Advertisement
ನಲವತ್ತು ವರ್ಷಗಳ ಹಿಂದಿನ ಮಾತು. ಅದು ಮೇ ತಿಂಗಳ ಒಂದು ಬಿರುಬಿಸಿಲ ದಿನ. ಆ ಸಂದರ್ಭದಲ್ಲಿ ವಿದ್ಯಾರ್ಥಿಯಾಗಿದ್ದ ನಾನು, ಮಹಾರಾಷ್ಟ್ರದ ಕೊಲ್ಹಾಪುರದಿಂದ, ಔರಂಗಾಬಾದ್‌ಗೆ ಹೋಗಬೇಕಿತ್ತು. 40 ವರ್ಷಗಳ ಹಿಂದೆ ಅಂದರೆ ಬಿಡಿಸಿ ಹೇಳಬೇಕೆ? ಆಗ ಬಸ್‌ಗಳು ವಿರಳವಾಗಿದ್ದವು. ಆಗಷ್ಟೇ ಎಕ್ಸ್‌ಪೆಸ್ ಸರ್ವಿಸ್ ಎಂಬ ಸಾರಿಗೆ ಸೇವೆಯೂ ಚಾಲ್ತಿಗೆ ಬಂದಿತ್ತು.
Related Articles
Advertisement
ಹೀಗೇ ಹತ್ತಿಪ್ಪತ್ತು ನಿಮಿಷಗಳು ಕಳೆದವು. ಆಗಲೇ, ನನ್ನ ಭುಜವನ್ನು ಯಾರೋ ಮೆದುವಾಗಿ ತಟ್ಟಿದಂತಾಯಿತು. ಹಿಂದೆ ತಿರುಗಿ ನೋಡಿದರೆ-ನನ್ನ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಹಿರಿಯರು ಎದ್ದು ನಿಂತಿದ್ದರು. ನನ್ನ ಹೆಗಲು ತಟ್ಟಿದ್ದು ಅವರೇ ಎಂಬುದು ಖಾತ್ರಿಯಾಯಿತು. “ಏನ್ಸಾರ್?’ ಎಂದು ನಾನು ಕೇಳುವ ಮೊದಲೇ ಆ ಹಿರಿಯರು -“ನಿಂತು ನಿಂತು ಕಾಲು ನೋವು ಬಂದಿದೆಯೇನಪ್ಪಾ? ಅರ್ಧ ಗಂಟೆ ಕಾಲ ನನ್ನ ಸೀಟಿನಲ್ಲಿ ಕೂತುಕೋ. ದೇಹಕ್ಕೆ ಸ್ವಲ್ಪ ರೆಸ್ಟ್ ಸಿಕ್ಕಿದ್ರೆ ರಿಲ್ಯಾಕ್ಸ್ ಆಗುತ್ತೆ’ ಅಂದರು. ಅಂಥದೊಂದು ಮಾತಿಗೇ ಕಾದಿದ್ದವನಂತೆ ನಾನು ತಕ್ಷಣವೇ ಅವರ ಸೀಟ್‌ನಲ್ಲಿ ಕೂತುಬಿಟ್ಟೆ. ಅಷ್ಟೇ ಅಲ್ಲ: ಕೂತ ತಕ್ಷಣವೇ ನಿರಾಳ ಭಾವದಿಂದ ಹತ್ತಾರು ಮಂದಿಗೆ ಕೇಳಿಸುವಂತೆ ಉಸ್ಸಪ್ಪಾ… ಎಂದು ನಿಟ್ಟುಸಿರು ಬಿಟ್ಟೆ. ಬಸ್‌ನಲ್ಲಿದ್ದ ಹಲವರು, ಇದೇನಿದು ವಿಚಿತ್ರ ಎನ್ನುವಂತೆ ನನ್ನತ್ತ ತಿರುಗಿ ನೋಡಿದರು.
ನೋಡನೋಡುತ್ತಲೇ 40 ನಿಮಿಷಗಳು ಕಳೆದವು. ಅಷ್ಟು ಹೊತ್ತೂ ನನಗೆ ಸೀಟು ಬಿಟ್ಟುಕೊಟ್ಟಿದ್ದ ಹಿರಿಯರು, ಒಂದೂ ಮಾತಾಡದೆ ಮೌನವಾಗಿ ನಿಂತಿದ್ದರು. ಈ ವೇಳೆಗೆ ಸಾಕಷ್ಟು ವಿಶ್ರಾಂತಿ ಪಡೆದು ನಾನು ಫ್ರೆಶ್ ಆಗಿದ್ದೆ. ಗಡಿಬಿಡಿಯಿಂದ ಎದ್ದು- “ಸಾರ್, ನಿಮ್ಮಿಂದ ತುಂಬಾ ಉಪಕಾರ ಆಯ್ತು ಬನ್ನಿ ಕೂತ್ಕೊಳಿ’ ಅಂದೆ.
ನಾವಿಬ್ಬರೂ ನಮ್ಮ ಸ್ಥಳ ಬದಲಿಸಿಕೊಂಡು, ಪರಸ್ಪರ ನಗೆಯ ವಿನಿಮಯ ಮಾಡಿಕೊಂಡು ಎರಡು ನಿಮಿಷ ಕಳೆದಿರಲಿಲ್ಲ. ಆಗಲೇ, ನಾನು ಕನಸಿನಲ್ಲೂ ಊಹಿಸಿರದಿದ್ದ ಘಟನೆಯೊಂದು ನಡೆಯಿತು.
ನನ್ನೆದುರು ನಿಂತಿದ್ದ ವ್ಯಕ್ತಿಗೆ, ಮತ್ತೂಂದು ಸೀಟ್‌ನಲ್ಲಿ ಕುಳಿತಿದ್ದ ಪ್ರಯಾಣಿಕರೊಬ್ಬರು ಸೀಟ್ ಬಿಟ್ಟುಕೊಟ್ಟರು. “ಅಷ್ಟೊತ್ತಿಂದ ನಿಂತಿದೀರಾ! ಆಯಾಸ ಆಗಿರುತ್ತೆ. ಸ್ವಲ್ಪಹೊತ್ತು ಕೂತುಕೊಳ್ಳಿ’ ಎನ್ನುತ್ತಲೇ ಎದ್ದು ನಿಂತರು. ಆನಂತರದಲ್ಲಿ, ಇದೇ ರೀತಿಯ ವಿಸ್ಮಯಕಾರಿ ಪ್ರಸಂಗಗಳು ನಡೆಯುತ್ತಲೇ ಹೋದವು. ಆವರನ್ನು ನೋಡಿ ಇವರು, ಇವರನ್ನು ನೋಡಿ ಅವರು, ನಿಂತಿದ್ದ ಪ್ರಯಾಣಿಕರಿಗೆ ಸೀಟ್ ಬಿಟ್ಟುಕೊಟ್ಟರು. ಆವತ್ತು, ನಿಂತಿದ್ದರಲ್ಲ; ಆ ಇಪ್ಪತ್ತು ಮಂದಿಗೂ ಪ್ರತಿ ಗಂಟೆಗೆ ಒಮ್ಮೆಯಂತೆ ಇನ್ನೊಬ್ಬರ ಸೀಟ್‌ನಲ್ಲಿ ಕೂತು ಪ್ರಯಾಣಿಸುವ ಅವಕಾಶ ಲಭ್ಯವಾಯಿತು !
ಅದುವರೆಗೂ, ಪರಸ್ಪರ ಪರಿಚಯವೇ ಇಲ್ಲದಂತೆ ಮುಖ ಗಂಟಿಕ್ಕಿಕೊಂಡು ಶೂನ್ಯದತ್ತ ನೋಡುವವರಂತೆ ಕೂತಿದ್ದವರು, ಈಗ ಪರಸ್ಪರ ಚರ್ಚೆಗೆ ತೊಡಗಿದ್ದರು. ಮತಾöರೋ ಗಟ್ಟಿದನಿಯಲ್ಲಿ ಜೋಕ್ ಹೇಳಿ, ಬಸ್‌ನಲ್ಲಿ ಇದ್ದವರನ್ನೆಲ್ಲಾ ನಗಿಸಿದರು. ಈ ಮಧ್ಯೆ ಒಬ್ಬರು ರೇಡಿಯೋ ಚಾಲೂ ಮಾಡಿ. ಎಲ್ಲರಿಗೂ ಸುಮಧುರ ಚಿತ್ರಗೀತೆಗಳನ್ನೂ ಕೇಳಿಸಿದರು. ಒಂದೇ ವಯೋಮಾನದವರು ತಂತಮ್ಮ ಮನೆಯ ಸಮಸ್ಯೆ ಹೇಳಿಕೊಂಡು, ಅಷ್ಟರ ಮಟ್ಟಿಗೆ ಮನಸ್ಸು ಹಗುರ ಮಾಡಿಕೊಂಡರು. ಒಂದೇ ಮಾತಲ್ಲಿ ಹೇಳುವುದಾದರೆ, ಅವತ್ತು ಚಲಿಸುವ ಬಸ್‌ನಲ್ಲಿ ಮರೆಯಲಾಗದ ಮಧುರ ಕ್ಷಣವೊಂದು ತಂತಾನೇ ಸೃಷ್ಟಿಯಾಗಿತ್ತು.
ಕಡೆಗೊಮ್ಮೆ ಔರಂಗಾಬಾದ್ ಬಂದೇ ಬಿಟ್ಟಿತು. ಅದು ನಮ್ಮ ಬಸ್ ಹಾಗೂ ನಾವೆಲ್ಲರೂ ತಲುಪಬೇಕಿದ್ದ ಕಡೆಯ ನಿಲ್ದಾಣ. ಅದುವರೆಗೂ ಪರಸ್ಪರ ರೇಗಿಸುತ್ತಾ, ಕಾಲೆಳೆಯುತ್ತಾ, ಜೋಕ್ ಮಾಡುತ್ತಾ, ಹಾಡು ಹೇಳುತ್ತ, ಸುಖ-ದುಃಖ ಹಂಚಿಕೊಳ್ಳುತ್ತಾ ಖುಷಿಯಿಂದ ಇದ್ದವರು, ಈಗ ಭಾರವಾದ ಹೆಜ್ಜೆಯೊಂದಿಗೆ ಬಸ್ ಇಳಿಯತೊಡಗಿದ್ದರು. ಪರಸ್ಪರರನ್ನು ಬೀಳ್ಕೊಡುವ ಮೊದಲು, ನಿಮ್ಮ ಪರಿಚಯ ಆಗಿದ್ದು ಬಹಳ ಸಂತೋಷಾರೀ. ಮತ್ತೂಂದ್ಸಲ ಭೇಟಿಯಾಗೋಣ. ನಮ್ಮನ್ನು ಮರೆತುಬಿಡಬೇಡಿ ಎಂದು ಹೇಳುತ್ತಲೇ ಭಾವುಕರಾಗಿ ಕಣ್ತುಂಬಿಕೊಳ್ಳುತ್ತಿದ್ದರು. ಅವತ್ತು ಎಲ್ಲರ ಕಂಗಳಲ್ಲೂ ನೀರಿದ್ದವು. ಮಾತಲ್ಲಿ ವಿವರಿಸಲಾಗದ ಸಂತೋಷವೂ ಕಣ್ಣೊಳಗೇ ಇತ್ತು.
ಮೂಲ: ಜಗದೀಶ್ ಜೋಶಿಕನ್ನಡಕ್ಕೆ: ಎ.ಆರ್. ಮಣಿಕಾಂತ್