Advertisement

ಕರಿದ ಎಣ್ಣೆಯ ಮೂಲಕ 9 ವರ್ಷದಿಂದ ಓಡುತ್ತಿರುವ ಕಾರು!

02:24 PM Jul 14, 2022 | Team Udayavani |

ಬೆಂಗಳೂರು: ಕರಿದ ಎಣ್ಣೆಯನ್ನು ಸಂಸ್ಕರಿಸುವ ಮೂಲಕ ಜೈವಿಕ ಇಂಧನವನ್ನಾಗಿ ಮಾರ್ಪ ಡಿಸಿ ಡೀಸೆಲ್‌ ಕಾರಿಗೆ ಬಳಕೆ ಮಾಡುವ ಮೂಲಕ ಇಲ್ಲೊಬ್ಬ ಯುವಕ ದಾಖಲೆ ಮಾಡಿದ್ದಾನೆ.

Advertisement

ಜಿಕೆವಿಕೆಯಿಂದ ಪ್ರಮಾಣ ಪತ್ರ ಪಡೆದ ಈ ಜೈವಿಕ ಇಂಧನವನ್ನು ಡೀಸೆಲ್‌ ಚಾಲಿತ ಎಲ್ಲಾ ಗಾಡಿಗಳಲ್ಲಿ ಬಳಸಬಹುದಾಗಿದ್ದು, ಅವಿನಾಶ್‌ ನಾರಾಯಣಸ್ವಾಮಿ ಎಂಬಾತ ತಮ್ಮ ಕಾರಿಗೆ ಸುಮಾರು 9 ವರ್ಷಗಳಿಂದ ಡಿಸೇಲ್‌ ಹಾಕುವ ಬದಲಿಗೆ, ಅವರೇ ತಯಾರಿಸಿದ ಜೈವಿಕ ಇಂಧನ ಬಳಸುತ್ತಿದ್ದಾರೆ. ಇದುವರೆಗೆ ಸುಮಾರು 1.20 ಲಕ್ಷ ಕಿ. ಮೀ. ದೂರ ಕಾರು ಕ್ರಮಿಸಿದೆ.

ಹೋಟೆಲ್‌ಗ‌ಳಿಂದ ಕರಿದ ಎಣ್ಣೆಯನ್ನು ಖರೀದಿಸಿ, ಅದನ್ನು 6ರಿಂದ 7 ಗಂಟೆಗಳ ಕಾಲ ವಿವಿಧ ಹಂತಗಳಲ್ಲಿ ಸಂಸ್ಕರಣೆ ಮಾಡುವುದರಿಂದ ಒಂದು ಲೀಟರ್‌ ಕರಿದ ಎಣ್ಣೆಗೆ 700ರಿಂದ 800 ಎಂ.ಎಲ್‌ ಜೈವಿಕ ಇಂಧನ ದೊರೆಯುತ್ತದೆ. ಅಷ್ಟೇ ಅಲ್ಲದೆ ಇದರ ಬೆಲೆಯೂ ಇತರೆ ಇಂಧನಕ್ಕೆ ಹೋಲಿ ಸಿದರೆ ಕಡಿಮೆ ವೆಚ್ಚ ಮತ್ತು ಪರಿಸರ ಸ್ನೇಹಿಯಾಗಿರಲಿದೆ. ಜೈವಿಕ ಇಂಧನದ ಬೆಲೆ ಗರಿಷ್ಠ ಎಂದರೂ 60 ರಿಂದ 65 ರೂ. ವೆಚ್ಚ ತಗುಲಬಹುದು.

2013ರಿಂದ ತನ್ನ ಕಾರಿಗೆ ಜೈವಿಕ ಇಂಧನವನ್ನು ಬಳಸಲಾಗುತ್ತಿದ್ದು, ಇದುವರೆಗೆ ಯಾವುದೇ ಸಮಸ್ಯೆ ಕಂಡು ಬಂದಿಲ್ಲ. ಒಂದು ಲೀಟರ್‌ ಜೈವಿಕ ಇಂಧನಕ್ಕೆ ಕಾರು 15- 17 ಮೈಲೇಜ್‌ ನೀಡುತ್ತಿದೆ. ಹೊಗೆ ತಪಾಸಣೆಯಲ್ಲೂ ಡಿಸೇಲ್‌ ಬಳಕೆ ಗಾಡಿಗಳಿಗಿಂತ ಅತ್ಯಂತ ಕಡಿಮೆ ಮಾಲಿನ್ಯದ ಫ‌ಲಿತಾಂಶ ಬಂದಿದೆ. ಇಷ್ಟೇ ಅಲ್ಲದೇ ಇಂಧನ ತಯಾರಿಸುವಾಗ ಬರುವ ತ್ಯಾಜ್ಯದಿಂದ ಹ್ಯಾಂಡ್‌ವಾಶ್‌, ಫ್ಲೋರ್‌ ಕ್ಲೀನರ್‌ ಸೇರಿದಂತೆ ಇತರೆ ಉಪಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ ಎನ್ನುತ್ತಾರೆ ಅವಿನಾಶ್‌.

Advertisement

ಇದನ್ನೂ ಓದಿ:ಪಿಎಸ್ಐ ಅಕ್ರಮ; ಬಂಧಿತ ಅಧಿಕಾರಿಗಳ ಮಂಪರು ಪರೀಕ್ಷೆ ಮಾಡಿ: ಸಿದ್ದರಾಮಯ್ಯ

ರಾಜ್ಯದ ಪ್ರತಿ ಜಿಲ್ಲೆಯಲ್ಲಿಯೂ ಇದರ ಘಟಕ ವನ್ನು ತೆರೆಯಲಾಗಿದ್ದು, ಕಾರ್ಖಾನೆಗಳಲ್ಲಿ ಯಂತ್ರ ಗಳನ್ನು ಚಲಾಯಿಸಲು ಪ್ರಾಯೋಗಿಕವಾಗಿ ಬಳಸಲಾಗುತ್ತಿದೆ. ಅಲ್ಲದೆ, ಈ ಇಂಧನದಿಂದಾಗುವ ಅನು ಕೂಲ ಮತ್ತು ಅನನುಕೂಲಗಳ ಕುರಿತು ಸಂಶೋ ಧನೆಗಳೂ ನಡೆಯುತ್ತಿವೆ. ಈ ಇಂಧನವು ಸಂಪೂರ್ಣವಾಗಿ ಆತ್ಮನಿರ್ಭರ ಮತ್ತು ಪರಿಸರ ಸ್ನೇಹಿ ಇಂಧನವಾಗಿದೆ ಎಂದು ಹೇಳುತ್ತಾರೆ. ಜೈವಿಕ ಇಂಧನ ಮತ್ತು ಉಪ ಉತ್ಪನ್ನಗಳನ್ನು ತಯಾರಿಸುತ್ತಿರುವ ಹಿನ್ನೆಲೆ ಇಂಡಿಯನ್‌ ಬುಕ್‌ ಆಫ್‌ ರೆಕಾಡ್‌ ನಲ್ಲಿ ಅವಿನಾಶ್‌ ದಾಖಲೆ ಬರೆದಿದ್ದಾರೆ.

-ಭಾರತಿ ಸಜ್ಜನ್‌

Advertisement

Udayavani is now on Telegram. Click here to join our channel and stay updated with the latest news.

Next