Advertisement

ಅನೈರ್ಮಲ್ಯ ಕಾರಣದಿಂದ ಹೆಚ್ಚುತ್ತಿದೆ ಡೆಂಗ್ಯೂ ಜ್ವರ: ಬಾಲಕ ಬಲಿ

11:20 AM Oct 18, 2019 | keerthan |

ಗಂಗಾವತಿ: ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ ಬಾಲಕ ಮೃತಪಟ್ಟ ಘಟನೆ ತಾಲೂಕಿನ ಶ್ರೀ ರಾಮನಗರದಲ್ಲಿ ಜರುಗಿದೆ.

Advertisement

ಇಮ್ತಿಯಾಜ್ (11) ಮೃತಪಟ್ಟ ಬಾಲಕ. ಶ್ರೀರಾಮನಗರದ 2ನೇ ವಾರ್ಡಿನ ನಿವಾಸಿಯಾಗಿದ್ದಾರೆ. ತೀವ್ರ ಜ್ವರದ ಕಾರಣ ಶ್ರೀರಾಮನಗರದ ಸರಕಾರಿ ಆಸ್ಪತ್ರೆಗೆ ಬಾಲಕನನ್ನು ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಿಸದ ಕಾರಣ ಗಂಗಾವತಿ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೇ ಗುರುವಾರ ರಾತ್ರಿ ಇಮ್ತಿಯಾಜ್ ಮೃತಪಟ್ಟಿದ್ದಾನೆ.

ಅನೈರ್ಮಲ್ಯ ಕಾರಣ:ಶ್ರೀರಾಮನಗರದ ಹಾಗು ಸುತ್ತಲಿನ‌ ಊರುಗಳಲ್ಲಿ ಕಳೆದ ಹಲವು ದಿನಗಳಿಂದ ವಿಪರೀತ ಮಳೆ ಸುರಿಯುತ್ತಿದೆ. ಜತೆಗೆ ಇಡೀ ಗ್ರಾಮದಲ್ಲಿರುವ ಕೋಳಿ ಅಂಗಡಿ ತ್ಯಾಜ್ಯ ಎಲ್ಲೆಂದರಲ್ಲಿ ಎಸೆಯುವ ಮೂಲಕ ಅನೈರ್ಮಲ್ಯ ಉಂಟಾಗಿದ್ದು ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಇದರಿಂದ ಮಕ್ಕಳು ವೃದ್ದರಿಗೆ ಜ್ವರದ ಪ್ರಕರಣ ಹೆಚ್ಚಾಗಿದ್ದು ಪ್ರತಿ ದಿನ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಜನರು ದಾಖಲಾಗುತ್ತಿದ್ದಾರೆ.

ಡೆಂಗ್ಯೂ ಜ್ವರದಿಂದ ಮೃತಪಟ್ಟ ಇಮ್ತೀಯಾಜ್ ನಿವಾಸಕ್ಕೆ ತಾ.ಪಂ ಸದಸ್ಯ ಮಹಮದ್ವರಫಿ, ಗ್ರಾ.ಪಂ.ಅಧ್ಯಕ್ಷ ಶ್ರೀ ನಿವಾಸ ಭೇಟಿ ನೀಡಿ ಪಾಲಕರಿಗೆ ಸಾಂತ್ವನ ಹೇಳಿದರು. ಗ್ರಾಮದಲ್ಲಿ ಸ್ವಚ್ಛತೆ ಕಾಪಾಡಲು ಆರೋಗ್ಯ ಇಲಾಖೆ ಜತೆಗೂಡಿ ಜನರಿಗೆ ಜಾಗೃತಿ ಮೂಡಿಸಲಾಗುತ್ತದೆ. ಜ್ವರಕ್ಕೆ ಹಲವು ಜನರು ಚಿಕಿತ್ಸೆ ಪಡೆಯುತ್ತಿದ್ದು ಇನ್ನಷ್ಟು ಔಷಧಿ ಒದಗಿಸುವಂತೆ ಕೋರಲಾಗುತ್ತದೆ ಎಂದು ಉದಯವಾಣಿಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next