Advertisement
ಡಿಜಿಟಲ್ ತಂತ್ರಜ್ಞಾನ ಬಳಸಿ ಉನ್ನತೀಕರಿಸಿದ ಡಿಜಿಟಲ್ ಭೂದಾಖಲೆ ಸಿದ್ಧಪಡಿಸುವುದು ಮರುಸರ್ವೇಯ ಮೂಲ ಉದ್ದೇಶ. ಮರುಸರ್ವೇ ಯಲ್ಲಿ ಭೂದಾಖಲೆಗಳು ಸಮರ್ಪಕ ಗುರುತಿಸುವಿಕೆ ಮತ್ತು ಅಳತೆ ನಡೆದು ಸಂಪೂರ್ಣ ಡಿಜಿಟಲೀಕರಣಗೊಳ್ಳಲಿದೆ.
Related Articles
ಡ್ರೋನ್‌ಗಳು ಭೂಪ್ರದೇಶದ ಫೋಟೋಗಳನ್ನು ತೆಗೆದು ಸಂಗ್ರಹದಲ್ಲಿ ಇಟ್ಟುಕೊಳ್ಳುತ್ತವೆ. ಇವುಗಳನ್ನು ಜಿಐಐಸ್ ಸಾಫ್ಟ್ ವೇರ್ ಮೂಲಕ ಪ್ರೊಸೆಸ್ ಮಾಡಿ ಪಕ್ವಗೊಳಿಸಲಾಗುತ್ತದೆ. ಬಳಿಕ ಅಳತೆಗೆ ಅನುಗುಣವಾಗಿ ಇವುಗಳನ್ನು ಹೊಂದಿಸಿಕೊಳ್ಳಲಾಗುತ್ತದೆ. ಅನಂ ತರ ಸರ್ವೇಯರ್‌ಗಳನ್ನು ಈ ಫೋಟೋಗಳನ್ನು ಹಿಡಿದುಕೊಂಡು ಕ್ಷೇತ್ರಕ್ಕೆ ಹೋಗುತ್ತಾರೆ. ಅಲ್ಲಿ ಈ ಹಿಂದಿನಂತೆ ಮಾನವ ಶ್ರಮದ ಮೂಲಕ ಅಥವಾ ಚೈನ್ ಬಳಸಿ ಅಳತೆ ಮಾಡುವುದಿಲ್ಲ. ಎಲ್ಲವೂ ಡಿಜಿಟಲ್ ವ್ಯವಸ್ಥೆಯ ಮೂಲಕ ನಡೆಯುತ್ತದೆ. ರೋವರ್ ಎಂಬ ಸಾಧನ ಬಳಸಿ ಸರ್ವೇ ನಡೆಸಲಾಗುತ್ತದೆ. ಕೋಲಿನ ಸ್ವರೂಪದಲ್ಲಿರುವ ರೋವರ್‌ನ ತುದಿಯಲ್ಲಿ ಟೋಪಿ ತರಹದ ಸಾಧನವಿದ್ದು, ಇದಕ್ಕೆ ಜಿಪಿಎಸ್ ವ್ಯವಸ್ಥೆ ಅಳವಡಿಸಲಾಗಿದೆ. ಇದನ್ನು ಅಳತೆ ಮಾಡಬೇಕಾದ ನಿಗದಿತ ಪ್ರದೇಶದ ಒಂದು ಮೂಲೆಯಲ್ಲಿ ಇರಿಸಲಾಗುತ್ತದೆ. ಅದು ಆ ಪ್ರದೇಶದ ನಿಖರ ಅಳತೆ ಮಾಡಿ, ಗಡಿ ಗುರುತಿಸಿ ಜಿಪಿಎಸ್ ಮೂಲಕ ಜಿಲ್ಲೆಯಲ್ಲಿರುವ ಬೇಸ್ ಸ್ಟೇಷನ್‌ಗೆ ರವಾನಿಸುತ್ತದೆ. ಅನಂತರ ಭೂನಕ್ಷೆ ಮಾಡಿಕೊಂಡು ಕರಡು ಪಹಣಿಪತ್ರ (ಆರ್‌ಟಿಸಿ ) ಮಾಡಿ 15 ದಿನಗಳ ಕಾಲ ಪರಿಶೀಲನೆಗೆ ಇರಿಸಲಾಗುತ್ತದೆ. ಈ ಕರಡು ಪಹಣಿಪತ್ರದ ಬಗ್ಗೆ ಯಾರಿಗಾದರೂ ಆಕ್ಷೇಪಣೆ ಇದ್ದರೆ ತಾಲೂಕುಗಳಲ್ಲಿರುವ ಸಹಾಯಕ ಭೂಮಾಪನ ನಿರ್ದೇಶಕರಿಗೆ ಸಲ್ಲಿಸಬಹುದು. ಈ ಎಲ್ಲ ಪ್ರಕ್ರಿಯೆ ಗಳು ಮುಗಿದ ಬಳಿಕ ಶಾಶ್ವತ ಡಿಜಿಟಲ್ ನಕ್ಷೆಯನ್ನು ಜಾಗದ ಫವàಟೋ ಹಾಗೂ ಕ್ಯುಆರ್ ಕೋಡ್ ಮತ್ತು ಬಾರ್‌ಕೋಡ್ ನೊಂದಿಗೆ ನೀಡಲಾಗುತ್ತದೆ. ಇದು ಡಿಜಿಟಲ್ ಸಹಿಯ ದಾಖಲೆಯಾಗಿದ್ದು, ಈ ಕೋಡ್‌ಗಳು ದಾಖಲೆಯಲ್ಲಿರುವ ಮಾಹಿತಿಯನ್ನು ಒಳಗೊಂಡಿರುತ್ತವೆ.
Advertisement
ಮರುಸರ್ವೇಯಲ್ಲಿ ಸರಕಾರಿ ಭೂಮಿ, ಅರಣ್ಯ, ಸ್ವಾಮಿತ್ವ, ಕೃಷಿ, ಖಾಸಗಿ ಸೇರಿದಂತೆ ಎಲ್ಲ ಭೂಪ್ರದೇಶದ ಸವೇì ನಡೆಯುತ್ತದೆ. ಅಂಕಿಅಂಶ, ಪಹಣಿಪತ್ರಗಳ ದಾಖಲೆಗಳನ್ನು ಭೂಮಿ ತಂತ್ರಾಂಶದಿಂದ ಪಡೆಯಲಾಗುತ್ತದೆ. ಸ್ವಾಮಿತ್ವಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಗ್ರಾಮ ಪಂಚಾಯತ್‌ಗಳಿಂದ ಪಡೆಯಲಾಗುತ್ತದೆ. ಸಾವಿರಾರು ಎಕ್ರೆ ಅರಣ್ಯ ಪ್ರದೇಶ, ಸರಕಾರಿ ಭೂಮಿಯ ಸರ್ವೇ ಡ್ರೋನ್ ಮೂಲಕ ಸುಲಲಿತವಾಗಿ ನಡೆಯಲಿದ್ದು, ನಿಖರ ಅಂಕಿಅಂಶ ದಾಖಲಾಗಲಿದೆ.
120 ವರ್ಷಗಳ ಬಳಿಕ ಸಂಪೂರ್ಣ ಸರ್ವೇಈ ಹಿಂದೆ ಬ್ರಿಟಿಷರ ಕಾಲದಲ್ಲಿ 1900ನೇ ಇಸವಿಯಲ್ಲಿ ಮೂಲ ಭೂ ಸರ್ವೇ ಮಾಡಲಾಗಿತ್ತು. ಬಳಿಕ 1935ರಲ್ಲಿ ಹಿಸ್ಸಾ ಸರ್ವೇ ಹಾಗೂ 1967ರಲ್ಲಿ ರಿ ಕ್ಲಾಸಿಫಿಕೇಶನ್ ಸರ್ವೇ ಮಾಡಲಾಗಿತ್ತು. ಈಗ ಸುಮಾರು 122 ವರ್ಷಗಳ ಬಳಿಕ ಸಂಪೂರ್ಣ ಮರು ಸವೇì ಕಾರ್ಯ ಆಗುತ್ತಿದೆ. ಮರುಸರ್ವೇ ಕಾರ್ಯ ಯಶಸ್ವಿಯಾಗಿ ನೆರವೇರುವ ನಿಟ್ಟಿನಲ್ಲಿ ಎಲ್ಲ ಆವಶ್ಯಕ ಸಿದ್ಧತೆಗಳನ್ನು ಮಾಡಲಾಗಿದ್ದು, ಸರ್ವೇಯರ್‌ಗಳ ತಂಡಗಳನ್ನು ಕೂಡ ಮಾಡಲಾಗಿದೆ. ನವೆಂಬರ್ ಅಂತ್ಯಕ್ಕೆ ಡ್ರೋನ್‌ಗಳು ಸವೇì ಕಾರ್ಯ ಆರಂಭಿಸಲಿವೆ. ಮರುಸರ್ವೇಯಲ್ಲಿ ನೂತನ ತಂತ್ರಜ್ಞಾನ ಬಳಸಿ ಕಡಿಮೆ ಸಮಯದಲ್ಲಿ, ಕಡಿಮೆ ಮಾನವ ಸಂಪನ್ಮೂಲವನ್ನು ಉಪಯೋಗಿಸಿ ಪರಿಪಕ್ವವಾದ ಡಿಜಿಟಲ್ ಭೂದಾಖಲೆಗಳು ಸಿದ್ಧಗೊಳ್ಳಲಿವೆ.
– ನಿರಂಜನ್, ಭೂಮಾಪನ ಇಲಾಖೆ ಉಪ ನಿರ್ದೇಶಕರು - ಕೇಶವ ಕುಂದರ್