Advertisement

ಕಾಬೂಲ್‌ನಲ್ಲಿ  ಮತ್ತೆ ಭಾರೀ ಸ್ಫೋಟ 

12:20 AM Aug 30, 2021 | Team Udayavani |

ಕಾಬೂಲ್‌: ಸರಣಿ ಬಾಂಬ್‌ ಸ್ಫೋಟವು 180ಕ್ಕೂ ಹೆಚ್ಚು ಮಂದಿಯನ್ನು ಬಲಿ ಪಡೆದ ಮೂರೇ ದಿನಗಳಲ್ಲಿ ಅಫ್ಘಾನ್‌ ಮತ್ತೂಮ್ಮೆ ಬೆಚ್ಚಿಬಿದ್ದಿದೆ. ರವಿವಾರ ಸಂಜೆ ಕಾಬೂಲ್‌ ವಿಮಾನ ನಿಲ್ದಾಣದ ಬಳಿ ಮತ್ತೂಂದು ಸ್ಫೋಟ ಸಂಭವಿಸಿದ್ದು, ನಾಲ್ವರು ಮಕ್ಕಳ ಸಹಿತ 6 ಮಂದಿ ಅಸುನೀಗಿದ್ದಾರೆ. ಈ ಸ್ಫೋಟದ ಹಿಂದೆಯೂ ಐಸಿಸ್‌-ಕೆ ಉಗ್ರ ಸಂಘಟನೆಯ ಕೈವಾಡವಿರುವ ಶಂಕೆಯಿದೆ.

Advertisement

ಇದರ ಬೆನ್ನಲ್ಲೇ ನಡೆಯಲಿದ್ದ ಇನ್ನೊಂದು ಭೀಕರ ಆತ್ಮಾಹುತಿ ದಾಳಿಯನ್ನು ತಡೆಯುವಲ್ಲಿ ಅಮೆರಿಕದ ಪಡೆ ಯಶಸ್ವಿಯಾಗಿದೆ. 6 ಆತ್ಮಾಹುತಿ ದಾಳಿಕೋರರು ಮತ್ತು ಭಾರೀ ಪ್ರಮಾಣದ ಸ್ಫೋಟಕ ಹೊತ್ತು ವಿಮಾನ ನಿಲ್ದಾಣದ ಕಡೆಗೆ ಬರುತ್ತಿದ್ದ ವಾಹನದ ಮೇಲೆ ಅಮೆರಿಕವು ಪೈಲಟ್‌ ರಹಿತ ವಾಯುದಾಳಿ ನಡೆಸಿದೆ. ಅಮೆರಿಕದ ಸೈನಿಕ ರನ್ನು ಗುರಿಯಾಗಿಸಿ ದಾಳಿ ಉಗ್ರರ ಸಂಚಾಗಿತ್ತು.

ಮತ್ತೂಂದು ದಾಳಿ ಸಂಭವಿಸುವ ಸಾಧ್ಯತೆಯಿದೆ ಎಂದು ಅಮೆರಿಕದ ಅಧ್ಯಕ್ಷ ಬೈಡೆನ್‌ ಎಚ್ಚರಿಕೆ ನೀಡಿದ ಬೆನ್ನಲ್ಲೇ ಈ ಬೆಳವಣಿಗೆಗಳು ನಡೆದಿವೆ.

ಕಟ್ಟಡಕ್ಕೆ ಅಪ್ಪಳಿಸಿದ ರಾಕೆಟ್‌ :

ರವಿವಾರ ಸಂಜೆ ವೇಳೆಗೆ ವಿಮಾನ ನಿಲ್ದಾಣಕ್ಕೆ ಸಮೀಪದ ಕಟ್ಟಡವೊಂದರ ಮೇಲೆ ರಾಕೆಟ್‌ ಅಪ್ಪಳಿಸಿದೆ. ಸ್ಫೋಟದ ತೀವ್ರತೆಯಿಂದ ವಿಮಾನ ನಿಲ್ದಾಣದ ಸುತ್ತಲೂ ದಟ್ಟ ಹೊಗೆ ಆವರಿಸಿತ್ತು. ದಾಳಿಯಲ್ಲಿ ನಾಲ್ವರು ಮಕ್ಕಳ ಸಹಿತ 6 ಮಂದಿ ಸಾವಿಗೀಡಾಗಿದ್ದು, ಹಲವರು ಗಾಯಗೊಂಡಿದ್ದಾರೆ.

Advertisement

ಗಡಿಯಲ್ಲಿ ಗುಂಡಿನ ಚಕಮಕಿ:

ಅಫ್ಘಾನ್‌ ಮತ್ತು  ಪಾಕ್‌ ಗಡಿಯಲ್ಲಿ ರವಿವಾರ ರಾತ್ರಿ ಉಗ್ರರು ಗುಂಡಿನ ದಾಳಿ ನಡೆಸಿದ್ದು, ಪಾಕಿಸ್ಥಾನದ ಇಬ್ಬರು ಸೈನಿಕರು ಮೃತಪಟ್ಟಿದ್ದಾರೆ. ಮೂವರು ಉಗ್ರರನ್ನು ಹತ್ಯೆಗೈದಿರುವುದಾಗಿ ಪಾಕ್‌ ಸೇನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next