ಪಡುಬಿದ್ರಿ: ಉಚ್ಚಿಲ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿನ ವಾರ್ಷಿಕ ಜಾತ್ರೆಯ ಅಂಗವಾಗಿ ಸೋಮವಾರ ಮಧ್ಯಾಹ್ನ ರಥಾರೋಹಣ ಹಾಗೂ ರಾತ್ರಿ ಶ್ರೀಮನ್ಮಹಾ ರಥೋತ್ಸವವು ತಂತ್ರಿಗಳಾದ ವೇ| ಮೂ| ಕಂಬÛಕಟ್ಟ ಸುರೇಂದ್ರ ಉಪಾಧ್ಯಾಯರ ನೇತೃತ್ವದಲ್ಲಿ ವಿಜೃಂಭಣೆಯಿಂದ ಜರಗಿತು.
ಬೆಳಗ್ಗೆ ಶತ ರುದ್ರಾಭಿಷೇಕ, ನವಕ ಪ್ರಧಾನ ಹೋಮ, ಕಲಶಾಭಿಷೇಕ ನಡೆದವು. ಬಳಿಕ ನಿತ್ಯ ಬಲಿ, ರಥಾರೋಹಣ ನಡೆಯಿತು. ಸುಮಾರು ಒಂದು ಸಾವಿರ ಬ್ರಾಹ್ಮಣ ಸುವಾಸಿನಿ ಆರಾಧನೆ ಹಾಗೂ ನಾಲ್ಕು ಸಹಸ್ರ ಭಕ್ತರಿಗೆ ಸಾರ್ವಜನಿಕ ಅನ್ನ ಸಂತರ್ಪಣೆ ಜರಗಿತು. ರಾತ್ರಿ ಸುಡುಮದ್ದು ಪ್ರದರ್ಶನ ಸಹಿತ ರಥೋತ್ಸವ ನಡೆಯಿತು.
ಈ ಸಂದರ್ಭ ಎರ್ಮಾಳು ಬೀಡು ಅಶೋಕ ರಾಜ, ಶ್ರೀ ದೇಗುಲದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ದ್ಯುಮಣಿ ಭಟ್, ಸಮಿತಿ ಸದಸ್ಯ, ಪ್ರಧಾನ ಅರ್ಚಕ ಯು. ಸೀತಾರಾಮ ಭಟ್ ಅಭಿವೃದ್ಧಿ ಸಮಿತಿ ಅಧ್ಯಕ್ಷ ಭಾಂಜಗುತ್ತು ಜಯಕರ ಶೆಟ್ಟಿ, ವ್ಯವಸ್ಥಾಪನ ಸಮಿತಿ ಸದಸ್ಯರಾದ ಕಿಶೋರ್ ಎಂ. ಶೆಟ್ಟಿ, ಗಣೇಶ್ ಮೇಸಿŒ, ವಾಸು ಕರ್ಕೇರ, ನಾರಾಯಣ ಬೆಳ್ಚಡ, ಪುಟ್ಟಮ್ಮ ಶ್ರೀಯಾನ್, ಸುಲೋಚನಾ ದೇವಾಡಿಗ, ಅಣ್ಣಾವರ ಶಂಕರ ಶೆಟ್ಟಿ, ಅಣ್ಣಾವರ ರತ್ನಾಕರ ಶೆಟ್ಟಿ, ಗಂಗಾಧರ ಸುವರ್ಣ, ಜಿ.ಪಂ. ಸದಸ್ಯೆ ಶಿಲ್ಪಾ ಜಿ. ಸುವರ್ಣ, ಕಾಪು ನಾಲ್ಕುಪಟ್ಣ ಮೊಗವೀರ ಸಭಾ ಅಧ್ಯಕ್ಷ ಎರ್ಮಾಳು ಗಂಗಾಧರ ಸುವರ್ಣ, ನ್ಯಾಯವಾದಿ ಚಂದ್ರಶೇಖರ ಶೆಟ್ಟಿ, ಶಿವಪ್ರಸಾದ ಶೆಟ್ಟಿ ಎಲ್ಲದಡಿ ಎರ್ಮಾಳು, ನಾಗೇಶ್ ಭಟ್, ಶ್ರೀಪತಿ ಭಟ್, ಶ್ರೀಧರ ಭಟ್, ಕುಶ ಭಟ್, ರಾಘವೇಂದ್ರ ಭಟ್, ಗ್ರಾ.ಪಂ. ಅಧ್ಯಕ್ಷೆ ಶರ್ಮಿಳಾ, ಉಪಾಧ್ಯಕ್ಷೆ ಇಂದಿರಾ ಶೆಟ್ಟಿ ಉಪಸ್ಥಿತರಿದ್ದರು.