ಕುಂದಾಪುರ,ಮಾ. 2: ಬೈಂದೂರು- ಕುಂದಾಪುರ ರಾ. ಹೆ.66ರ ಕಿರಿಮಂಜೇಶ್ವರ ಸಮೀಪ ಬುಧವಾರ ಸಂಜೆ ಕಾರು ಡಿವೈಡರ್‌ಗೆ ಢಿಕ್ಕಿ ಹೊಡೆದ ಪರಿಣಾಮ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರು ಗಾಯಗೊಂಡ ಘಟನೆ ಸಂಭವಿಸಿದೆ.
ಬೆಂಗಳೂರಿನ ಆರ್. ವಿಜಯ್ ಅವರ ಪುತ್ರ ಅಕ್ಷಯ್ (23) ಮೃತಪಟ್ಟ ಯುವಕ. ತೇಜಸ್ (24), ಪವನ್(23), ಹರ್ಷ(24) ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದು, ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಿರಿಮಂಜೇಶ್ವರ ಸಮೀಪದ ಹೆದ್ದಾರಿಯಲ್ಲಿ ಕಾರು ಡಿವೈಡರ್‌ಗೆ ಢಿಕ್ಕಿ ಹೊಡೆದು, ಮತ್ತೂಂದು ಬದಿಗೆ ಪಲ್ಟಿ ಹೊಡೆದಿದೆ. ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಅಕ್ಷಯ್ ಗಂಭೀರ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ತಕ್ಷಣ ಸ್ಥಳಕ್ಕಾಗಮಿಸಿದ ಇಬ್ರಾಹಿಂ ಗಂಗೊಳ್ಳಿಯವರ ಆ್ಯಂಬುಲೆನ್ಸ್ ನಲ್ಲಿ ಸ್ಥಳೀಯರಾದ ನತಾರ್, ನದೀಂ ಸಹಕಾರದೊಂದಿಗೆ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಮೃತ ದೇಹವನ್ನು ಕುಂದಾಪುರದ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ. ಬೈಂದೂರು ಎಸ್‌ಐ ಪವನ್ ನಾಯಕ್, ಪೊಲೀಸ್ ಸಿಬಂದಿ ಘಟನ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರವಾಸ ಬಂದಿದ್ದರು: ಇವರು ಪಿಯುಸಿಯಲ್ಲಿ ಸಹಪಾಠಿಗಳಾಗಿದ್ದು, ಬಾಲ್ಯ ಸ್ನೇಹಿತರಾಗಿದ್ದರು. ತೇಜಸ್ ಗೆ ಸೇರಿದ್ದ ಇನ್ನೋವಾ ಕಾರಿನಲ್ಲಿ ಫೆ. 26ರಂದು ಬೆಂಗಳೂರಿನಿಂದ ಹೊನ್ನಾವರಕ್ಕೆ ಬಂದಿದ್ದು, ಕಾರವಾರ, ಗೋಕರ್ಣ ಮೊದಲಾದೆಡೆ ಪ್ರವಾಸ ಮಾಡಿ, ಬುಧವಾರ ಸಂಜೆ 4.30ಕ್ಕೆ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದರು. ಅಕ್ಷಯ್ ಫೋಟೋಗ್ರಫಿ ವೃತ್ತಿ ಮಾಡಿ ಕೊಂಡಿದ್ದರು. ತೇಜಸ್ ವಿದ್ಯಾರ್ಥಿ, ಪವನ್ ಐಟಿ ಉದ್ಯೋಗಿ ಹಾಗೂ ಹರ್ಷ ಮೆಡಿಕಲ್ ಪ್ರೊಕ್ಯೂರ್‌ವೆುಂಟ್ ನಲ್ಲಿ ಕೆಲಸ ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ.