Advertisement

ಸಂಭ್ರಮದ ವಚನ ಕಟುಗಳ ಅಡ್ಡಪಲ್ಡಕ್ಲಿ ಮಹೋತ್ಸವ

05:54 PM Dec 28, 2021 | Team Udayavani |

ಗುಳೇದಗುಡ್ಡ: ಪಟ್ಟಣದ ಶ್ರೀ ಜಗದ್ಗುರು ಗುರುಸಿದ್ದೇಶ್ವರ ಬೃಹನ್ಮಠದಲ್ಲಿ ಶ್ರೀ ಜಗದ್ಗುರು ಗುರುಸಿದ್ದ ಪಟ್ಟದಾರ್ಯ ಮಹಾಸ್ವಾಮಿಗಳವರ ರಜತ ಮೂರ್ತಿ ಹಾಗೂ ವಚನ ಕಟ್ಟುಗಳ ಅಡ್ಡ ಪಲ್ಲಕ್ಕಿ ಮಹೋತ್ಸವ ಸಡಗರ, ಸಂಭ್ರಮದಿಂದ ನಡೆಯಿತು.

Advertisement

ಸೋಮವಾರದಂದು ಬೆಳಗ್ಗೆ ಕರ್ತ ಜಗದ್ಗುರು ಗುರುಸಿದ್ದ ಶ್ರೀಗಳ ಗದ್ದುಗೆಗೆ ವಚನಾಭಿಷೇಕ, ಲಿಂಗದೀಕ್ಷೆ ಒಳಗೊಂಡು ಧಾರ್ಮಿಕ ವಿವಿಧ ವಿಧಾನಗಳು ಸಂಭ್ರಮದಿಂದ ಜರುಗುಗಿದವು. ಜಗದ್ಗುರು ಗುರುಸಿದ್ಧ ಶ್ರೀಗಳ ರಜತ ಮೂರ್ತಿ, ವಚನ ಕಟ್ಟುಗಳ ಅಡ್ಡಪಲ್ಲಕ್ಕಿ ಮಹೋತ್ಸವದ ಭವ್ಯ ಮೆರವಣಿಗೆ ಛತ್ರ ಚಾಮರದೊಂದಿಗೆ ಪಟ್ಟಣದಲ್ಲಿ ನಡೆಯಿತು. ಶ್ರೀಮಠದಿಂದ ಹೊರಟು ಗಚ್ಚಿನಕಟ್ಟಿ, ಚೌಬಜಾರ, ಅರಳಿಕಟ್ಟಿ, ಭಂಡಾರಿ ಕಾಲೇಜ್‌ ಸರ್ಕಲ್‌, ಹರದೊಳ್ಳಿ, ಸಾಲೇಶ್ವರ ದೇವಸ್ಥಾನ, ಪವಾರ ಕ್ರಾಸ್‌, ಪುರಸಭೆ, ಕಂಠಿಪೇಟೆ ಸೇರಿದಂತೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನಂತರ ಶ್ರೀಮಠಕ್ಕೆ ತಲುಪಿತು.

ದಾರಿಯುದ್ದಕ್ಕೂ ಅಪಾರ ಭಕ್ತರು ಅಡ್ಡ ಪಲ್ಲಕ್ಕಿಗೆ ವಿಶೇಷಪೂಜೆ ನೆರವೇರಿಸಿದರು. ಡೊಳ್ಳುವಾದ್ಯ, ಭಾವಿಕಟ್ಟಿ ನಾಟ್ಯ ಸಂಘದ ಕರಡಿ ಮಜಲು, ಸಂಗನಬಸವೇಶ್ವರ ಭಜನಾ ಮೇಳ ಹೀಗೆ ಅನೇಕ ಜನಪದ ವಾದ್ಯ ಮೇಳಗಳು ಅಡ್ಡಪಲ್ಲಕ್ಕಿ ಮಹೋತ್ಸವಕ್ಕೆ ವಿಶೇಷ ಮೆರಗು ನೀಡಿದವು.

ಶ್ರೀ ಜಗದ್ಗುರು ಬಸವರಾಜ ಪಟ್ಟದಾರ್ಯ ಮಹಾಸ್ವಾಮಿಗಳು, ಡಾ| ಈಶ್ವರಾನಂದ ಮಹಾಸ್ವಾಮಿಗಳು ಹಾಗೂ ಗುರುಬಸವ ದೇವರು ಸಮಾರಂಭದ ಸಾನ್ನಿಧ್ಯ ವಹಿಸಿದ್ದರು. ರಾಜು ಜವಳಿ, ಅಮರೇಶ ತಟ್ಟಿ, ಚಂದ್ರಕಾಂತ ಶೇಖಾ, ಅಶೋಕ ಹೆಗಡೆ, ಮಲ್ಲೇಶಪ್ಪ ಬೆಣ್ಣಿ, ಶಿವಾನಂದ ಜವಳಿ, ಮಲ್ಲಿಕಾರ್ಜುನ ರಾಜನಾಳ, ಪ್ರಕಾಶ ರೋಜಿ, ವಿವೇಕಾನಂದ ಪರಗಿ, ಶ್ರೀಕಾಂತ ಭಾವಿ, ಶಿವಾನಂದ ಎಣ್ಣಿ, ಸಂಗಪ್ಪ ಜವಳಿ, ವಿನೋದ ಮದ್ದಾನಿ, ದ್ರಾಕ್ಷಾಯಣಿ ಗೊಬ್ಬಿ, ಬಸವರಾಜ ತಾಂಡೂರ, ನಾಗಮ್ಮ ಎಣ್ಣಿ, ಗಿರಿಜಾ ಕಲ್ಯಾಣಿ, ಸಂಗಪ್ಪ ಚಂದಾಪುರ, ಸೋಮಶೇಖರ ಕಲಬುರ್ಗಿ, ಲೀಲಾವತಿ ರೋಜಿ, ಗುರು ಕಾಳಿ, ಕೂಡ್ಲೆಪ್ಪ ಕಲ್ಯಾಣಿ, ಅಶೋಕ ರೋಜಿ, ಅನ್ನದಾನಿ ಮಾನ್ವಿ, ಆನಂದ ತಿಪ್ಪಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next