Advertisement

ಒಂದು ಪುಸ್ತಕ ನೂರು ಸ್ನೇಹಿತರಿದ್ದಂತೆ: ಡಾ|ಗುಬ್ಬಿ

12:29 PM Dec 06, 2021 | Team Udayavani |

ಸೇಡಂ: ಮಕ್ಕಳಲ್ಲಿರುವ ಪ್ರತಿಭೆ ಗುರುತಿಸುವ ಕೆಲಸವಾಗಬೇಕು. ಒಂದು ಪುಸ್ತಕ ನೂರು ಸ್ನೇಹಿತರಿಗೆ ಸಮ ಎನ್ನುವುದನ್ನು ಯುವ ಸಮೂಹ ಅರಿಯಬೇಕು ವೈದ್ಯ, ಲೇಖಕ ಡಾ| ಎಸ್‌.ಎಸ್‌ ಗುಬ್ಬಿ ಹೇಳಿದರು.

Advertisement

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನೃಪತುಂಗ ಅಧ್ಯಯನ ಸಂಸ್ಥೆ, ಮಹಾಭೋ ಪ್ರಕಾಶನ, ಮಾತೋಶ್ರೀ ಈರಮ್ಮ ವಡ್ಡನಕೇರಿ ಪ್ರತಿಷ್ಠಾನದ ಆಶ್ರಯದಲ್ಲಿ ನಡೆದ ಸಾಹಿತಿಗಳಾದ ಡಾ| ಬಸವರಾಜ ಕಲೆಗಾರ ರಚಿಸಿರುವ ಕಲಾಧ್ಯಾನ ಮತ್ತು ಅನಾವರಣ, ಡಾ| ಪದ್ಮಾವತಿ ಕಲೆಗಾರ ರಚಿಸಿರುವ ನೆಲ ಸಂಸ್ಕೃತಿಯ ಚಿಂತನೆ ಮತ್ತು ರೇಖಾಕ್ಷಿ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.

ದುಡ್ಡು ಸಂಪಾದಿಸುವವರನ್ನು ಶ್ರೀಮಂತರೆನ್ನಲು ಸಾಧ್ಯವಿಲ್ಲ. ವಿದ್ಯಾ ಸಂಪಾದನೆಯೇ ಬಹುದೊಡ್ಡ ಶ್ರೀಮಂತಿಕೆಯಾಗಿದೆ. ಜ್ಞಾನವುಳ್ಳವನಿಗೆ ಯಾವತ್ತೂ ಬಡತನ ಬರುವುದೇ ಇಲ್ಲ ಎಂದರು.

ಕಾಡಾ ಮಾಜಿ ಅಧ್ಯಕ್ಷ ಮಹಾಂತಪ್ಪ ಸಂಗಾವಿ ಮಾತನಾಡಿ, ಸಾಧನೆ ಹಾದಿಯಲ್ಲಿ ಸಾಗುವುದರಿಂದದ ಮನುಷ್ಯನ ಬದುಕು ಶ್ರೇಷ್ಠ ಎನಿಸಿಕೊಳ್ಳುತ್ತದೆ. ಐಎಎಸ್‌, ಐಪಿಎಸ್‌, ಸಾಹಿತಿ ಏನಾದರೂ ಆಗಲು ಸಾಧ್ಯವಾಗುತ್ತದೆ. ಜೀವನದಲ್ಲಿ ಉತ್ತಮ ಸಾಧನೆ ಮಾಡಿದ ಸಾಧಕರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲ ಮಾಣಿಕರಾವ್‌ ಕುಲಕರ್ಣಿ, ಮಹಾಬೋ  ಪ್ರಕಾಶಕನದ ಪ್ರಕಾಶಕ ಡಾ| ಚಂದ್ರಶೇಖರ ದೊಡ್ಡಮನಿ, ಕಲಬುರಗಿ ರಂಗಾಯಣ ನಿರ್ದೇಶಕ ಪ್ರಭಾಕರ ಜೋಶಿ, ಸಾಹಿತಿ, ಹಿರಿಯ ಪತ್ರಕರ್ತ ಮಹಿಪಾಲರೆಡ್ಡಿ ಮುನ್ನೂರ ಮಾತನಾಡಿದರು.

Advertisement

ಇತಿಹಾಸ ತಜ್ಞ ಡಾ| ಶ್ರೀಶೈಲ ಬಿರಾದಾರ, ರಾಯಚೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಸಹಾಯಕ ಅಧ್ಯಾಪಕ ಡಾ| ಶರಣಪ್ಪ ಚಲುವಾದಿ, ಎನ್‌.ಟಿ ಕಾಲೇಜಿನ ಸಮಾಜಶಾಸ್ತ್ರ ಪ್ರಾಧ್ಯಾಪಕಿ ಪ್ರೊ| ಶೋಭಾದೇವಿ ಚೆಕ್ಕಿ, ಕಾಲೇಜಿನ ಸಹ ಪ್ರಾಧ್ಯಾಪಕ ಡಾ| ಬಿ.ಆರ್‌ ಅಣ್ಣಾಸಾಗರ, ಪುರಸಭೆ ಸದಸ್ಯ ರವೀಂದ್ರ ಜಡೇಕರ್‌ ವೇದಿಕೆಯಲ್ಲಿದ್ದರು. ವಿದ್ಯಾರ್ಥಿನಿ ಗೀತಾ ಪ್ರಾರ್ಥಿಸಿದರು, ಲೇಖಕಿ ಡಾ| ಪದ್ಮಾವತಿ ಕಲೆಗಾರ ಸ್ವಾಗತಿಸಿದರು, ಅಂಜನಾ ಜಡೇಕರ್‌ ನಿರೂಪಿಸಿದರು, ಸಾಹಿತಿ ಬಸವರಾಜ ಕಲೆಗಾರ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next