Advertisement

bomb cyclone: ಶೀಘ್ರ ಅಮೆರಿಕ ಕರಾವಳೀಲಿ “ಬಾಂಬ್‌ ಸೈಕ್ಲೋನ್‌’ ಸ್ಫೋಟ!

08:56 PM Nov 19, 2024 | Team Udayavani |

ವಾಷಿಂಗ್ಟನ್‌: ಅಮೆರಿಕದ ಪಶ್ಚಿಮ ಕರಾವಳಿಯಲ್ಲಿ ತಾಪಮಾನ ದಿಢೀರ್‌ ಕುಸಿತ ಕಂಡಿದ್ದು, ಶೀಘ್ರದಲ್ಲೇ ಇಲ್ಲಿಗೆ “ಬಾಂಬ್‌ ಸೈಕ್ಲೋನ್‌’ ಅಪ್ಪಳಿಸುವ ಭೀತಿ ಎದುರಾಗಿದೆ. ಕ್ಯಾಲಿಫೋರ್ನಿಯಾ ಸೇರಿದಂತೆ ಹಲವು ನಗರಗಳಿಗೆ ಹವಾಮಾನ ಇಲಾಖೆ ಈ ಕುರಿತು ಎಚ್ಚರಿಕೆ ನೀಡಿದೆ.

Advertisement

ಈಗಾಗಲೇ ಪೆಸಿಫಿಕ್‌ ಸಾಗರದಲ್ಲಿ ಚಂಡಮಾರುತ ಸೃಷ್ಟಿಯಾಗಿದ್ದು, ಬುಧವಾರ ಅಥವಾ ಗುರುವಾರ ಇದು ತೀರಕ್ಕಪ್ಪಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಚಂಡಮಾರುತ ಬರೋಬ್ಬರಿ 320 ಲಕ್ಷ ಕೋಟಿ ಲೀ. ನೀರನ್ನು ಹೊತ್ತು ತರುತ್ತಿದ್ದು, ಕರಾವಳಿ ನಗರಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗುವ ಸಂಭವ ಹೆಚ್ಚಾಗಿದೆ. ಇದಲ್ಲದೇ ಈ ವೇಳೆ ಗಾಳಿಯ ವೇಗವೂ ಸಹ ವಿಪರೀತವಾಗಿರಲಿದ್ದು, ಎತ್ತರದ ಬೆಟ್ಟಗಳು ಮಂಜಿನಿಂದ ಆವೃತವಾಗಲಿವೆ ಎಂದು ಹವಾಮಾನ ಇಲಾಖೆ ಹೇಳಿದೆ.

ಏನಿದು ಬಾಂಬ್‌ ಸೈಕ್ಲೋನ್‌?:

ಒಂದೇ ದಿನದಲ್ಲಿ ತಾಪಮಾನ ಗರಿಷ್ಠ ಪ್ರಮಾಣದಲ್ಲಿ ಕುಸಿತ ಕಂಡಾಗ ಸೃಷ್ಟಿಯಾಗುವ ಚಂಡಮಾರುತವನ್ನು ಬಾಂಬ್‌ ಸೈಕ್ಲೋನ್‌ ಎನ್ನಲಾಗುತ್ತದೆ. ಬಾಂಬ್‌ ಸ್ಫೋಟಗೊಂಡಾಗ ಸೃಷ್ಟಿಸುವ ಅನಾಹುತವನ್ನು ಈ ಚಂಡಮಾರುತ ಸೃಷ್ಟಿ ಮಾಡುತ್ತದೆ. ಹೀಗಾಗಿ ಇದಕ್ಕೆ ಈ ಹೆಸರಿಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next