ಕೇಂದ್ರ ಸರ್ಕಾರ ಮಂಡಿಸದ ಆಯವ್ಯಯ ಶಿಕ್ಷಣದ ಖಾಸಗೀಕರಣ ಮತ್ತು ವ್ಯಾಪಾರೀಕರಣವನ್ನು ಮತ್ತಷ್ಟು ವೇಗವರ್ಧಿಸುವುದಲ್ಲದೆ ಶಿಕ್ಷಣವನ್ನು ಪೂರ್ಣವಾಗಿ ಖಾಸಗೀಕರಣಕ್ಕೆ ತೆರೆದಿಡುತ್ತದೆ. ಆಯವ್ಯದಲ್ಲಿ ಶಿಕ್ಷಣಕ್ಕೆ ಒಟ್ಟು 99,300 ಕೋಟಿಗಳನ್ನು ಒದಗಿಸಿದ್ದು ಕಳೆದ ಬಾರಿಗೆ ಹೋಲಿಸಿ ನೋಡಿದರೆ ಅತ್ಯಲ್ಪ, ಅಂದರೆ 5453 ಕೋಟಿ ಹೆಚ್ಚಳ ಕಂಡಿದೆ. ಶೇಕಡವಾರು ಹೆಚ್ಚಳ ಕೇವಲ 5.8 .
ಅತ್ಯಂತ ಅಪಾಯಕಾರಿ ಬೆಳವಣಿಗೆಯೆಂದರೆ ಶಿಕ್ಷಣಕ್ಕೆ ಹೊರಗಿನಿಂದ ಸಾಲ ಪಡೆಯುವ ಮತ್ತು ವಿದೇಶಿ ನೇರ ಬಂಡವಾಳವನ್ನು ಆಹ್ವಾನಿಸುವ ಪ್ರಸ್ತಾವನೆ . ಶಿಕ್ಷಣ ಕ್ಷೇತ್ರಕ್ಕೆ ಹಣ ಹೂಡಿಕೆ ದೇಶದ ಆದ್ಯತೆಯಲ್ಲವೆಂಬ ಸಂದೇಶವನ್ನು ಕೇಂದ್ರ ಸರ್ಕಾರ ಈ ಆಯವ್ಯಯದ ಮೂಲಕ ರುಜುವಾತು ಪಡಿಸಿದೆ. ಜಗತ್ತಿನಲ್ಲಿ ಯಾವ ರಾಷ್ಟ್ರವು ಹೊರಗಿನಿಂದ ಸಾಲ ಪಡೆದು ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸಿದ ಉದಾಹರಣೆಗಳಿಲ್ಲ .
ನಿನ್ನೆಯಷ್ಟೆ ಬಿಡುಗಡೆಯಾದ ಆರ್ಥಿಕ ಸಮೀಕ್ಷೆ 2019 -20 ರ ಅನ್ವಯ ಪ್ರಾಥಮಿಕ ಹಂತದಲ್ಲಿ ಸರ್ಕಾರ ಶಿಕ್ಷಣಕ್ಕೆ ಸರಾಸರಿ ವಾರ್ಷಿಕವಾಗಿ 1253 ರೂಗಳನ್ನು ಖರ್ಚು ಮಾಡುತ್ತಿದ್ದು ಅದೇ ಖಾಸಗಿ ಶಾಲೆಯಲ್ಲಿ ವಾರ್ಷಿಕ ಸರಾಸರಿ ವೆಚ್ಚ 12,889 ರೂಗಳು. ಇಂಥಹ ಪರಿಸ್ಥಿತಿಯಲ್ಲಿ ಈಗ ಆಯವ್ಯದಲ್ಲಿ ಮೀಸಲಿಟ್ಟಿರುವ ಹಣವನ್ನು ನೋಡಿದರೆ ‘ ಆನೆಗೆ ಮೂರು ಕಾಸು ಮಜ್ಜಿಗೆ’ ಎಂಬಂತಾಗಿದೆ.
ಒಟ್ಟಾರೆ , ಈ ಆಯವ್ಯಯ ಶಿಕ್ಷಣದ ಖಾಸಗೀಕರಣ, ವ್ಯಾಪಾರೀಕರಣ, ವಿದೇಶಿ ಸಾಲ ಪಡೆಯುವ ಪ್ರಸ್ತಾವನೆ, ಅವಕಾಶ ವಂಚಿತ ಸಮುದಾಯಕ್ಕೆ ನೇರ ಆನ್-ಲೈನ್ ಉನ್ನತ ಶಿಕ್ಷಣ,ವಿದೇಶಿ ನೇರ ಬಂಡವಾಳ ಹಾಗು ಸಾರ್ವಜನಿಕ -ಖಾಸಗಿ ಸಹಭಾಗಿತ್ವದ ಮೂಲಕ ಶಿಕ್ಷಣವನ್ನು ಪೂರ್ಣವಾಗಿ ಮುಕ್ತ ಮಾರುಕಟ್ಟೆಗೆ ತೆರೆದಿಡುವ ನೀಲಿ ನಕಾಶೆಯಂತಿದೆ .ಇದು ಧೀರ್ಘಕಾಲದಲ್ಲಿ ಸಾಮಾಜಿಕ , ಆರ್ಥಿಕ ಮತ್ತು ದೇಶೀ ಸಂಸ್ಕೃತಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರ
– ನಿರಂಜನಾರಾಧ್ಯ .ವಿ.ಪಿ
ಸೀನಿಯರ್ ಫೆಲೋ ಮಗು ಮತ್ತು ಕಾನೂನು ಕೇಂದ್ರ
ರಾಷ್ಟ್ರೀಯ ಕಾನೂನು ಶಾಲೆ