Advertisement

ಕರ್ತವ್ಯಕ್ಕೆ ಅಡ್ಡಿ ಪ್ರಕರಣ: ಇಬ್ಬರ ಬಂಧನ

09:46 AM Apr 21, 2020 | sudhir |

ಬಂಟ್ವಾಳ: ಕೋವಿಡ್-19ಗೆ ಸಂಬಂಧಿಸಿದ ನಿಗ್ರಹ ದಳದ ಅಧಿಕಾರಿಯ ತಂಡಕ್ಕೆ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಘಟನೆ ಸೋಮವಾರ ಬಂಟ್ವಾಳ ಪುರಸಭಾ ವ್ಯಾಪ್ತಿಯ ಬಾರೆಕಾಡುನಲ್ಲಿ ನಡೆದಿದ್ದು, ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

Advertisement

ಬಾರೆಕಾಡು ನಿವಾಸಿ ರಫೀಕ್ ಹಾಗೂ ಮಹಮ್ಮದ್ ಹ್ಯಾರಿಸ್ ಬಂಧಿತ ಆರೋಪಿಗಳು. ನಿಗ್ರಹ ದಳದ ಅಧಿಕಾರಿ, ಪುರಸಭಾ ಪರಿಸರ ಎಂಜಿನಿಯರ್ ಯಾಸ್ಮಿನ್ ಅವರು ಚಾಲಕ ವೀರಪ್ಪ ಕೆ. ಹಾಗೂ ಗ್ರಾಮಾಂತರ ಠಾಣಾ ಸಿಬಂದಿಯೊಂದಿಗೆ ಬಾರೆಕಾಡುಗೆ ತೆರಳಿದಾಗ ಮಧ್ಯಾಹ್ನ 1 ಗಂಟೆಯಾದರೂ ರಫೀಕ್ ಅವರ ಅಂಗಡಿ ತೆರೆದಿದ್ದು, ಜತೆಗೆ ಸುಮಾರು 10 ಮಂದಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಗುಂಪಾಗಿ ನಿಂತಿದ್ದರು.

ಈ ವೇಳೆ ಅಧಿಕಾರಿ ಮುಚ್ಚುವಂತೆ ತಿಳಿಸಿದರೂ ಮುಚ್ಚದೆ, ಕೋವಿಡ್ ಹರಡುವ ಸಾಧ್ಯತೆಯ ಕುರಿತು ತಿಳಿಸಿದರೂ, ಉದ್ದೇಶ ಪೂರ್ವಕವಾಗಿ ಕರ್ತವ್ಯಕ್ಕೆ ಅಡ್ಡಿಪಡಿಸಿರುತ್ತಾರೆ.

ಜತೆಗೆ ಗುಂಪಿನಲ್ಲಿದ್ದ ಖಾದರ್ ಎಂಬಾತ ಚಾಲಕ ವೀರಪ್ಪ ಅವರ ಅಂಗಿಯ ಕಾಲರ್ ಹಿಡಿದು ಬೆದರಿಕೆ ಹಾಕಿದ್ದು, ಈ ವೇಳೆ ಪೊಲೀಸ್ ಸಿಬಂದಿ ಜಗಳ ಬಿಡಿಸಿದ್ದಾರೆ. ಸ್ಥಳದಲ್ಲಿದ್ದ ಉಳಿದವರನ್ನು ಹನೀಫ್, ಬದ್ರು, ಹ್ಯಾರೀಸ್, ಇಮ್ತಿಯಾಜ್, ರೆಹಮತ್ಲು ಎಂದು ತಿಳಿಸಿದ್ದಾರೆ. ಈ ಕುರಿತು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಂಟ್ವಾಳ ಡಿವೈಎಸ್ಪಿ ನೇತೃತ್ವದಲ್ಲಿ ವಿಶೇಷ ಪೊಲೀಸ್ ತಂಡವನ್ನು ರಚಿಸಿಕೊಂಡು ಉಳಿದ ಆರೋಪಿಗಳಿಗೆ ಶೋಧ ಕಾರ್ಯ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next