Advertisement

Singapore ಬಿಟ್ಟು ಬೆಂಗಳೂರಲ್ಲಿ ನೆಲೆಸಿದ ಉದ್ಯಮಿ; ವೈರಲ್ ಆಯ್ತು ಆತ ನೀಡಿದ ಕಾರಣ

03:18 PM Jun 21, 2024 | Team Udayavani |

ಬೆಂಗಳೂರು: ಸಿಂಗಾಪುರದಲ್ಲಿ ನೆಲೆಸಿದ್ದ ಭಾರತೀಯ ಉದ್ಯಮಿಯೊಬ್ಬರು ಇದೀಗ ಬೆಂಗಳೂರಿಗೆ ಬಂದು ನೆಲೆಸಿದ್ದಾರೆ. ಸಿಂಗಾಪುರ ತೊರೆದು ಕುಟುಂಬ ಸಮೇತ ಬೆಂಗಳೂರಿಗೆ ಬರಲು ಅವರು ನೀಡಿದ ಕಾರಣ ಇದೀಗ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ವೈರಲ್ ಆಗಿದೆ.

Advertisement

ಆಕಾಶ್ ಧರ್ಮಾಧಿಕಾರಿ ಎಂಬವರೇ ಸಿಂಗಾಪುರ ಬಿಟ್ಟು ಬೆಂಗಳೂರಿಗೆ ಬಂದು ನೆಲೆಸಿದ ಉದ್ಯಮಿ. ರಿಯಲ್ ಫಾಸ್ಟ್ ಎಂಬ ಕಂಪನಿಯ ಸಹ ಸ್ಥಾಪಕರಾಗಿರುವ ಅವರು ಈ ಹಿಂದೆ ಸಿಂಗಾಪುರದಲ್ಲಿ ಕುಟುಂಬದೊಂದಿಗೆ ಇದ್ದರು.

ತನ್ನ ಮಗಳು “ಜೀವನದ ಅನಿಶ್ಚಿತತೆಗಳಿಗೆ” ಒಗ್ಗಿಕೊಳ್ಳಬೇಕೆಂದು ಬಯಸಿದ್ದರಿಂದ ಬೆಂಗಳೂರಿಗೆ ಹೋಗಲು ನಿರ್ಧರಿಸಿದ್ದೇನೆ ಎಂದು ಆಕಾಶ್ ಹೇಳಿದ್ದಾರೆ. ಸಿಂಗಾಪುರ, ತನ್ನ ಮಗಳನ್ನು ತುಂಬಾ ಮೃದುಗೊಳಿಸುತ್ತಿದೆ ಎಂದು ಆಕಾಶ್ ಹೇಳಿದರು. ಅಲ್ಲದೆ, ಅವರು “ಭಾರತೀಯ ಅವ್ಯವಸ್ಥೆ” ಯನ್ನು ಅನುಭವಿಸಲು ಬಯಸುತ್ತಾರೆ ಎಂದಿದ್ದಾರೆ.

“ನನ್ನ ಮಗಳನ್ನು ಜೀವನದ ಅನಿಶ್ಚಿತತೆಗೆ ಒಗ್ಗಿಸಲು ನಾವು ಭಾಗಶಃ ಬೆಂಗಳೂರಿಗೆ ಶಿಫ್ಟ್ ಆಗುತ್ತಿದ್ದೇವೆ. ಸಿಂಗಾಪುರವು ತುಂಬಾ ಪರಿಪೂರ್ಣವಾಗಿದೆ. ಅದು ಅವಳನ್ನು ಮೃದುಗೊಳಿಸುತ್ತಿದೆ ಎಂದು ನಾವು ಭಾವಿಸಿದ್ದೇವೆ. ದುರದೃಷ್ಟವಶಾತ್ ನಾವು ಭಾರತೀಯ ಅವ್ಯವಸ್ಥೆ ಹೇಗಿದೆ ಎಂಬುದನ್ನು ಮರೆತುಬಿಟ್ಟಿದ್ದೇವೆ.. ನಾವೂ ಮೃದುವಾಗಿದ್ದೇವೆ” ಎಂದು ಆಕಾಶ್ ಪೋಸ್ಟ್ ಮಾಡಿದರು.

Advertisement

ಅವರ ಪೋಸ್ಟ್ ಒಂದು ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳೊಂದಿಗೆ ವೈರಲ್ ಆಗುತ್ತಿದ್ದಂತೆ, ಆಕಾಶ್ ತಮ್ಮ ಅಭಿಪ್ರಾಯವನ್ನು ಸ್ಪಷ್ಟಪಡಿಸಿದ್ದಾರೆ, “ನಾನು ಬೆಂಗಳೂರಿನಲ್ಲಿ ವಾಡಿಕೆಯಂತೆ ಮಾಡುವ ವಿಲಕ್ಷಣ ಮತ್ತು ಭಾವೋದ್ರಿಕ್ತ ಸಂಭಾಷಣೆಗಳನ್ನು ನಾನು ಮಿಸ್ ಮಾಡಿಕೊಂಡೆ. ಕಳೆದ ದಶಕದಲ್ಲಿ ನಾನು ಇಲ್ಲಿ ಕೆಲಸ ಮಾಡಿದ ಜನರೊಂದಿಗೆ ಕೆಲಸ ಮಾಡಲು ಬಯಸಿದ್ದೆ, ಸಿಂಗಾಪುರದಲ್ಲಿ ನಾನು ಅದನ್ನು ಮಿಸ್ ಮಾಡಿಕೊಳ್ಳುತ್ತಿದ್ದೆ” ಎಂದು ಆಕಾಶ್ ಹೇಳಿದರು.

ಆಕಾಶ್ ಧರ್ಮಾಧಿಕಾರಿ ಅವರ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಹಲವರು ಪರ ವಿರೋಧ ಚರ್ಚೆಗಳನ್ನು ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next