Advertisement
ಉಡುಪಿ ಚಿಟ್ಟಾಡಿಯ ಯೋಗೀಶ್ ಪೂಜಾರಿ(43), ಕೊಡವೂರು ಮಾಧವ ನಗರದ ಸುಧಾಕರ್(42), ಉದ್ಯಾವರದ ವಸಂತ(52), ಎಲ್ಲೂರಿನ ಕಿರಣ್ (34) ಶಿಕ್ಷೆಗೆ ಗುರಿಯಾದ ಆರೋಪಿಗಳು. ಇವರೆಲ್ಲರು ಕಾರು ಚಾಲಕರಾಗಿ ದುಡಿಯುತ್ತಿದ್ದರು.
ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಶಿರ್ವ ನಿವಾಸಿ ರಾಜೇಶ್ ಶೆಟ್ಟಿಗಾರ್(40) ಅವರು ಕಾರು ಬಾಡಿಗೆ ನಡೆಸುತ್ತಿದ್ದರು. ಇಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿದ್ದ ಯೋಗೀಶ್ ಪೂಜಾರಿಯ ಬಳಿ ಬ್ಯಾಡ್ಜ್ ಇಲ್ಲ ಎಂಬ ಕಾರಣಕ್ಕೆ ಅವರು ಕಾರು ನಿಲ್ದಾಣದಲ್ಲಿ ಕಾರು ನಿಲ್ಲಿಸುವ ಬಗ್ಗೆ ಅವರ ಸಂಘಕ್ಕೆ ದೂರು ನೀಡಿದ್ದರು. ಇದೇ ದ್ವೇಷದಲ್ಲಿ ಯೋಗೀಶ್ ಪೂಜಾರಿ ಇತರರೊಂದಿಗೆ ಸೇರಿ 2017ರ ಮಾ.7ರಂದು ರಾಜೇಶ್ ಶೆಟ್ಟಿಗಾರ್ ವಾಸ ಮಾಡಿಕೊಂಡಿದ್ದ ಕುಂಜಿಬೆಟ್ಟು ಕಾನೂನು ಕಾಲೇಜು ಸಮೀಪದ ರೂಮಿಗೆ ಹೋಗಿ ಕೊಲೆಗೆ ಯತ್ನಿಸಿ ಮರಾಣಾಂತಿಕವಾಗಿ ಹಲ್ಲೆ ನಡೆಸಿದ್ದರು. ಈ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಂದಿನ ಎಸ್‌ಐ ಅನಂತಪದ್ಮನಾಭ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾ ರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶ ದಿನೇಶ್ ಹೆಗ್ಡೆ ಆರೋಪಿಗಳ ಮೇಲಿನ ಆರೋಪ ಸಾಬೀತಾಗಿದೆ ಎಂದು ಅಭಿ ಪ್ರಾಯ ಪಟ್ಟು, ಕಲಂ 307 ಅಡಿ 6 ತಿಂಗಳ ಸಾದಾ ಸಜೆ, 326ರಡಿ 3ವರ್ಷ ಗಳ ಜೈಲು ಶಿಕ್ಷೆ ಮತ್ತು ತಲಾ 20ಸಾವಿರ ರೂ. ದಂಡ, 504ರಡಿ 6 ತಿಂಗಳ ಹಾಗೂ 506ರಡಿ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ. ಪ್ರಾಸಿಕ್ಯೂಷನ್ ಪರವಾಗಿ ಜಿಲ್ಲಾ ಸರಕಾರಿ ಅಭಿಯೋಜಕ ಜಯರಾಮ್ ಶೆಟ್ಟಿ ವಾದಿಸಿದ್ದರು.