Advertisement

iPhone: ಚೀಲದ ತುಂಬಾ ಹಣತಂದು ಐಫೋನ್‌ ಖರೀದಿಸಿದ ಭಿಕ್ಷುಕ!

08:14 PM Oct 16, 2023 | Team Udayavani |

ನವದೆಹಲಿ: ಆ್ಯಪಲ್‌ ಐಫೋನ್‌ನ ಕ್ರೇಜ್‌ ಎಷ್ಟರ ಮಟ್ಟಿಗೆ ಇದೆಯೆಂದರೆ ಯುವಕರಿಂದ ಹಿಡಿದು-ಹಿರಿಯರವರೆಗೆ ಎಲ್ಲರ ಕೈನಲ್ಲೂ ಐಫೋನ್‌ ರಾರಾಜಿಸುತ್ತಿದೆ! ಅಂಥ ಐಫೋನ್‌ ಖರೀದಿಸಲು ಭಿಕ್ಷುಕನೊಬ್ಬ ಚೀಲದ ತುಂಬಾ ನಾಣ್ಯಗಳನ್ನು ತುಂಬಿಕೊಂಡು ಹೋಗಿ ಎಲೆಕ್ಟ್ರಾನಿಕ್‌ ಸ್ಟೋರ್‌ನಲ್ಲಿ ಸುರಿದಿರುವ ವಿಡಿಯೋ ಒಂದು ಜಾಲತಾಣದಲ್ಲಿ ವೈರಲ್‌ ಆಗಿದೆ.

Advertisement

ವಿಡಿಯೋದಲ್ಲಿ ನೋಡುವಂತೆ ಭಿಕ್ಷುಕನಂತೆ ಕಾಣುವ ವ್ಯಕ್ತಿ, ನಾಣ್ಯಗಳನ್ನು ಕೊಂಡೊಯ್ದು ಸುರಿಯುತ್ತಾನೆ. ಅಚ್ಚರಿ ಕಂಗಳಿಂದ ಆತನನ್ನು ನೋಡುತ್ತಿದ್ದ ಸ್ಟೋರ್‌ ಸಿಬ್ಬಂದಿ ಮತ್ತು ಗ್ರಾಹಕರು ಹಣವನ್ನು ಎಣಿಸಲು ಆತನಿಗೆ ಸಹಾಯ ಮಾಡಿ, ಬಳಿಕ ಆತ ಆ್ಯಪಲ್‌ ಐಫೋನ್‌-15 ಅನ್ನು ಖರೀದಿಸುತ್ತಾನೆ. ವಾಸ್ತವದಲ್ಲಿ ಇದೊಂದು ಸ್ಕ್ರಿಪ್ಟೆಡ್‌ ವಿಡಿಯೋ ಆಗಿದ್ದು, ಭಿಕ್ಷುಕನಂತೆ ವೇಷ ಮರಿಸಿಕೊಂಡ ವ್ಯಕ್ತಿ ಈ ವಿಡಿಯೋ ಕಂಟೆಂಟ್‌ ರಚಿಸಿದ್ದಾರೆ. ಜಾಲತಾಣದಲ್ಲಿ ಇದು ಭಾರೀ ವೈರಲ್‌ ಆಗಿದ್ದು, ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ಸ್ವೀಕರಿಸಿದೆ.

 

Advertisement

Udayavani is now on Telegram. Click here to join our channel and stay updated with the latest news.

Next