Advertisement

ಭಾರತೀಯ ಕ್ರಿಕೆಟಿಗೆ ಸವಾಲಿನ ವರ್ಷ: ಗಂಗೂಲಿ

10:59 PM Dec 29, 2019 | mahesh |

ಹೊಸದಿಲ್ಲಿ: ಭಾರತದ ಕ್ರಿಕೆಟ್‌ ತಂಡಕ್ಕೆ ಮುಂದಿನ ವರ್ಷ ನಿಜವಾದ ಸವಾಲು ಎದುರಾಗಲಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಹೇಳಿದ್ದಾರೆ.

Advertisement

ಈ ವರ್ಷಾರಂಭದಲ್ಲಿ ಆಸ್ಟ್ರೇಲಿಯದಲ್ಲಿ ನಡೆದ ಟೆಸ್ಟ್‌ ಸರಣಿಯನ್ನು ಗೆಲ್ಲುವ ಮೂಲಕ ವಿರಾಟ್‌ ಕೊಹ್ಲಿ ಪಡೆ ಇತಿಹಾಸ ನಿರ್ಮಿಸಿರಬಹುದು, ಆದರೆ ಆಗ ಆಸೀಸ್‌ ತಂಡದಲ್ಲಿ ಖ್ಯಾತ ಬ್ಯಾಟ್ಸ್‌ಮನ್‌ಗಳಾದ ಡೇವಿಡ್‌ ವಾರ್ನರ್‌ ಮತ್ತು ಸ್ಟೀವನ್‌ ಸ್ಮಿತ್‌ ಇರಲಿಲ್ಲ. ಹೀಗಾಗಿ ಆಸ್ಟ್ರೇಲಿಯ ಅಷ್ಟೇನೂ ಬಲಿಷ್ಠವಾಗಿರಲಿಲ್ಲ. ಇದೀಗ ವಾರ್ನರ್‌, ಸ್ಮಿತ್‌ ಮರಳಿದ್ದಾರೆ. ಲಬುಶೇನ್‌ ಅವರಂಥ ಅಪಾಯಕಾರಿ ಆಟಗಾರರನ್ನು ಹೊಂದಿದೆ. ಹೀಗಾಗಿ ವರ್ಷಾರಂಭದಲ್ಲಿ ನಡೆಯುವ ಏಕದಿನ ಸರಣಿಯಲ್ಲಿ ಆಸ್ಟ್ರೇಲಿಯವನ್ನು ಮಣಿಸಲು ಸುಸಜ್ಜಿತ ತಂಡವನ್ನು ರೂಪಿಸಬೇಕಿದೆ ಎಂದು ಗಂಗೂಲಿ ಹೇಳಿದ್ದಾರೆ.

ವರ್ಷಾಂತ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯದಲ್ಲಿ ಪೂರ್ಣ ಪ್ರಮಾಣದ ಸರಣಿ ಆಡಬೇಕಿದೆ. ಉಳಿದಂತೆ ಭಾರತ ತಂಡ ಮುಂದಿನ ವರ್ಷ ವಿದೇಶದಲ್ಲಿ ಬಹಳಷ್ಟು ಸರಣಿಗಳನ್ನು ಆಡಲಿದ್ದು, ಇವೆಲ್ಲವೂ ಸವಾಲಿನಿಂದ ಕೂಡಿರಲಿದೆ ಎಂದು ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next