Advertisement
ಅರ್ಜಿ ವಿಚಾರಣೆ ಸಂದರ್ಭ ಆರೋಪಿ ಪರ ವಕೀಲರು ಅರ್ಜಿಯ ತುರ್ತು ವಿಚಾರಣೆ ನಡೆಸಲು ಕೋರಿದರು. ಅದಕ್ಕೆ ವಿಶೇಷ ಅಭಿಯೋಜಕರು ಆಕ್ಷೇಪಿಸಿದರು. ನ್ಯಾಯಾಧೀಶರು ಕೂಡ, ಆರೋಪಿ ವಿರುದ್ಧ 3 ಪ್ರಕರಣಗಳಿದ್ದು, ಎಸ್‌ಐಟಿಗೆ ಆಕ್ಷೇಪಣೆ ಸಲ್ಲಿಸಲು ಸಮಯ ಬೇಕಾಗುತ್ತದೆ ಎಂದು ಹೇಳಿ ಅರ್ಜಿ ವಿಚಾರಣೆಯನ್ನು ಮೇ 31ಕ್ಕೆ ಮುಂದೂಡಿದರು.
ಇತ್ತೀಚೆಗೆ ವೀಡಿಯೋ ಬಿಡುಗಡೆ ಮಾಡಿದ್ದ ಪ್ರಜ್ವಲ್, ಮೇ 31ರಂದು ಬೆಂಗಳೂರಿಗೆ ಬರುತ್ತೇನೆ. ಬಳಿಕ ಎಸ್‌ಐಟಿ ವಿಚಾರಣೆಗೆ ಹಾಜರಾಗುತ್ತೇನೆ ಎಂದು ಹೇಳಿದ್ದರು. ಹೀಗಾಗಿ ಅವರ ಆಗಮನಕ್ಕೆ ಎಸ್‌ಐಟಿ ಕಾಯುತ್ತಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ದಲ್ಲೇ ಅವರನ್ನು ವಶಕ್ಕೆ ಪಡೆಯಲು ಸಿದ್ಧವಾಗಿದೆ ಎನ್ನಲಾಗಿದೆ. ಹಂಗೇರಿಯಿಂದ ವೀಡಿಯೋ ಬಿಡುಗಡೆ!
ಇತ್ತೀಚೆಗೆ ಪ್ರಜ್ವಲ್ ನಿಗೂಢ ಸ್ಥಳದಿಂದ ವೀಡಿಯೋ ಬಿಡುಗಡೆ ಮಾಡಿದ್ದರು. ಅದರ ಮೂಲವನ್ನು ಎಸ್‌ಐಟಿ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಪ್ರಜ್ವಲ್ ಯೂರೋಪ್‌ನ ಹಂಗೇರಿ ರಾಜಧಾನಿ ಬುಡಾಪೆಸ್ಟ್‌ನಿಂದ ವೀಡಿಯೋ ಮಾಡಿರುವುದು ಗೊತ್ತಾಗಿದೆ.
Related Articles
Advertisement