Advertisement

ಅನೇಕ ತಿರುವು ಕಂಡಿದ್ದ ಪ್ರಕರಣ

01:18 AM Oct 01, 2020 | mahesh |

ಇಡೀ ಪ್ರಕರಣದ ಪ್ರಮುಖ ಚರ್ಚೆಯ ಅಂಶವಾಗಿದ್ದದ್ದು ವಿವಾದಿತ ಕಟ್ಟಡ ಉದ್ರಿಕ್ತ ಗುಂಪಿನ ಆ ಕ್ಷಣದ ಆಕ್ರೋಶದ ಪರಿಣಾಮವಾಗಿ ಕೆಳಕ್ಕುರುಳಿತೇ ಅಥವಾ ಇದು ಪೂರ್ವಯೋಜಿತ ಕೃತ್ಯವಾಗಿತ್ತೇ ಎನ್ನುವುದು.

Advertisement

ಅಯೋಧ್ಯೆಯ ವಿವಾದಿತ ಕಟ್ಟಡ ಧ್ವಂಸ ಪ್ರಕರಣದ ವಿಚಾರದಲ್ಲಿ ಮಹತ್ವದ ತೀರ್ಪು ಹೊರಬಂದಿದೆ. ಬಾಬರಿ ಮಸೀದಿ ಧ್ವಂಸ ಘಟನೆ ಪೂರ್ವಯೋಜಿತ ಕೃತ್ಯವಲ್ಲ ಎಂಬ ಮಹತ್ತರ ತೀರ್ಪು ನೀಡಿದ ಲಕ್ನೋ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಎಸ್‌.ಕೆ. ಯಾದವ್‌ ಎಲ್ಲ ಆರೋಪಿಗಳನ್ನೂ ಖುಲಾಸೆ ಗೊಳಿಸಿದ್ದಾರೆ.

ಅಯೋಧ್ಯೆಯಲ್ಲಿ ವಿವಾದಿತ ಕಟ್ಟಡ ನೆಲಕ್ಕುರುಳಿದ ಘಟನೆ ಸ್ವಾತಂತ್ರೊéàತ್ತರ ಭಾರತದಲ್ಲಿ ರಾಜಕೀಯ ಪರಿದೃಶ್ಯದ ಅತಿದೊಡ್ಡ ಬದಲಾವಣೆಗೆ ಕಾರಣ ವಾಯಿತು. ಬಾಬರಿ ಮಸೀದಿ ಧ್ವಂಸ ಪ್ರಕರಣ ದೇಶಾದ್ಯಂತ ಕೋಮುಗಲಭೆಗೆ ಕಾರಣವಾಗಿ ಸಾವಿರಾರು ಜನ ತತ್ಪರಿಣಾಮವಾಗಿ ಪ್ರಾಣ ಕಳೆದು ಕೊಳ್ಳುವಂತಾಯಿತು. ಸುದೀರ್ಘ‌ಕಾಲದವರೆಗೆ ಈ ವಿಚಾರ ನ್ಯಾಯಾಲಯಗಳಲ್ಲಿ ವಿಚಾರಣೆಗೆ ಒಳಪಟ್ಟಿದೆ. 1992ರಲ್ಲಿ ಕರಸೇವಕರ ವಿರುದ್ಧ ಮಸೀದಿ ಧ್ವಂಸಗೊಳಿಸಿದ್ದಕ್ಕಾಗಿ ಹಾಗೂ ಆಡ್ವಾಣಿ, ಮುರಳಿ ಮನೋಹರ ಜೋಶಿ, ಬಾಳಾ ಠಾಕ್ರೆ ಸೇರಿದಂತೆ 49 ನಾಯಕರ ವಿರುದ್ಧ ಕ್ರಿಮಿನಲ್‌ ಸಂಚು ರೂಪಿಸಿದ್ದಾರೆಂದು ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಸಿಬಿಐ ಮರುವರ್ಷವೇ ಆಡ್ವಾಣಿ ಸೇರಿದಂತೆ 13 ಜನರ ವಿರುದ್ಧ ಪಿತೂರಿಯ ಆರೋಪ ಹೊರಿಸಿ ಚಾರ್ಜ್‌ಶೀಟ್‌ ಹಾಕಿತ್ತು.

ಇದಷ್ಟೇ ಅಲ್ಲದೇ, ಭಾರತೀಯ ರಾಜಕೀಯ ಚಿತ್ರಣವನ್ನೇ ಈ ಘಟನೆ ಪಲ್ಲಟಗೊಳಿಸಿದ್ದು ಸುಳ್ಳಲ್ಲ. ಕಳೆದ 28 ವರ್ಷಗಳಲ್ಲಿ ಈ ಪ್ರಕರಣ ಅನೇಕ ತಿರುವುಗಳನ್ನು ಕಾಣುತ್ತಾ ಬಂದಿತ್ತು. ಈ ಸುದೀರ್ಘ‌ ವರ್ಷಗಳಲ್ಲಿ ಅನೇಕ ಆಪಾದಿತರು ನಿಧನ ಹೊಂದಿದ್ದಾರೆ. ದಶಕಗಳಿಂದ ಈ ಇಡೀ ಪ್ರಕರಣದ ಪ್ರಮುಖ ಚರ್ಚೆಯ ಅಂಶವಾಗಿದ್ದದ್ದು ವಿವಾದಿತ ಕಟ್ಟಡ ಉದ್ರಿಕ್ತ ಗುಂಪಿನ ಆ ಕ್ಷಣದ ಆಕ್ರೋಶದ ಪರಿಣಾಮವಾಗಿ ಕೆಳಕ್ಕುರುಳಿತೇ ಅಥವಾ ಇದು ಪೂರ್ವಯೋಜಿತ ಕೃತ್ಯವಾಗಿತ್ತೇ ಎನ್ನುವುದು. ಈಗ ಈ ವಿಚಾರದಲ್ಲಿ ವಿಶೇಷ ನ್ಯಾಯಾಲಯ ಸ್ಪಷ್ಟ ತೀರ್ಪು ನೀಡಿದ್ದು, ಇದು ಪಿತೂರಿಯಾಗಿರಲಿಲ್ಲ, ಸಮಾಜ ವಿರೋಧಿ ಶಕ್ತಿಗಳು ಕಟ್ಟಡವನ್ನು ಕೆಳಕ್ಕುರುಳಿಸಿದ್ದವು, ಆಪಾದಿತ ನಾಯಕರು ಅವರನ್ನೆಲ್ಲ ತಡೆಯಲು ಪ್ರಯತ್ನಿಸಿದ್ದರು ಎಂದಿದೆ.

ಆದರೆ, ಈ ಹೊತ್ತಲ್ಲೇ ನ್ಯಾಯಾಲಯವನ್ನು ನಿಂದಿಸುವ ಕೆಲಸಗಳೂ ಆಗುತ್ತಿರುವುದು ದುರಂತ. ಭಾರತೀಯ ಜನತಾ ಪಾರ್ಟಿಯ ಹಿತದೃಷ್ಟಿಯನ್ನು ತಲೆಯಲ್ಲಿಟ್ಟುಕೊಂಡು ತೀರ್ಪು ನೀಡಲಾಗಿದೆ ಎಂಬರ್ಥದ ಮಾತುಗಳನ್ನು ವಿಪಕ್ಷಗಳ ನಾಯಕರು ಆಡುತ್ತಿದ್ದಾರೆ. ಈಗ ಈ ತೀರ್ಪನ್ನು ಪ್ರಶ್ನಿಸಿ ಕೋರ್ಟ್‌ ಮೆಟ್ಟಿಲೇರುವುದಾಗಿ ಅನೇಕ ಸಂಘಟನೆಗಳು ಹೇಳುತ್ತಿವೆ. ನ್ಯಾಯಿಕ ಪ್ರಕ್ರಿಯೆಯಲ್ಲಿ ಖಂಡಿತ ಇದಕ್ಕೆ ಅವಕಾಶ ಇದ್ದೇ ಇದೆ. ಹೀಗಾಗಿ, ಕಾನೂನಾತ್ಮಕ ಮಾರ್ಗವನ್ನು ಅನುಸರಿಸುವುದು ಸರಿಯೇ ಹೊರತು, ಇಡೀ ನ್ಯಾಯಾಂಗ ವ್ಯವಸ್ಥೆಯನ್ನೇ ಪ್ರಶ್ನಿಸುವಂತೆ ವರ್ತಿಸುವುದು ಖಂಡಿತ ತಪ್ಪು. ಕೋವಿಡ್‌-19ನ ಈ ಬಿಕ್ಕಟ್ಟಿನ ಸಮಯದಲ್ಲಿ, ರಾಜಕೀಯ ಸ್ವಹಿತಾಸಕ್ತಿಗಳು ಶಾಂತಿಯನ್ನು ಕದಡುವ ಕೆಲಸ ಆಗದಂತೆ ಎಚ್ಚರಿಕೆ ವಹಿಸುವುದು ಮುಖ್ಯ.

Advertisement
Advertisement

Udayavani is now on Telegram. Click here to join our channel and stay updated with the latest news.

Next