ಬಂಟ್ವಾಳ: ರಿಕ್ಷಾ ಟೆಂಪೋವೊಂದರಲ್ಲಿ ಸಿಮೆಂಟ್ ಸೀಟು ಲೋಡ್ ಮಾಡುತ್ತಿದ್ದ ವೇಳೆ ಹಿಂಬದಿಯಿಂದ ಕಾರು ಢಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ರಿಕ್ಷಾ ಚಾಲಕ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಬುಧವಾರ ನಡೆದಿದೆ.
ನೌಶಾದ್ ಸುರಿಬೈಲು (28) ಮೃತಪಟ್ಟ ವ್ಯಕ್ತಿ.
ಇಂದು ಮುಂಜಾನೆ ಕಲ್ಲಡ್ಕ ಪೂರ್ಲಿಪ್ಪಾಡಿ ಕೆ.ಎನ್ ಬೇಕರಿ ಬಳಿಯಲ್ಲಿ ರಿಕ್ಷಾ ಟೆಂಪೋ ನಿಲ್ಲಿಸಿ ಸಿಮೆಂಟ್ ಸೀಟು ಲೋಡು ಮಾಡುತ್ತಿರುವ ವೇಳೆ ಕಾರೊಂದು ಹಿಂಬದಿಯಿಂದ ಬಂದು ನೌಶಾದ್ ಅವರಿಗೆ ಢಿಕ್ಕಿ ಹೊಡೆದಿದೆ. ಢಿಕ್ಕಿಯ ಪರಿಣಾಮ ಗಂಭೀರವಾಗಿ ಗಾಯಗೊಂಡ ನೌಶಾದ್ನನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನೌಶಾದ್ ಮೃತಪಟ್ಟಿದ್ದಾರೆ.
ಇದನ್ನೂ ಓದಿ:ಅನೈತಿಕ ಎಂಬುದು ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಅನ್ವಹಿಸುವ ಶಬ್ದ: ರವಿಕುಮಾರ್
ಸ್ಥಳಕ್ಕೆ ಬಂಟ್ವಾಳ ಟ್ರಾಫಿಕ್ ಎಸ್.ಐ.ಮೂರ್ತಿ ಭೇಟಿ ನೀಡಿ, ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.