Advertisement
ನಗರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ 2021-22ರ ಕೇಂದ್ರ ಬಜೆಟ್ ಕುರಿತಂತೆ ಪತ್ರಕರ್ತರ ಜೊತೆ ಮಾತನಾಡಿದ ಅವರು, ಚಹಾ ಕಾರ್ಮಿಕರ ಕಲ್ಯಾಣಕ್ಕೆ 1,000 ಕೋಟಿ ನೀಡಲಾಗಿದೆ. ಪರಿಶಿಷ್ಟ ಪಂಗಡದವರಿಗೆ 758 ಮಾದರಿ ಶಾಲೆ ತೆರೆಯುತ್ತಿರುವುದು ಮಹತ್ವದ ಕ್ರಮವಾಗಿದೆ. 34 ವರ್ಷಗಳ ನಂತರ ಎರಡು ಬಜೆಟ್ ನಲ್ಲಿ ಶಿಕ್ಷಣಕ್ಕೆ ವಿಶೇಷ ಒತ್ತು ನೀಡಿದ್ದು, 93,500 ಕೋಟಿ ಹಣ ನೀಡಲಾಗುತ್ತಿದೆ ಎಂದು ವಿವರಿಸಿದರು.
Related Articles
Advertisement
ಬೇರೆ ದೇಶಗಳಿಗೆ ಹೋಲಿಸಿದರೆ ಕೋವಿಡ್ ನಂತರ ಆರ್ಥಿಕ ಪುನಶ್ಚೇತನ ಹೊಂದುತ್ತಿರುವ ಪ್ರಮುಖ ದೇಶವಾಗಿ ಭಾರತ ಹೊರಹೊಮ್ಮಿದೆ. ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿಯವರ ಅತ್ಯುತ್ತಮ ಕಾರ್ಯವೈಖರಿ, ಕಾರ್ಯನಿರ್ವಹಣೆ ಇದಕ್ಕೆ ಕಾರಣ. ಮಹಿಳೆ, ದಲಿತರ, ಹಿಂದುಳಿದವರ ಪರ, ಗ್ರಾಮೀಣರ ಪರ ಬಜೆಟ್ ಇದಾಗಿದೆ. ಹಾಗೆಂದು ನಗರ ಪ್ರದೇಶಗಳನ್ನು ಕಡೆಗಣಿಸಿಲ್ಲ. 500 ಅಮೃತ ನಗರ ಘೋಷಣೆ ಮೂಲಕ ಎಲ್ಲಾ ರೀತಿಯ ಮೂಲಸೌಕರ್ಯ ನೀಡಲಾಗುತ್ತಿದೆ. ಶಿಕ್ಷಣ, ಆರೋಗ್ಯ, ಕೃಷಿ ಸೇರಿ ಎಲ್ಲಾ ಕ್ಷೇತ್ರಗಳಿಗೆ ಆದ್ಯತೆ ನೀಡಲಾಗಿದೆ ಎಂದರು.
ಪಕ್ಷದ ರಾಜ್ಯ ವಕ್ತಾರರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರು, ದೇಶದ ಆರ್ಥಿಕ ಪುನಶ್ಚೇತನಕ್ಕೆ ಪೂರಕ ಯೋಜನೆಗಳನ್ನು ಪ್ರಕಟಿಸಿದ್ದಾರೆ ಎಂದು ಅಭಿನಂದನೆ ಸಲ್ಲಿಸಿದರು. ಬೆಂಗಳೂರಿಗೆ ಮೆಟ್ರೊ ವಿಸ್ತರಣೆಗೆ 14,788 ಕೋಟಿ ರೂಪಾಯಿ, ಬೆಂಗಳೂರು- ಮಂಗಳೂರು ಹೆದ್ದಾರಿಯ ಶಿರಾಡಿ ಘಾಟ್ 6 ಸುರಂಗ ನಿರ್ಮಾಣಕ್ಕೆ 10 ಸಾವಿರ ಕೋಟಿ ರೂಪಾಯಿ, ಉತ್ತರ ಕರ್ನಾಟಕದಲ್ಲಿ 23.000 ಕೋಟಿ ರೂಪಾಯಿ ವೆಚ್ಚದಲ್ಲಿ ಹೆದ್ದಾರಿಗಳ ನಿರ್ಮಾಣಕ್ಕೆ ಹಣ ನೀಡಿದ್ದನ್ನು ಸ್ವಾಗತಿಸುವುದಾಗಿ ತಿಳಿಸಿದರು.
ಇದನ್ನೂ ಓದಿ:ಮಂಗಳೂರು: ದೇವಸ್ಥಾನದ ಹುಂಡಿ ಕಳ್ಳತನ, ಭಗವಧ್ವಜಕ್ಕೆ ಅವಮಾನ ಮಾಡಿದ್ದ ಇಬ್ಬರು ಆರೋಪಿಗಳ ಬಂಧನ
ಆರ್ಥಿಕ ಪುನಶ್ಚೇತನಕ್ಕೆ ಒತ್ತು ಹಾಗೂ ಜನತೆಯ ಮನಸ್ಸಿನಲ್ಲಿ ವಿಶ್ವಾಸ ಮೂಡಿಸುವ ಬಜೆಟ್ ಇದಾಗಿದೆ ಎಂದು ತಿಳಿಸಿದರು.