ಕಿನ್ನಿಗೋಳಿ: ಕಿನ್ನಿಗೂಳಿ ಮೂಡುಬಿದಿರೆ ರಾಜ್ಯ ಹೆದ್ದಾರಿಯ ಕಮ್ಮಾಜೆ ನೇಕಾರ ಕಾಲನಿ ಬಳಿ ಒಮಿನಿ ಕಾರು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಢಿಕ್ಕಿ ಹೊಡೆದಿದ್ದು, ಕಾರಿನಲ್ಲಿದ್ದ ನಾಲ್ವರು ಪಾರಾಗಿದ್ದಾರೆ.
ಉಜಿರೆ ಕಡೆಯಿಂದ ಹಳೆಯಂಗಡಿ ಕಡೆಗೆ ಬರುತ್ತಿದ್ದ ಆಮ್ನಿ ಕಾರು ಕಿನ್ನಿಗೋಳಿ ಸಮೀಪದ ಮೂರುಕಾವೇರಿ ಕಮ್ಮಾಜೆ ತಲುಪುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಢಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಆಮ್ನಿ ಕಾರಿನ ಎದುರು ಭಾಗ ನಜ್ಜುಗುಜ್ಜಾಗಿದೆ. ಕಾರಿನಲ್ಲಿದ್ದ ಚಾಲಕ ಹಾಗೂ ಮಗು ಸೇರಿ ನಾಲ್ವರು ಪ್ರಯಾಣಿಕರು ಅಲ್ಪಸಲ್ಪ ಗಾಯಗಳೊಂದಿಗೆ ಪಾರಾಗಿದ್ದಾರೆ. ಗಾಯಾಳು ಪ್ರಯಾಣಿಕರು ಉಜಿರೆ ಕಡೆಯಿಂದ ಮದುವೆ ಮುಗಿಸಿ ವಾಪಸ್ ತಮ್ಮ ಊರಿಗೆ ಬರುತ್ತಿದ್ದರು ಎನ್ನಲಾಗಿದ್ದು, ನಿದ್ದೆಯ ಮಂಪರಿನಲ್ಲಿ ಅಪಘಾತ ನಡೆದಿರಬಹುದು ಎಂದು ಶಂಕಿಸಲಾಗಿದೆ.