Advertisement
ಇಂದ್ರದ್ಯುಮ್ನನ ಸ್ವರ್ಗದ ಕಥೆಕಥಾ ಸಾರಾಂಶ ಹೀಗಿದೆ: ಇಂದ್ರದ್ಯುಮ್ನ ಎಂಬ ರಾಜ ಬಹುಕಾಲ ಸ್ವರ್ಗದಲ್ಲಿ ಸುಖವಾಗಿದ್ದ. ಒಂದು ದಿನ ದೇವತೆಗಳು ಬಂದು “ನಿನ್ನ ಪುಣ್ಯ ಖರ್ಚಾಯಿತು. ಇನ್ನು ನೀನು ಇಲ್ಲಿರುವಂತಿಲ್ಲ. ಭೂಮಿಗೆ ಹೋಗಿ ಹುಟ್ಟು’ ಎಂದರು. ಇಂದ್ರದ್ಯುಮ್ನ ಭೂಮಿಗೆ ಬಂದು ಒಂದು ಮುದಿ ಗೂಬೆ ಬಳಿ “ನಾನು ಇಂದ್ರದ್ಯುಮ್ನ ರಾಜ. ಇಲ್ಲಿ ಬಹುಕಾಲ ಆಳಿದ್ದೇನೆ. ನನ್ನ ಪರಿಚಯ ಇದೆಯೇ?’ ಎಂದು ಕೇಳಿದ.
ಕೂಡಲೇ ದೇವತೆಗಳು ವಿಮಾನದಲ್ಲಿ ಬಂದರು. “”ನಮ್ಮ ಲೆಕ್ಕಾಚಾರ ತಪ್ಪಾಯಿತು. ಯಾವಾಗ ಆಮೆ ನಿನ್ನನ್ನು ಸ್ಮರಿಸಿತೋ ಆಗ ನಿನ್ನ ಪುಣ್ಯ ಇನ್ನೂ ಇದೆ ಎಂದಾಯಿತು. ಭೂಮಿಯಲ್ಲಿ ನೀನು ಮಾಡಿದ ಉಪಕಾರವನ್ನು ಸ್ಮರಿಸುವವರೆಗೆ ಸ್ವರ್ಗದಲ್ಲಿ ಸ್ಥಾನವಿರುತ್ತದೆ. ಬಾ” ಎಂದು ಸ್ವರ್ಗಕ್ಕೆ ಕರೆದುಕೊಂಡು ಹೋದರು. ಮುಂದಿನ ಪೀಳಿಗೆಯವರು ಸ್ಮರಿಸುವಂತಹ ಕೆಲಸ ಮಾಡಿದರೆ ಸ್ವರ್ಗದಲ್ಲಿ ಸ್ಥಾನವಿರುತ್ತದೆ. ಹೀಗೆ ಜೀವನದಲ್ಲಿ ಹೇಗೆ ನಡೆದುಕೊಳ್ಳಬೇಕೆಂದು ಮಹಾಭಾರತದ ಅನೇಕ ಉಪಾಖ್ಯಾನಗಳು ಸಾರುತ್ತಿವೆ ಎಂದು ಪೇಜಾವರ ಶ್ರೀಗಳು ಹೇಳಿದರು.
Related Articles
ಇಲ್ಲಿ ಸ್ವಾಮಿಗಳ ಬಾಯಲ್ಲಿ ಕೊನೆಯ ಹೊತ್ತಿಗೆ ನುಡಿಸಿದ ಶಕ್ತಿಯನ್ನು ವಿಧಿಯೋ, ದೇವರೋ ಏನು ಬೇಕಾದರೂ ಕರೆದುಕೊಳ್ಳಬಹುದು. ಅದು ಅಷ್ಟು ಪಕ್ಕಾ ಆಗಿ ನುಡಿಸಿದ್ದು ಮಾತ್ರ ಅತ್ಯಾಶ್ಚರ್ಯ ಉಂಟುಮಾಡದೆ ಇರದು. ಈ ಶಕ್ತಿ ಅವರವರ ಸಾಧನೆಗೆ ಅನುಗುಣವಾಗಿ ಕೆಲವು ಸಂದರ್ಭಗಳಲ್ಲಿ ಕೆಲವನ್ನು ನುಡಿಸಿಯೋ, ಮಾಡಿಯೋ ತೋರಿಸುತ್ತದೆ ಎಂದು ಅರ್ಥೈಸಬಹುದು. ಇನ್ನೊಂದು ವಿಶೇಷವೆಂದರೆ ಜೀವಾತ್ಮ ಪರಮಾತ್ಮ ಬೇರೆ ಎನ್ನುವವರಿಗೆ, ಒಂದೇ ಎನ್ನುವವರಿಗೆ, ಇಲ್ಲಿ ಬೇರೆ ಅಲ್ಲಿ ಒಂದೇ ಎನ್ನುವವರಿಗೆ, ಭಗವಂತ ಸೃಷ್ಟಿಕರ್ತ, ಇಡೀ ಜಗತ್ತನ್ನು ಸೃಷ್ಟಿಸಿದವ, ಇದರಲ್ಲಿ ಮಾನವರು ಬುದ್ಧಿವಂತರು, ಮಾನವರು ದೇವರೆಂಬ ತಂದೆಯ ಮಕ್ಕಳು, ಆತ್ಮವೇ ಇಲ್ಲ ಎನ್ನುವವರು ಹೀಗೆ ಜಗತ್ತಿನ ನಾನಾ ವಾದಿಗಳಿಗೆ ಆಯಾ ಕಾಲಘಟ್ಟಗಳಲ್ಲಿ ಸಾಮರ್ಥ್ಯಕ್ಕೆ ತಕ್ಕಂತೆ ಆ ಶಕ್ತಿ ಕೊಡುವುದು ಏಕಮೂಲಿಕಾ ಪ್ರಯೋಗದಂತೆ ಕಂಡುಬರುತ್ತದೆ.
Advertisement
ವಿಧಿಯ ಗುಟ್ಟು-ಭವಿಷ್ಯದಲ್ಲಿ ರಟ್ಟು!“ವಿಮಾನ ಬಂತು’ ಎಂಬ ಶಬ್ದಕ್ಕಿಂತ ಹೇಳಿದ ಆಂಗಿಕ ಭಂಗಿ ವಿಶಿಷ್ಟವಾಗಿತ್ತು. ಜೀವಮಾನದುದ್ದಕ್ಕೂ ಅವರು ಯಾವ ಕೆಲಸವನ್ನು ಮಾಡಿದ್ದರೋ ಅದುವೇ ಸ್ವರ್ಗದಲ್ಲಿ ಸ್ಥಾನ ಪ್ರಾಪ್ತವಾಗುವುದಕ್ಕೆ ಕಾರಣವಾಗುತ್ತದೆ ಎನ್ನುವುದನ್ನು ಅವರು ಹೇಳಿದ್ದಲ್ಲ, ವಿಧಿ ಅವರ ಬಾಯಿಯಿಂದ ಜನತೆಗೆ ತಿಳಿಯುವಂತೆ ಮಾಡಿತು. ಕೊನೆಗೂ ಅವರಿಗಾಗಿ ಹೆಲಿಕಾಪ್ಟರ್ ಬಂದು ಅದರಲ್ಲಿಯೇ ಅವರು ಹೋಗುವಂತಾಯಿತು. ಅವರು ಏನನ್ನು ಹೇಳಿದರೋ ಆ ಸಂದೇಶದ ಹಿಂದಿನ ಮರ್ಮ ಅವರಿಗೂ ತಿಳಿಯದಂತೆ ಮಾಡುವುದು ವಿಧಿಯ ಕೈಚಳಕ. ಈ ವಿಷಯದಲ್ಲಿ ಅದು ಎಂದಿಗೂ ಯಾರ ಎದುರೂ ಸೋಲುವುದಿಲ್ಲ. ಒಬ್ಬರಿಗೆ ಹೀಗಾಯಿತೆಂದು ಇನ್ನೊಬ್ಬರಿಗೆ ನಾವು ಊಹಿಸಿದರೆ ಅದರಲ್ಲೂ ಅದು ದಾರಿ ತಪ್ಪಿಸುತ್ತದೆ. ಘಟನೆ ಆದ ಬಳಿಕ “ಓಹೋ’ ಎಂದು ಆಶ್ಚರ್ಯಪಡುವಂತೆ ಮಾಡುವುದು ವೈಶಿಷ್ಟ್ಯ. ಕನಿಷ್ಠ ಜನತೆಗೆ ಏನು ತಿಳಿಸಬೇಕೋ ಅದನ್ನು ತಿಳಿಸುವಂತೆ ಮಾಡುವಲ್ಲಿ ವಿಧಿ ಮರೆಯಲಿಲ್ಲ. ಹಾಗಂತ ಅದು ಎಲ್ಲರನ್ನೂ ಮಾಧ್ಯಮವಾಗಿ ಬಳಸುವುದೂ ಇಲ್ಲ. ಅಧಿಕಾರಸ್ಥರಿಗೂ ಸಂದೇಶ
ಈ ಸಂದೇಶಕ್ಕೆ ಮುನ್ನ ರಾಜಕಾರಣಿಗಳು, ಅಧಿಕಾರಸ್ಥರು ಸರಕಾರದ ಹಣವನ್ನು ಹೇಗೆ ಬಳಸಬೇಕು, ವೈಯಕ್ತಿಕ ಬೇಡಿಕೆಗಳಿಗೆ ವೈಯಕ್ತಿಕ ಹಣವನ್ನೇ ಬಳಸಬೇಕೆ ವಿನಾ ಸರಕಾರದ ಹಣವನ್ನು ಬಳಸಬಾರದು ಎಂಬ ದೃಷ್ಟಾಂತಕ್ಕೆ ಧರ್ಮರಾಜ- ಭೀಮನ ಉಪಾಖ್ಯಾನ, ಅಗಸ್ಥ್ಯ- ಲೋಪಾಮುದ್ರೆಯ ಕಥೆಯ ಉಪಾಖ್ಯಾನವನ್ನು ಬಳಸಿಕೊಂಡರು. ವಿದ್ಯೆ-ದೇಶ-ದೇವ-ಮಹಾದೇವ…
ಹುಟ್ಟೂರು ರಾಮಕುಂಜದ ಶಾಲೆಯಲ್ಲಿ ಅವರು ಶಿಕ್ಷಣದಲ್ಲಿ ಆಸಕ್ತಿ, ದೇಶ ಮತ್ತು ದೇವರಲ್ಲಿ ಭಕ್ತಿ ಬೇಕು ಎಂದು ಪ್ರತಿಪಾದಿಸಿದರು. ತನಗೆ ಹುಷಾರಿಲ್ಲ, ಎರಡೇ ನಿಮಿಷ ಮಾತನಾಡುತ್ತೇನೆ ಎಂದು ಹೇಳಿದರು. ಉಪನ್ಯಾಸ ಆರಂಭಿಸುವ ಮೊದಲು ಸಹಜವಾಗಿ ಹೇಳುವ ಶ್ಲೋಕಗಳನ್ನು ಹೇಳದೆ ಗ್ರಾಮದೇವತೆಯಾದ ರಾಮ, ಮಹಾದೇವನಿಗೆ (ರಾಮಕುಂಜೇಶ್ವರನಿಗೆ) ನಮಿಸುವುದಾಗಿ ಹೇಳಿದರು. ಈ ಮೂಲಕ ಹುಟ್ಟಿದ ಮನೆಯಲ್ಲಿ ರಾಮ- ವಿಟ್ಟಲನಿಗೆ ಪೂಜೆ, ಸಂಜೆ ಮಹಾದೇವನನ್ನು ಸ್ಮರಣೆ ಮಾಡುವ ಮೂಲಕ ಸೃಷ್ಟಿ-ಸ್ಥಿತಿ- ಲಯ ಕರ್ತರಾದ ಬ್ರಹ್ಮ-ವಿಷ್ಣು-ಶಿವನನ್ನು ಒಂದೇ ದಿನದಲ್ಲಿ ಸ್ಮರಿಸಿದರು. ರಾಮಕುಂಜದ ಕಾರ್ಯಕ್ರಮ ಬಳಿಕ ರಾಜಾಂಗಣದಲ್ಲಿ ಮೂರು ಉಪಾಖ್ಯಾನಗಳನ್ನು ಹೇಳಲು ಅರ್ಧ ಗಂಟೆ ತೆಗೆದುಕೊಂಡರು. ಪರ್ಯಾಯ ಪಲಿಮಾರು ಸ್ವಾಮೀಜಿಯವರು “ನೀವು ಅನಾರೋಗ್ಯದಲ್ಲಿರುವಾಗ ಉಪನ್ಯಾಸ ನೀಡುವುದು ಬೇಡ’ ಎಂದರೂ ಅರ್ಧ ಗಂಟೆ ಪ್ರವಚನ ನೀಡಿದರೆಂಬುದನ್ನು ಘಟನೆಯ ಸಾಕ್ಷಿಯು ಶ್ರೀಧರ್ ಹೇಳುತ್ತಾರೆ. ರಾಮಕುಂಜದ ವೀಡಿಯೋ ಗಮನಿಸಿದರೆ ಅಲ್ಲಿ ಅನಾರೋಗ್ಯ ತೀವ್ರ ಬಾಧೆ ಮತ್ತು ಕೊನೆಯ ಉಪನ್ಯಾಸದಲ್ಲಿ ಜ್ವರಪೀಡನೆ ಇದ್ದರೂ ಆವೇಶ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಯಕ್ಷಪ್ರಶ್ನೆ ಸಾರ್ವಕಾಲಿಕ
ನಾವು ವಿಧಿಯ ಕರೆಯನ್ನು ಓದುವ, ನೋಡುವ ಕಲೆ ಕಲಿತುಕೊಳ್ಳಬೇಕಾಗಿದೆ. ವಿಧಿಯ ಕರೆಯನ್ನು ಓದುವ ಬದಲು ಕೇವಲ ಪುಸ್ತಕಗಳನ್ನು ಓದಿದರೆ ಏನೂ ಅರ್ಥವಾಗದು. ಆಕಸ್ಮಿಕವಾಗಿ ವಿಧಿ ತೋರಿಸುವ ಹೆಜ್ಜೆ, ಕರೆಗಳನ್ನು ಇಂತಹ ಉದಾಹರಣೆಗಳ ಹಿಂದೆ ನಿಧಾನವಾಗಿ ಹೋಗಿ ಅರಿಯುವ, ಸಂಶೋಧಿಸುವ ಪ್ರವೃತ್ತಿ ಬೆಳೆಯದಿದ್ದರೆ ಮಹಾಭಾರತದ ವನಪರ್ವದಲ್ಲಿ ಬರುವ ಯಕ್ಷಪ್ರಶ್ನೆಯ ಕತೆಯನ್ನು ಮನನ ಮಾಡುತ್ತಲೇ ಇರಬೇಕು. “ನಿತ್ಯ ಸಾವಿರಾರು ಜೀವಿಗಳು ಸಾಯುವುದನ್ನು ನೋಡುತ್ತಿದ್ದರೂ ನಾವು ಮಾತ್ರ ಚಿರಂಜೀವಿಗಳಂತೆ ವರ್ತಿಸುತ್ತೇವೆ’ ಎಂಬ ಧರ್ಮರಾಜನ ಉತ್ತರ ನಿನ್ನೆ ಮತ್ತು ಇಂದಿಗೆ ಮಾತ್ರವಲ್ಲ, ಎಂದೆಂದಿಗೂ ಸತ್ಯ ಎಂಬ ಅರಿವು ಬರುತ್ತದೆ. – ಮಟಪಾಡಿ ಕುಮಾರಸ್ವಾಮಿ