು. ಈ ಮೇಳದಲ್ಲಿ ಬಗೆಬಗೆಯ ತಿಂಡಿ ತಿನಿಸುಗಳನ್ನು ಸಿದ್ಧಪಡಿಸಿ ವಿದ್ಯಾರ್ಥಿಗಳು ಉತ್ಸಾಹದಿಂದ ವ್ಯಾಪಾರ ನಡೆಸಿದರು.

Advertisement

ಶಾಲೆ 3 ಕೊಠಡಿಗಳಲ್ಲಿ ತಿನಿಸು ಹಾಗೂ 3 ಕೊಠಡಿಗಳಲ್ಲಿ ಹಣ್ಣ ಮತ್ತುತರಕಾರಿಗಳನ್ನು ಮಾರಾಟಕ್ಕೆ ಇರಿಸಲಾಗಿತ್ತು. 3ನೇ ತರಗತಿಯಿಂದ 10ನೇ ತರಗತಿ ವರೆಗಿನ ವಿದ್ಯಾರ್ಥಿಗಳು ಬಗೆ ಬಗೆಯ ವಸ್ತು ಮಾರಾಟಕ್ಕೆ ಇರಿಸಿದ್ದರು. ಪಾನಿಪೂರಿ, ಬೇಲ್‌ಪೂರಿ, ಸಮೋಸ, ಜೆಲ್ಲಿ, ಹಲ್ವಾ, ಚಕ್ಕುಲಿ, ನುಪ್ಪಿಟ್ಟು, ಚುರುಮುರಿ, ಹಣ್ಣಿನ ಸಲಾಡ್‌, ಮಿಠಾಯಿ, ಬಿಸ್ಕೆಟ್‌, ಗೋಲ್ಗಪ್ಪ, ಚಾಕೋ ಲೇಟ್‌ ಬಾಯಿಯ ನೀರೂರಿಸಿದರು.

ಹಣ್ಣು ಮತ್ತು ತರಕಾರಿ ವಿಭಾಗದಲ್ಲಿ ಸೇಬು, ಕಿತ್ತಳೆ, ಸೀಬೆ, ಸಪೋಟ, ಮೂಸಂಬಿ, ಪಪ್ಪಾಯಿ, ದಾಳಿಂಬೆ, ದ್ರಾಕ್ಷಿ, ಬಾಳೆಹಣ್ಣುಗಳನ್ನು ಇಟ್ಟು ಮಾರಾಟಮಾಡಲಾಯಿತು. ಬೀನ್ಸ್‌, ಟೊಮೆಟೋ, ನುಗ್ಗೆಕಾಯಿ, ಈರೆ, ಸೋರೆ, ಪಡುವಲ ಕಾಯಿ, ಹಾಗಲಕಾಯಿ ಕಾಯಿ ಪಲ್ಲೆ ಜೋಡಿಸಿಟ್ಟು ಮಾರಾಟ ಮಾಡಿದರು.

ಪೋಷಕರು, ಶಿಕ್ಷಕರು ವಿದ್ಯಾರ್ಥಿ ಗಳಿಂದ ತಮಗೆ ಬೇಕಾದ ವಸ್ತು ಖರೀದಿಸಿ ಅಲ್ಲೇ ಸವಿದು ರುಚಿ ನೋಡಿದರು. ಆದಿ ಚುಂಚನಗಿರಿ ಮಠದ ಮೈಸೂರು ಶಾಖೆ ಸೋಮೇಶ್ವರನಾಥ ಸ್ವಾಮೀಜಿ ಆಹಾರ ಮೇಳಕ್ಕೆ ಚಾಲನೆ ನೀಡಿದರು.

ಪ್ರತಿ ವಿದ್ಯಾರ್ಥಿ ಬಳಿ ತೆರಳಿ ವಿಚಾರಿಸಿದರು. ಬಿಜಿಎಸ್‌ ಬಾಲ ಜಗತ್ನ ಮುಖ್ಯ ಶಿಕ್ಷಕಿ ರಮ್ಯಶ್ರೀ, ಕಾವೇರಿ ಪ್ರೌಢಶಾಲೆ ಮುಖ್ಯ ಶಿಕ್ಷಕನಿತ್ಯಾನಂದಮೂರ್ತಿ, ಬಿಜಿಎಸ್‌ ಪಿಯು ಕಾಲೇಜು ಪ್ರಾಂಶುಪಾಲ ರಘು, ಪ್ರಮೀಳಾ, ಬೋರೇಗೌಡ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next